ಚಿತ್ರಸಂತೆ ಅವಾರ್ಡ್ ಫೋಟೊ ಶೇರ್ ಮಾಡಿದ ಹರ್ಷಿಕಾ, ಪ್ರೆಗ್ನೆಂಟಾ ಕೇಳಿದ್ದಕ್ಕೆ ಫೋಟೊ ಡಿಲೀಟ್!
ನಟಿ ಹರ್ಷಿಕಾ ಪೂಣಚ್ಚ ತಮ್ಮ ಸೋಶಿಯಲ್ ಮಿಡೀಯಾದಲ್ಲಿ ಚಿತ್ರಸಂತೆ ಅವಾರ್ಡ್ ಫೋಟೋಗಳನ್ನು ಶೇರ್ ಮಾಡಿದ್ದು, ಗರ್ಭಿಣಿನ ಎಂದು ಕೇಳ್ತಿದ್ದಂತೆ ಫೋಟೋ ಡೀಲೀಟ್ ಮಾಡಿದ್ದಾರೆ.
ಸ್ಯಾಂಡಲ್ ವುಡ್ ನಟಿ ಹರ್ಷಿಕಾ ಪೂಣಚ್ಚಾ (Harshika Poonacha) ಇತ್ತಿಚಿನ ದಿನಗಳಲ್ಲಿ ಸದಾ ಒಂದಲ್ಲ ಒಂದು ಕಾರಣದಿಂದ ಸುದ್ದಿಯಲ್ಲಿದ್ದಾರೆ. ಕೆಲ ದಿನಗಳ ಹಿಂದೆ ಕನ್ನಡದಲ್ಲಿ ಮಾತನಾಡಿದ್ದಕ್ಕೆ ಹರ್ಷಿಕಾ ಮತ್ತು ಭುವನ್ ಅನುಭವಿಸಿದ ಕರಾಳ ಅನುಭವವನ್ನು ಬಿಚ್ಚಿಟ್ಟು ಸುದ್ದಿಯಲ್ಲಿದ್ದರು. ಅಲ್ಲದೇ ಪ್ರಜ್ವಲ್ ರೇವಣ್ಣ ವಿಡಿಯೋ ವಿಚಾರವಾಗಿಯೂ ನಟಿ ಸುದ್ದಿಯಲ್ಲಿದ್ದರು.
ಇದೀಗ ಮತ್ತೊಂದು ವಿಚಾರಕ್ಕೆ ನಟಿ ಸುದ್ದಿಯಲ್ಲಿದ್ದಾರೆ. ಅದೇನಂದ್ರೆ ನಟಿ ಗರ್ಭಿಣಿನಾ (pregnant) ಎನ್ನುವ ಪ್ರಶ್ನೆ ಅಭಿಮಾನಿಗಳಲ್ಲಿ ಕಾಡುತ್ತಿದೆ. ಕಳೆದ ವರ್ಷವಷ್ಟೇ ತಮ್ಮ ಬಹುಕಾಲದ ಗೆಳೆಯ ಭುವನ್ ಪೊನ್ನಣ್ಣ ಜೊತೆ ಹರ್ಷಿಕಾ ಸಪ್ತಪದಿ ತುಳಿದಿದ್ದರು. ಕೊಡವ ಮದುವೆ ಅದ್ಧೂರಿಯಾಗಿ ನಡೆದಿತ್ತು.
ಮದುವೆಯ ಬಳಿಕ ನಟಿ ಪತಿ ಭುವನ್ ಜೊತೆ ವಿದೇಶದಲ್ಲಿ ಕೆಲಕಾಲ ನೆಲೆಸಿದ್ದರು. ಅಲ್ಲಿನ ಸುಂದರ ಫೋಟೋಗಳನ್ನು ನಟಿ ಹೆಚ್ಚಾಗಿ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುವ ಮೂಲಕ ಜನರ ಜೊತೆ ಕನೆಕ್ಟ್ ಆಗುತ್ತಿದ್ರು.
ಸೋಶಿಯಲ್ ಮಿಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟೀವ್ ಆಗಿರುವ ನಟಿ ಹರ್ಷಿಕಾ ಇತ್ತೀಚಿನ ದಿನಗಳಲ್ಲಿ ಕೇವಲ ಥ್ರೋಬ್ಯಾಕ್ ಫೋಟೋಗಳನ್ನಷ್ಟೇ ಹಂಚಿಕೊಳ್ಳುತ್ತಿದ್ದಾರೆ. ವಾರಗಳ ಹಿಂದೆ ನಟಿ ಭೋಜ್ ಪುರಿ ಹಾಡಿಗೆ ರೀಲ್ಸ್ ಮಾಡಿದ್ದು, ಅದನ್ನ ನೋಡಿದ್ದ ಅಭಿಮಾನಿಗಳು ಪ್ರೆಗ್ನೆನ್ಸಿ ಗ್ಲೋ (pregnancy glow) ಎದ್ದು ಕಾಣ್ತಿದೆ ಎಂದು ಕಾಮೆಂಟ್ ಮಾಡಿದ್ದರು.
ಇದೀಗ ಮತ್ತೆ ಚಿತ್ರ ಸಂತೆ ಅವಾರ್ಡ್ (Chitrasante Award) ಗೆದ್ದ ಸಂಭ್ರಮದ ವಿವಿಧ ಫೋಟೋಗಳನ್ನು ಹರ್ಷಿಕಾ ಪೂಣಚ್ಚ ತಮ್ಮ ಸೋಶಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ದರು. ಈ ಫೋಟೋ ನೋಡಿದ್ರೆ ನಟಿಯ ಮುಖದಲ್ಲಿ ತಾಯ್ತನದ ಹೊಳಪು ಮತ್ತು ಬೇಬಿ ಬಂಪ್ ಕಾಣಿಸುತ್ತಿತ್ತು.
ಕೆಲವು ಫ್ಯಾನ್ಸ್ ಕೂಡ ಗರ್ಭಿಣಿನಾ ಎಂದು ನೇರ ಪ್ರಶ್ನೆಯನ್ನು ಕೂಡ ಮಾಡಿದ್ರು. ಇದಾಗಿ ಸ್ವಲ್ಪ ಹೊತ್ತಲ್ಲೇ ನಟಿ ಎಲ್ಲಾ ಫೋಟೋಗಳನ್ನು ಡಿಲೀಟ್ ಮಾಡಿದ್ದಾರೆ. ನಟಿ ನಿಜವಾಗಿಯೂ ಗರ್ಭಿಣಿನಾ? ಅಥವಾ ಫೋಟೋದಲ್ಲಿ ಕಾಣಿಸಿಕೊಂಡಿದ್ದು ಹಾಗೇನಾ ಗೊತ್ತಿಲ್ಲ. ಯಾಕಂದ್ರೆ ಇಲ್ಲಿವರೆಗೂ ನಟಿ ಪ್ರಗ್ನೆನ್ಸಿ ಬಗ್ಗೆ ಎಲ್ಲೂ ಏನೂ ಹೇಳಿಲ್ಲ.
ಇನ್ನು ಕನ್ನಡ ಮಾತ್ರವಲ್ಲದೇ ತಮಿಳು, ತೆಲುಗು, ಮಲಯಾಳಂ ಅಷ್ಟೇ ಅಲ್ಲ ಭೋಜ್ ಪುರಿ ಸಿನಿಮಾದಲ್ಲೂ ನಟಿಸಿರುವ ಹರ್ಷಿಕಾ, ಕನ್ನಡದಲ್ಲಿ ಕೊನೆಯದಾಗಿ ಮಾರಕಾಸ್ತ್ರ ಸಿನಿಮಾದಲ್ಲಿ ನಟಿಸಿದ್ದರು. ಸದ್ಯ ತಮಿಳಿನಲ್ಲಿ ಉನ್ ಕಾದಲ್ ಇರುಂದಾಲ್ ಎನ್ನುವ ಸಿನಿಮಾದ ಶೂಟಿಂಗ್ ನಡೆಯುತ್ತಿದೆ.