ಇದ್ದಕ್ಕಿದ್ದಂತೆ ಸಣ್ಣಗಾದ ನೆನಪಿರಲಿ ನಟಿ ವರ್ಷ; ಫೋಟೋ ವೈರಲ್!
ತೆಲುಗು ಮತ್ತು ಕನ್ನಡ ಸಿನಿಮಾದಲ್ಲಿ ನಟಿಸಿರುವ ವರ್ಷ ಇದ್ದಕ್ಕಿದ್ದಂತೆ ಸಣ್ಣಗಾಗಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ವೇಟ್ ಲಾಸ್ಟ್ ಬಗ್ಗೆ ಅಪ್ಡೇಟ್ ಮಾಡುತ್ತಾರೆ.
1997ರಲ್ಲಿ ಪಂಚರಮ್ ತೆಲುಗು ಚಿತ್ರದ ಮೂಲಕ ಬಣ್ಣದ ಜರ್ನಿ ಆರಂಭಿಸಿದ ನಟಿ ವರ್ಷ ನೆನಪಿರಲ್ಲಿ ಚಿತ್ರದ ಮೂಲಕ ಕನ್ನಡಕ್ಕೆ ಪಾದಾರ್ಪಣೆ ಮಾಡಿದ್ದಾರೆ.
2020 ಆಸಗ್ಟ್ 30ರಿಂದ 2021 ಆಗಸ್ಟ್ 31ರಲ್ಲಿ ನಡೆದ ವೇಟ್‌ಲಾಸ್ ಇದು. ಆರೋಗ್ಯವಾಗಿರುವುದಕ್ಕೆ ಖುಷಿಯಾಗಿದ್ದಾರೆ ಒಳ್ಳೆ ದೇಹ ಒಳ್ಳೆ ಆಹಾರ ಮುಖ್ಯವಾಗುತ್ತದೆ ಎಂದು ವರ್ಷ ಬರೆದುಕೊಂಡಿದ್ದಾರೆ.
'ನಮ್ಮ ಮೇಲೆ ನಾವು ಹೆಚ್ಚಿಗೆ ನಂಬಿಕೆ ಇಡಬೇಕು ಕಷ್ಟವಾದರೂ ನಮ್ಮ ಲಿಮಿಟ್ ಮೀರಿ ಮಾಡಬೇಕು. ನನ್ನ ಬಗ್ಗೆ ನನಗೆ ಹೆಚ್ಚಿಗೆ ಹೆಮ್ಮೆ ಇದೆ'
'ಒಳ್ಳೆ ಆಹಾರ ತಿನ್ನಬೇಕು ತುಂಬಾ ಕ್ಲೀನ್ ಅಗಿರಬೇಕು ನಮ್ಮ ಮೈಂಡ್ ಚೆನ್ನಾಗಿಟ್ಟಿಕೊಳ್ಳಬೇಕು ಆಗ ಮಾತ್ರ ತೂಕ ಇಳಿಸಿಕೊಳ್ಳಲು ಸಾಧ್ಯ'
'ಅನೇಕರು ನನಗೆ ಪ್ರಶ್ನೆ ಮಾಡುತ್ತಾರೆ ಯಾಕೆ ಇಷ್ಟೊಂದು ಜಿಮ್ ಮಾಡುತ್ತೀರಾ ಯಾಕೆ ತೂಕ ಇಳಿಸಿಕೊಳ್ಳುತ್ತಿದ್ದೀರಾ ಎಂದು ವರ್ಷ ಬರೆದುಕೊಂಡಿದ್ದಾರೆ.
'ಊಟ ಮಾಡುವುದಷ್ಟೇ ನಾರ್ಮಲ್ ವರ್ಕೌಟ್ ಮಾಡುವುದು. ನೀವು ಅಭ್ಯಾಸ ಮಾಡಿಕೊಂಡಿಲ್ಲ ಅಂದ್ರೆ ಮೊದಲು ಶುರು ಮಾಡಿ. ನಿಮ್ಮಲ್ಲಿ ಬದಲಾವಣೆ ಕಾಣಿಸುತ್ತದೆ' ಎಂದು ಬರೆದುಕೊಂಡಿದ್ದಾರೆ.
ಸದ್ಯ ವರ್ಷ ಯಾವ ಸಿನಿಮಾಗೂ ಸಹಿ ಮಾಡಿಲ್ಲ. ಪ್ರೋಡಕ್ಷನ್ ಹೌಸ್ ಮೂಲಕ ಧಾರಾವಾಹಿ ಮತ್ತು ರಿಯಾಲಿಟಿ ಶೋ ನೋಡಿಕೊಳ್ಳುತ್ತಾರೆ.