ಅವಳಿ ಗಂಡು ಮಕ್ಕಳ ಜೊತೆ ಅಣ್ಣಮ್ಮ ದೇಗುಲಕ್ಕೆ ಭೇಟಿ ಕೊಟ್ಟ ನಟಿ ಅಮೂಲ್ಯಾ!
ಪತಿ ಮತ್ತು ಅವಳಿ ಗಂಡು ಮಕ್ಕಳ ಜೊತೆ ಬೆಂಗಳೂರಿನ ಅಣ್ಣಮ್ಮ ದೇವಸ್ಥಾನಕ್ಕೆ ಭೇಟಿ ಕೊಟ್ಟ ಗೋಲ್ಡನ್ ಕ್ವೀನ್...

ಕನ್ನಡ ಚಿತ್ರರಂಗದ ಗೋಲ್ಡನ್ ಕ್ವೀನ್ ಅಮೂಲ್ಯಾ ಮತ್ತು ಪತಿ ಜಗದೀಶ್ ಮಕ್ಕಳ ಜೊತೆ ಇಂದು ಬೆಂಗಳೂರಿನ ಶ್ರೀ ಅಣ್ಣಮ್ಮ ದೇವಿ ದೇಗುಲಕ್ಕೆ ಭೇಟಿ ನೀಡಿದ್ದಾರೆ.
ರಾಜಕೀಯಲ್ಲಿ ಬ್ಯುಸಿಯಾಗಿರುವ ಜಗದೀಶ್ ಸೋಷಿಯಲ್ ಮೀಡಿಯಾದಲ್ಲೂ ಆಕ್ಟಿವ್ ಆಗಿದ್ದು, ದೇಗುಲಕ್ಕೆ ಭೇಟಿ ಕೊಟ್ಟ ವಿಚಾರವನ್ನು ಹಂಚಿಕೊಂಡಿದ್ದಾರೆ.
'ಇಂದು ನಮ್ಮ ಮಕ್ಕಳಿಗೆ ಮೂರು ತಿಂಗಳು ಸಮೀಪಿಸುತ್ತಿರುವ ಶುಭ ಸಂದರ್ಭದಲ್ಲಿ, ಗಾಂಧಿನಗರದ ಮೆಜೆಸ್ಟಿಕ್‌ನಲ್ಲಿರುವ ನಗರ ದೇವತೆ, ಬೆಂಗಳೂರು ತಾಯಿ ಶ್ರೀ ಅಣ್ಣಮ್ಮ ದೇವಿಯ ದೇವಸ್ಥಾನಕ್ಕೆ ಕುಟುಂಬ ಸಮೇತ ಭೇಟಿ ನೀಡಿ, ಪೂಜೆ ಸಲ್ಲಿಸಿ ದೇವಿಯ ಅಶೀರ್ವಾದ ಪಡೆಯಲಾಯಿತ್ತು' ಎಂದು ಜಗದೀಶ್ ಬರೆದುಕೊಂಡಿದ್ದಾರೆ.
ಒಂದು ಫೋಟೋದಲ್ಲಿ ಮಾತ್ರ ಜಗದೀಶ್ ಮಗುವನ್ನು ಎತ್ತುಕೊಂಡಿರುವುದು ಕಾಣಿಸುತ್ತದೆ ಆದರೆ ಗೋಲ್ಡನ್ ದಂಪತಿಗಳು ಸ್ಪೆಷಲ್ ದಿನದಂದು ಫೋಟೋ ರಿವೀಲ್ ಮಾಡಲಿದ್ದಾರೆ.
ಮತ್ತೊಂದು ಫೋಟೋದಲ್ಲಿ ನಟಿ ಅಮೂಲ್ಯ ಅಣ್ಣಮ್ಮ ದೇವಿಗೆ ನೀಲಿ ಮತ್ತು ಹಸಿರು ಬಣ್ಣದ ಸೀರೆ ಕೊಟ್ಟು ಮಡಿಲು ತುಂಬಿಸಿದ್ದಾರೆ.
Amulya gowda jagadish
ಮಾರ್ಚ್ 1ರಂದು ನಟಿ ಅಮೂಲ್ಯ ಮತ್ತು ಜಗದೀಶ್ ಕುಟುಂಬಕ್ಕೆ ಅವಳಿ ಗಂಡು ಮಕ್ಕಳನ್ನು ಬರ ಮಾಡಿಕೊಂಡರು. ಮೂರ ಡಿಫರೆಂಟ್ ಕಾನ್ಸೆಪ್ಟ್‌ನಲ್ಲಿ ಪ್ರೆಗ್ನೆನ್ಸಿ ಶೂಟ್ ಮಾಡಿಸಿದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.