'ಜೋಶ್' ನಟಿ ಪೂರ್ಣಾ ಸೀಮಂತ ಸಂಭ್ರಮ; ಫೋಟೋ ವೈರಲ್
ಬಹುಭಾಷಾ ನಟಿ ಪೂರ್ಣಾ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಆಪ್ತರ ಸಮ್ಮುಖದಲ್ಲಿ ಅದ್ಧೂರಿಯಾಗಿ ಸೀಮಂತ ಮಾಡಿಕೊಂಡಿದ್ದಾರೆ.

2004ರಲ್ಲಿ ಮಲಯಾಳಂ ಚಿತ್ರದ ಮೂಲಕ ಸಿನಿ ಜರ್ನಿ ಆರಂಭಿಸಿದ ಶಾಮ್ನಾ ಕಾಸೀಮ್ ಉರ್ಫ್ ಪೂರ್ಣಾ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ.
2022 ಜೂನ್ ತಿಂಗಳಿನಲ್ಲಿ ಪೂರ್ಣಾ ಮತ್ತು ಉದ್ಯಮಿ ಶಾನಿದ್ ಆಸಿಫ್ ಅಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಈಗ ಸಾಮಾಜಿಕ ಜಾಲತಾಣದಲ್ಲಿ ಸೀಮಂತ ಫೋಟೋ ಹಂಚಿಕೊಂಡಿದ್ದಾರೆ.
ಕೆಂಪು ಬಣ್ಣದ ರೇಶ್ಮೆ ಸೀರಿಯನ್ನು ಪೂರ್ಣಾ ಧರಿಸಿದ್ದಾರೆ. ಸಿಲ್ವರ್ ಜರಿ ಇರುವ ಈ ಸೀರೆ ನೋಡಲು ಸಖತ್ ಟ್ರೆಂಡಿಯಾಗಿ. ಪೂರ್ಣಾ ಗ್ಲೋ ಆಗುತ್ತಿದ್ದಾರೆ.
ನನ್ನ ಜೀವನದ ಬೆಸ್ಟ್ ಕ್ಷಣಗಳು. ಮಗು ಮತ್ತು ನನಗೆ ಶುಭ ಕೋರಿದ ಪ್ರತಿಯೊಬ್ಬರಿಗೂ ಧನ್ಯವಾದಗಳು ಎಂದು ಪೂರ್ಣಾ ಬರೆದುಕೊಂಡಿದ್ದಾರೆ.
2009ರಲ್ಲಿ ಜೋಶ್ ಚಿತ್ರದ ಮೂಲಕ ಪೂರ್ಣಾ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರು. 2013ರಲ್ಲಿ ರಾಧನ ಗಂಡ ಚಿತ್ರದಲ್ಲಿ ನಟಿಸಿದ್ದಾರೆ.
ಎರಡೇ ಕನ್ನಡ ಸಿನಿಮಾ ಮಾಡಿದ್ದರೂ ಕನ್ನಡಿಗರಿಗೆ ಜೋಶ್ ಚಿತ್ರದಿಂದ ಪೂರ್ಣಾ ತುಂಬಾನೇ ಕನೆಕ್ಟ್ ಆಗುತ್ತಾರೆ. ಸದ್ಯ ಪೂರ್ಣಾ ಕೈಯಲ್ಲಿ ಒಂದು ತಮಿಳು ಮತ್ತೊಂದು ಮಲಯಾಳಂ ಸಿನಿಮಾ ಇದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.