ತಲೆಗೆ ಹುಳ ಬಿಟ್ಕೊಳೋ ತಾಕತ್ತು ಇದ್ರೆ ಈ ಫೋಟೊದಲ್ಲಿರೋ Mr. ರಾಣಿ ಯಾರು ಹೇಳಿ ನೋಡೋಣ?
ವೈಟ್ ಡ್ರೆಸ್ ಧರಿಸಿ ಮರ್ಲಿನ್ ಮೊನ್ರೋ ರೀತಿ ಐಕಾನಿಕ್ ಪೋಸ್ ಕೊಟ್ಟಂತಹ ಈ ನಟಿ ಅಲ್ಲಲ್ಲ, ಮಿಸ್ಟರ್ ರಾಣಿ ಯಾರು ಅಂತ ಗೊತ್ತಾಯ್ತ?

ಬಿಳಿ ಬಣ್ಣದ ಬ್ಯಾಕ್ ಲೆಸ್ ಗೌನ್ ಧರಿಸಿ, ಬಾಬ್ ಕಟ್ ಮಾಡಿಸಿ, ಸೇಮ್ ಟು ಸೇಮ್ ಮರ್ಲಿನ್ ಮೊನ್ರೊ (Marilyn Monroe) ರೀತಿ ಐಕಾನಿಕ್ ಪೋಸ್ ಕೊಟ್ಟಿರುವ ಈ ಬೆಡಗಿ ಯಾರು ಹೇಳಬಲ್ಲಿರಾ?
ಸದ್ಯ ಸೋಶಿಯಲ್ ಮೀಡಿಯಾದಲ್ಲಿ (Social media) ಸದ್ದು ಮಾಡ್ತಿರೋ ಹೊಸ ಸಿನಿಮಾದ ಪೋಸ್ಟರ್ ಇದು. Mr. ರಾಣಿ ಸಿನಿಮಾದ ಪೋಸ್ಟರ್ ಇದು. ಒಳಗಡೆ ಗಂಡಸರು ಧರಿಸೋ ಚಡ್ಡಿ ಧರಿಸಿ, ಕಾಲಿಗೆ ಹೀಲ್ಸ್ ಧರಿಸಿ, ಡ್ರೆಸ್ ಹಾರದಂತೆ ಕೈ ಅಡ್ಡ ಹಿಡಿದಿರೋ ಈ ಫೋಟೊವನ್ನು ನೀವೂ ಸರಿಯಾಗಿ ನೋಡಿ.
ಗೊತ್ತಾಗ್ಲಿಲ್ವಾ ಯಾರು ಅಂತ. ಈ ಫಿಲಂ ಪೋಸ್ಟರ್ ಅನ್ನು ದೀಪಕ್ ಸುಬ್ರಹ್ಮಣ್ಯ (Deepak Subramanya) ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡು, ತಲೆಗೆ ಹುಳ ಬಿಟ್ಟುಕೊಳ್ಳೋ ತಾಕತ್ ಇರೋರಿಗೆ ಮಾತ್ರ! ಈ ಪೋಸ್ಟರಲ್ಲಿ ಇರುವ ಖ್ಯಾತ ನಟಿ ಯಾರು ಕಾಮೆಂಟ್ ಮಾಡಿ??? ಎಂದು ಬರೆದುಕೊಂಡಿದ್ದಾರೆ.
ದೀಪಕ್ ಅಂದ್ರೆ ಗೊತ್ತಾಯ್ತು ಅಲ್ವಾ? ಲಕ್ಷ್ಮೀ ನಿವಾಸ (Lakshmi Nivasa) ಧಾರಾವಾಹಿಯಲ್ಲಿ ಜಾಹ್ನವಿ ಪ್ರೀತಿಯಲ್ಲಿ ಸೈಕೋ ಆಗಿರುವ ಜಯಂತ್ ಈ ಪೋಸ್ಟರ್ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ಪೋಸ್ಟರ್ ನಲ್ಲಿರುವ Mr ರಾಣಿ ದೀಪಕ್ ಅವರೇ.
ಹೌದು, ಲಕ್ಷ್ಮೀ ನಿವಾಸದಲ್ಲಿ ತಮ್ಮ ಸೈಕೋ ಅಭಿನಯದ ಮೂಲಕ, ಮನೋಜ್ಞ ಅಭಿನಯದ ಮೂಲಕ ಜನಮನ ಗೆದ್ದಿರುವ ಜಯಂತ್ ಆಲಿಯಾಸ್ ದೀಪಕ್ ಇದೀಗ Mr ರಾಣಿ ಮೂಲಕ ಮೋಡಿ ಮಾಡಲು ಬರುತ್ತಿದ್ದಾರೆ. ಪೋಸ್ಟರ್ ನೋಡಿಯೇ ಜನರು ಇಂಪ್ರೆಸ್ ಆಗಿದ್ದಾರೆ.
Mr ರಾಣಿ ಸಿನಿಮಾವನ್ನು ಮಧುಚಂದ್ರ ನಿರ್ದೇಶನ ಮಾಡುತ್ತಿದ್ದು, ಶೀರ್ಷಿಕೆ ಎಷ್ಟು ಕ್ರೇಜಿ ಆಗಿದೆಯೋ ಕಥೆ ಕೂಡ ಅಷ್ಟೇ ಕ್ರೇಜಿಯಾಗಿದೆಯಂತೆ. ದೀಪಕ್ ಸುಬ್ರಹ್ಮಣ್ಯ ಅವರಿಗೆ ನಾಯಕಿಯಾಗಿ ಪಾರ್ವತಿ ನಾಯರ್ (Parvathi Nair)ನಟಿಸುತ್ತಿದ್ದಾರೆ, ಅಲ್ಲದೇ ಶ್ರೀವಸ್ತ, ರೂಪ ಪ್ರಭಾಕರ್, ಲಕ್ಷ್ಮೀ ಕಾರಂತ್, ಮಧುಚಂದ್ರ, ಆನಂದ್, ಚಕ್ರವರ್ತಿ ದಾವಣಗೆರೆ ನಟಿಸುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.