Reba monica maldives ನನ್ನ ಗಂಡ ವಾಟರ್ ಗೇಮ್‌ನ ಡಬ್ಬಾ ತರ ಆಡುತ್ತಾರೆ ಎಂದ ನಟಿ
ಹನಿಮೂನ್‌ಗೆ ಮಾಲ್ಡೀವ್ಸ್‌ಗೆ ತೆರಳಿದ ರತ್ನನ್ ಪ್ರಪಂಚ ನಟಿ ರೆಬಾ ಮೋನಿಕಾ ಜಾನ್. ಪತಿ ಸರಿಯಾಗಿ ಫೋಟೋ ತೆಗೆಯುವುದಿಲ್ಲ ನೀರಿನ ಆಟವನ್ನೂ ಆಡುವುದಿಲ್ಲ ಎಂದು ದೂರಿದ ನಟಿ.
ಡಾಲಿ ಧನಂಜಯ್‌ಗೆ (Dolly Dhananjay) ಜೋಡಿಯಾಗಿ 'ರತ್ನನ್ ಪ್ರಪಂಚ' (Ratnan Parpancha) ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಮಲಯಾಳಂ ನಟಿ ರೆಬಾ ಮೋನಿಕಾ ಜಾನ್.
ಬಾಯ್‌ಫ್ರೆಂಡ್ ಜೋಸೆಫ್ ಜೊತೆ ಜನವರಿ 13ರಂದು ರೆಬಾ (Reba Monic John) ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಮದುವೆ ಅದ್ಧೂರಿಯಾಗಿ ನಡೆದಿದ್ದು, ಇವರಿಬ್ಬರೂ ಸರಳವಾಗಿ ಅಲಂಕಾರ ಮಾಡಿಕೊಂಡಿದ್ದು ಎಲ್ಲರ ಗಮನ ಸೆಳೆದಿದೆ.
ಕ್ರಿಶ್ಚಿಯನ್ ಸಂಪ್ರದಾಯದಂತೆ ಮದುವೆಯಾಗಿರುವ ರೆಬಾ. ಹನಿಮೂನ್‌ಗೆಂದು ಮಾಲ್ಡೀವ್ಸ್ (Maldives)ಗೆ ತೆರಳಿದ್ದಾರೆ. ಸುಮಾರು 1 ವಾರದಿಂದ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಟ್ರಿಪ್ ಫೋಟೋ ಹಂಚಿಕೊಳ್ಳುತ್ತಿದ್ದಾರೆ.
'ನಾನು ಇನ್ನೂ ವೆಕೇಷನ್ ಹ್ಯಾಂಗ್ ಓವರ್‌ನಲ್ಲಿ ಇದ್ದೀನಿ. ನನ್ನ ಬಳಿ ಅದ್ಭುತವಾಗಿರುವ ಟ್ರಿಪ್ ಫೋಟೋಗಳಿವೆ. ನಿಮ್ಮ ಹೊಟ್ಟೆ ಉರಿಸಬೇಕು ಎಂದು ಒಂದೂ ಬಿಡದೆ ಶೇರ್ ಮಾಡಿಕೊಳ್ಳುತ್ತಿರುವೆ,' ಎಂದು ರೆಬಾ ಬರೆದುಕೊಂಡಿದ್ದಾರೆ.
ಇಬ್ಬರೂ ಬೋಟಿಂಗ್ (Boating) ಮಾಡುತ್ತಿರುವ ವಿಡಿಯೋ ಹಂಚಿಕೊಂಡಿರುವ ರೆಬಾ 'ನನ್ನ ಗಂಡ ನೀರಿನ ಆಟಗಳನ್ನು ಕೆಟ್ಟದಾಗಿ ಆಡುತ್ತಾನೆ,' ಎಂದು ಬರೆದುಕೊಂಡಿದ್ದಾರೆ. ಅದೆಲ್ಲಾ ಬಿಡು ನನ್ನ ಕೈ ನೋಡು ಎಂದಿದ್ದಾರೆ, ಪತಿ ಜೋಸೆಫ್.
ವೈರಲ್ ಆಗುತ್ತಿರುವ ಕಚ್ಚಾ ಬಾದಾಮ್ (Kachha Badam) ಹಾಡಿಗೆ ಇಬ್ಬರೂ ಡ್ಯಾನ್ಸ್ ಕೂಡ ಮಾಡಿದ್ದಾರೆ. 'ನಾವು ಮಾಲ್ಡೀವ್ಸ್‌ನಲ್ಲಿ ಮತ್ತೆ ಈ ಹಾಡಿಗೆ ಡ್ಯಾನ್ಸ್ ಮಾಡಿದ್ವಿ. ಈ ವಿಡಿಯೋ ಯಾರು ಹೆಚ್ಚು ಕೂಲ್ ಆಗಿ ಕಾಣಿಸುವುದು? ಜೋಸೆಫ್ ಅವರೇ ನನಗೆ ರೀಲ್ಸ್ ಮಾಡಲು ಈ ಸಲ ಒತ್ತಾಯ ಮಾಡಿದ್ದು,' ಎಂದು ರೆಬಾ ಹೇಳಿದ್ದಾರೆ.