ಅಣ್ತಮ್ಮ ಹೊಸ ಕ್ರಶ್ ಸಿಕ್ಕಿದ್ಲು; ದುನಿಯಾ ವಿಜಯ್ ಪುತ್ರಿ ಮೋನಿಷಾ ಫೋಟೋ ವೈರಲ್!
ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಅಯ್ತು ನಟ ದುನಿಯಾ ವಿಜಯ್ ಪುತ್ರಿ ಫೋಟೋ.......
ಕನ್ನಡ ಚಿತ್ರರಂಗದ ಒಂಟಿ ಸಲಗ ದುನಿಯಾ ವಿಜಯ್ (Duniya Vijay) ಪುತ್ರಿ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.
ನಟ ದುನಿಯಾ ವಿಜಯ್‌ಗೆ ಇಬ್ಬರು ಮುದ್ದಾದ ಹೆಣ್ಣು ಮಕ್ಕಳು ಹಾಗೂ ಒಬ್ಬ ಮಗನಿದ್ದಾನೆ. ಜೇಷ್ಠ ಪುತ್ರಿ ಮೋನಿಷಾ ಫೋಟೋ ವೈರಲ್ ಆಗುತ್ತಿದೆ.
ಹೊಸ ಕ್ರಶ್ ಸಿಕ್ಕದ್ಲು ಹೊಸ ನಾಯಕಿ ಸಿಕ್ಕಿದಳು ಹೊಸ ಮಾಡಲ್ ಸಿಕ್ಕದಳು ನನ್ನ ಕನಸಿನ ರಾಣಿ ಸಿಕ್ಕಿದಳು ಎಂದು ಟ್ರೋಲ್ ಪೇಜ್‌ಗಳಲ್ಲಿ ಫೋಟೋ ಹಾಕಲಾಗಿದೆ.
ಮೋನಿಷಾ ಓದುತ್ತಿದ್ದಾರಾ ಅಥವಾ ಕೆಲಸ ಮಾಡುತ್ತಿದ್ದಾರಾ ಎಂದು ಯಾರಿಗೂ ತಿಳಿದು ಬಂದಿಲ್ಲ ಆದರೆ ಸಿನಿಮಾ ಕ್ಷೇತ್ರದಲ್ಲಿ ಆಸಕ್ತಿ ಹೊಂದಿದ್ದಾರೆಂದು ಮೇಲ್ನೋಟಕ್ಕೆ ಕಾಣಿಸುತ್ತದೆ..
ಅಲ್ಲದೆ ತಂದೆ ನಟನೆಯ ಮುಂದಿನ ಬಹು ನಿರೀಕ್ಷಿತ ಭೀಮಾ ಸಿನಿಮಾದ ಸೆಟ್‌ನಲ್ಲಿ ಮೋನಿಷಾ ಕೆಲಸ ಮಾಡುತ್ತಿದ್ದಾರೆ. ಪಾಕೆಟ್‌ನಲ್ಲಿ ವಾಕಿಟಾಕಿ ಧರಿಸಿರುವ ಫೋಟೋ ಹಾಕಿದ್ದರು.
ಸುಮಾರು ನಾಲ್ಕು ಸಾವಿರ ಫಾಲೋವರ್ಸ್ ಹೊಂದಿರುವ ಮೋನಿಷಾ ಸುಮಾರು 10 ಫೋಟೋಗಳನ್ನು ಅಪ್ಲೋಡ್ ಮಾಡಿ ಒಂದು ರೀಲ್ಸ್ ಹಾಕಿದ್ದಾರೆ.
ಆದಷ್ಟು ಬೇಗ ಸಿನಿಮಾ ಮಾಡಿ ...ಮೊದಲ ಚಿತ್ರಕ್ಕೆ ತಂದೆನೇ ಆಕ್ಷನ್ ಕಟ್ ಹೇಳಬೇಕು ಎಂದು ನೆಟ್ಟಿಗರು ಕಾಮೆಂಟ್ ಮಾಡಿ ಅಡ್ವಾನ್ಸ್ ವಿಶ್ ಮಾಡುತ್ತಿದ್ದಾರೆ.