ರೂಪಾಂತರ ಚಿತ್ರದ ಮೂಲಕ ಮತ್ತೆ ಕನ್ನಡಕ್ಕೆ ಕಮ್ ಬ್ಯಾಕ್ ಮಾಡಿದ ಸಂಗೀತ ಭಟ್!
ಹಲವು ವರ್ಷಗಳ ನಂತರ ಕಮ್ ಬ್ಯಾಕ್ ಮಾಡುತ್ತಿರುವ ನಟಿ ಸಂಗೀತ ಭಟ್. ಸಿನಿಮಾ ಚಿತ್ರೀಕರಣದ ಫೋಟೋ ಹಂಚಿಕೊಂಡ ಚೆಲುವೆ.
ಕನ್ನಡ ಚಿತ್ರರಂಗದ ಸಿಂಪಲ್ ಹುಡುಗಿ ಸಂಗೀತ ಭಟ್ ಕೆಲವೊಂದು ಕಾರಣಗಳಿಂದ ಲೈಮ್‌ಲೈಟ್‌ನಿಂದ ದೂರ ಉಳಿದುಕೊಂಡಿದ್ದರು. ಆದರೀಗ ಸಂತಸದಿಂದ ಕಮ್ ಬ್ಯಾಕ್ ಮಾಡುತ್ತಿರುವ ವಿಚಾರ ಹಂಚಿಕೊಂಡಿದ್ದಾರೆ.
'ಈ ಪೋಸ್ಟ್‌ನೊಂದಿಗೆ, ನನ್ನ ಬಹುನಿರೀಕ್ಷಿತ ಚಲನಚಿತ್ರಗಳಿಗೆ ಪುನರಾಗಮನವನ್ನು ಘೋಷಿಸಲು ನಾನು ತುಂಬ ಸಮಯ ಕಾತರದಿಂದ ಕಾಯುತ್ತಿದ್ದೆ. ನಟನೆ ಯಾವಾಗಲೂ ನನ್ನ ಮೊದಲ ಪ್ರೀತಿ, ಅದರಿಂದ ದೂರ ಉಳಿಯುವುದು ನನ್ನ ಜೀವನದ ಕಠಿಣ ಭಾಗವಾಗಿತ್ತು'
'ಈ ಹಿಂದೆ ನನ್ನ ಕೆಲಸಕ್ಕೆ ತುಂಬಾ ಮೆಚ್ಚುಗೆ ಹಾಗು ಬೆಂಬಲ ನೀಡಿದ್ದೀರಿ. ನಿಮ್ಮ ಪ್ರೀತಿ,ವಿಶ್ವಾಸ ಹಾಗೂ ಬೆಂಬಲ ಸದಾಕಾಲ ಹೀಗೆ ನನ್ನ ಕೆಲಸದ ಮೇಲೆ ಇರುತ್ತದೆ ಎಂದು ನಾನು ಬಲವಾಗಿ ನಂಬುತ್ತೇನೆ.'
'ನಾನು ಭಾಗವಾಗಿರುವ ಪ್ರಸ್ತುತ ಚಲನಚಿತ್ರದ ಕೆಲವು ಚಿತ್ರಪಟಗಳನ್ನೂ ಹಂಚಿಕೊಳ್ಳುತ್ತಿದ್ದೇನೆ. ಚಿತ್ರೀಕರಣದ ಅಂತಿಮ ಹಂತದಲ್ಲಿದ್ದೇವೆ. ನಾನು ಪ್ರಸ್ತುತ ಭಾಗವಾಗಿರುವ ಇತರ ಚಿತ್ರಗಳನ್ನು ಶೀಘ್ರದಲ್ಲೇ ನಿಮ್ಮೊಂದಿಗೆ ಹಂಚಿಕೊಳ್ಳುತ್ತೇನೆ. ಸುಂದರ ನೆನಪುಗಳಿಗಾಗಿ "ರೂಪಾಂತರ" ತಂಡಕ್ಕೆ ಧನ್ಯವಾದಗಳು' ಎಂದಿದ್ದಾರೆ ಸಂಗೀತ.
ರೂಪಾಂತರ ಸಿನಿಮಾ ನಿರ್ದೇಶನ ಮಾಡುತ್ತಿರುವುದು ಶ್ರೀನಿವಾಸ್, ನಿರ್ಮಾಣ ಮಾಡುತ್ತಿರುವುದು ಹಾಸನ್ ಶ್ರೀನಿವಾಸ್ ಮತ್ತು ಡಿಓಪಿ ರಮೇಶ್ ರಾಜ್.
#MeToo ಘಟನೆ ಬಳಿಕ ಸಂಗೀತ ಭಟ್ ವೈಯಕ್ತಿಕ ಜೀವನದಲ್ಲಿ ಬ್ಯುಸಿಯಾಗಿದ್ದರು. ಈಗ ರೂಪಾಂತರ ಮೂಲಕ ಮತ್ತೆ ನಟಿಸುತ್ತಿರುವ ವಿಚಾರ ಕೇಳಿ ಅಭಿಮಾನಿಗಳು ಸಂತಸ ವ್ಯಕ್ತ ಪಡಿಸಿದ್ದಾರೆ.