ಹರ್ಷಿಕಾ ಪೂಣಚ್ಚ ಮತ್ತು ಭುವನ್‌ಗೆ ಮದರ್ ತೆರೆಸಾ ರಾಷ್ಟ್ರೀಯ ಪ್ರಶಸ್ತಿ!
ನ್ಯೂ ಪೇಪರ್ಸ್ ಅಸೋಸಿಯೇಶನ್ ಆಫ್ ಕರ್ನಾಟಕ ಸಂಸ್ಥೆಯಿಂದ ಭುವನಂ ಸಂಸ್ಥೆಗೆ ದೊಡ್ಡ ಪ್ರಶಸ್ತಿ.

ನಟಿ ಹರ್ಷಿಕಾ ಪೂಣಚ್ಚ ಹಾಗೂ ನಟ ಭುವನ್ ಪೊನ್ನಣ್ಣ ಅವರಿಗೆ ದಿ ನ್ಯೂ ಪೇಪರ್ಸ್ ಅಸೋಸಿಯೇಶನ್ ಆಫ್ ಕರ್ನಾಟಕ ಸಂಸ್ಥೆ ‘ಮದರ್ ತೆರೆಸಾ ರಾಷ್ಟ್ರೀಯ ಪುರಸ್ಕಾರ’ ನೀಡಿ ಗೌರವಿಸಿದೆ.
ಕೋವಿಡ್ ಸಂದರ್ಭ ಸಂಕಷ್ಟಕ್ಕೀಡಾದ ಜನರಿಗೆ ಸಹಾಯ ನೀಡಿರುವುದನ್ನು ಪರಿಗಣಿಸಿ ಈ ಪ್ರಶಸ್ತಿ ನೀಡಲಾಗಿದೆ ಎಂಬ ಸಂಸ್ಥೆ ತಿಳಿಸಿದೆ. ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಹರ್ಷಿಕಾ ಪ್ರಶಸ್ತಿ ಸ್ವೀಕರಿಸಿದರು.
ಈ ವೇಳೆ ಮಾತನಾಡಿದ ಅವರು, ‘ನಾವು ಮಾಡಿರುವ ಜನಪರ ಕೆಲಸಗಳನ್ನು ಗುರುತಿಸಿ ಈ ಪ್ರಶಸ್ತಿ ನೀಡಿರುವುದು ಸಂತಸ ತಂದಿದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಸಮಾಜಸೇವೆಯಲ್ಲಿ ತೊಡಗಿಸಿಕೊಳ್ಳಲು ಇದು ಪ್ರೇರಣೆಯಾಗಿದೆ’ ಎಂದರು.
ಕನ್ನಡ ಚಿತ್ರರಂಗದಲ್ಲಿ ಸರಳ ನಟ ಎಂದು ಗುರುತಿಸಿಕೊಂಡಿರುವ ಭುವನ್ ಅವರ ಭುವನಂ ಸಂಸ್ಥೆ ಜೊತೆ ಹರ್ಷಿಕಾ ಕೈ ಜೋಡಿಸಿ ಪ್ರವಾಹ ಸಂದರ್ಭದಲ್ಲಿ ಮತ್ತು ಕೊರೋನಾ ಲಾಕ್‌ಡೌನ್ ಸಮಯದಲ್ಲಿ ಜನ ಸಾಮಾನ್ಯರಿಗೆ ಸಹಾಯ ಮಾಡಿದ್ದಾರೆ.
Harshika Ponaccha and Bhuvan
ಹರ್ಷಿಕಾ ಸಮಾಜ ಸೇವೆಯನ್ನು ನೋಡಿ ಅಭಿಮಾನಿಯೊಬ್ಬರು ತಮ್ಮ ಆಗಷ್ಟೆ ಹುಟ್ಟಿದ ಮಗುವಿನಗೆ ಹರ್ಷಿಕಾ ಎಂದು ನಾಮಕರಣ ಮಾಡಿದ್ದರು.
ಹರ್ಷಿಕಾ ಮತ್ತು ಭುವನ್ ತಂಡಕ್ಕೆ ಚಿತ್ರರಂಗದವರು, ರಾಜಕಾರಣಿಗಳು, ಉದ್ಯಮಿಗಳು ಮತ್ತು ಜನ ಸಾಮಾನ್ಯರು ಸಪೋರ್ಟ್ ಮಾಡುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.