MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Entertainment
  • Sandalwood
  • 'ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ' ನಿರ್ದೇಶಕನ ಸಿಂಪಲ್ ಸಿನಿಮಾ ಲೈಫ್

'ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ' ನಿರ್ದೇಶಕನ ಸಿಂಪಲ್ ಸಿನಿಮಾ ಲೈಫ್

ಬಹುಪರಾಕ್, ಮನಮೋಹಕ, ಸಿಂಪಲ್ಲಾಗ್ ಇನ್ನೊಂದು ಲವ್ ಸ್ಟೋರಿ, ಆಪರೇಷನ್ ಅಲಮೇಲಮ್ಮ, ಚೌಕ, ಹ್ಯಾಪಿ ನ್ಯೂ ಇಯರ್, ಚಮಕ್ , ಬಜಾರ್‌ನಂತಹ ಚಿತ್ರಗಳನ್ನು ಸಿಂಪಲ್ ಸುನಿ ನಿರ್ದೇಶಿಸಿ ಸೈ ಎನಿಸಿಕೊಂಡಿದ್ದಾರೆ.

2 Min read
Suvarna News | Asianet News
Published : Oct 22 2021, 04:41 PM IST| Updated : Oct 22 2021, 05:23 PM IST
Share this Photo Gallery
  • FB
  • TW
  • Linkdin
  • Whatsapp
18

ಸಿಂಪಲ್ ಸುನಿ (Simple Suni) ಎಂದ ತಕ್ಷಣ ನೆನಪಿಗೆ ಬರುವುದು 2013 ತೆರೆಕಂಡ 'ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ' (Simple Aag Ond Love Story) ಚಿತ್ರ. ಈ ಚಿತ್ರವನ್ನು ನಿರ್ದೇಶಿಸುವ ಮೂಲಕ ಸುನೀಲ್‌ ಕುಮಾರ್ (Sunil Kumar) ಆಗಿದ್ದ ಸುನಿ, ಸಿಂಪಲ್ ಸುನಿ ಆದರು. ಸುನಿ ಕನ್ನಡ ಚಿತ್ರರಂಗದ ನಿರ್ದೇಶಕ (Director), ಗೀತೆಕಾರಕ (Lyrics Writer) ಮತ್ತು ಚಿತ್ರ ಕಥೆಗಾರರಾಗಿ (Story Writer) ಗುರುತಿಸಿಕೊಂಡಿದ್ದಾರೆ. ಇವರು ಬೆಂಗಳೂರಿನ ಕೆ.ಎಲ್.ಇ ಕಾಲೇಜಿನಲ್ಲಿ ಬಯೋಟೆಕ್ನಾಲಜಿ ಪದವಿಯನ್ನು ಪಡೆದುಕೊಂಡಿದ್ದಾರೆ.

28

'ಜನುಮದ ಗೆಳತಿ' (Janumada Gelati) ಚಿತ್ರದ ನಿರ್ದೇಶಕ ದಿನೇಶ್ ಬಾಬು  (Dinesh Babu) ಅವರಿಗೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡುವ ಮೂಲಕ ತಮ್ಮ ಚಿತ್ರರಂಗದ ವೃತ್ತಿಯನ್ನು ಪ್ರಾರಂಭಿಸಿ 'ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ' ಚಿತ್ರಕ್ಕೆ ಆಕ್ಷನ್ ಕಟ್ ಹೇಳುವ ಮೂಲಕ ಸ್ವತಂತ್ರ ನಿರ್ದೇಶಕರಾದರು.

38

ಸುನಿ, 'ಸಿಂಪಲ್ಲಾಗೊಂದು ಲವ್ ಸ್ಟೋರಿ, ಉಳಿದವರು ಕಂಡಂತೆ, ಬಹುಪರಾಕ್, ಮನಮೋಹಕ, ಸಿಂಪಲ್ಲಾಗ್ ಇನ್ನೊಂದು ಲವ್ ಸ್ಟೋರಿ, ಆಪರೇಷನ್ ಅಲಮೇಲಮ್ಮ, ಚೌಕ, ಹ್ಯಾಪಿ ನ್ಯೂ ಇಯರ್, ಚಮಕ್ , ಬಜಾರ್ ಚಿತ್ರಗಳನ್ನು ನಿರ್ದೇಶಿಸಿ ಸೈ ಎನಿಸಿಕೊಂಡಿದ್ದಾರೆ.

48

ಸುನಿ ಸಾಮಾಜಿಕ ಜಾಲತಾಣಗಳಲ್ಲೂ (Social Media) ಆಕ್ಷೀವ್ ಆಗಿದ್ದು, ತಮ್ಮ ಪರ್ಸನಲ್ ಲೈಫ್ ಮತ್ತು ಸಿನಿಮಾಗಳಿಗೆ ಸಂಬಂಧಪಟ್ಟಂತೆ ಹಲವಾರು ಮಾಹಿತಿಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. 

58

ಒಂದು ಸಿನೆಮಾ ಆಗಬೇಕಾದರೆ ಅದರಲ್ಲಿ ತುಂಬಾ ರೀತಿಯ ಕೆಲಸಗಳು ಬರುತ್ತವೆ. ಆದರೆ ಅದರಲ್ಲಿ ತುಂಬಾ ಅಚ್ಚುಮೆಚ್ಚಿನ ಕೆಲಸ ಅಂದರೆ 'ಚಿತ್ರೀಕರಣಕ್ಕೆ ಸ್ಥಳ ಹುಡುಕಾಟ' .. #locationscouting ಎಂದು ಕ್ಯಾಪ್ಷನ್ ಬರೆದು ಇನ್‌ಸ್ಟಾಗ್ರಾಮ್‌ನಲ್ಲಿ (Instagram) ಫೋಟೋಗಳನ್ನು ಪೋಸ್ಟ್ ಮಾಡಿದ್ದಾರೆ.

68

ಸರ್ವರಿಗೂ ವಿಜಯದಶಮಿಯ ಶುಭಾಶಯಗಳು. ಈ ಶುಭದಿನದಂದು ನೀವು ನೀಡಿದ ವಿಜಯದ ಕಣ್ಣೋಟಗಳಿಗೆ ವಂದನೆಗಳು. ಎಂದು 'ಸಖತ್' (Sakath) ಚಿತ್ರದ ನಟ ಗಣೇಶ್ (Ganesh) ಹಾಗೂ ನಟಿ ನಿಶ್ವಿಕಾ (Nishwika) ಕಾಂಬಿನೇಷನ್‌ ವಿಡಿಯೋ ಹಾಡನ್ನು ದಸರಾ ಹಬ್ಬದ ಪ್ರಯುಕ್ತ ಶೇರ್ ಮಾಡಿಕೊಂಡಿದ್ದರು.

78

ಕನ್ನಡದ ಬಿಗ್‌ಬಾಸ್ ಸೀಸನ್ 8 ರ ವಿಜೇತ ಮಂಜು ಪಾವಗಡ (Manju Pavagada) ಜೊತೆ  ಪೋಟೋ ಹಂಚಿಕೊಂಡು, 'ಒರಟ. ಮನಸ್ಸು ಮೃದು ಬಾಯಿಬಿಟ್ಟರೆ ನಗುವಿನ ತೋರಣ. ಇಬ್ಬರು ಫ್ಯಾನ್ಸ್ ಆಫ್ ಶಿವಣ್ಣ' ಎಂದು ಹೊಗಳಿ ಬರೆದಿದ್ದರು.

88

ಇದೀಗ ಸುನಿ ಅವರ ಮುಂಬರುವ ನಿರ್ದೇಶನದಲ್ಲಿ ಸಖತ್ (Sakath), ಅವತಾರ್ ಪುರುಷ (Avatar Purusha), ರಾಬಿನ್ ಹುಡ್ (Robin Hood), ದಿ ಸ್ಟೋರಿ ಆಫ್ ರಾಯಗಡ (The Story of Rayagadha) ಸೇರಿದಂತೆ ಹಲವಾರು ಚಿತ್ರಗಳು ತಯಾರಾಗುತ್ತಿವೆ.

About the Author

SN
Suvarna News

Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved