ಫ್ಯಾಮಿಲಿ ಜೊತೆ ಶ್ರೀಲಂಕಾಗೆ ಹಾರಿದ ಡಾರ್ಲಿಂಗ್ ಕೃಷ್ಣ-ಮಿಲನಾ ಜೋಡಿ… ಸಾಥ್ ಕೊಟ್ಟ ಅಮೃತಾ ಅಯ್ಯಂಗಾರ್!
ಸ್ಯಾಂಡಲ್ ವುಡ್ ನ ಮುದ್ದಾದ ತಾರಾ ಜೋಡಿಗಳಾದ ಡಾರ್ಲಿಂಗ್ ಕೃಷ್ಣ ಹಾಗೂ ಮಿಲನಾ ನಾಗರಾಜ್ ತಮ್ಮ ಫ್ಯಾಮಿಲಿ ಜೊತೆ ಶ್ರೀಲಂಕಾಗೆ ತೆರಳಿದ್ದಾರೆ.

ಸ್ಯಾಂಡಲ್’ವುಡ್ ನ ಸೆಲೆಬ್ರಿಟಿ ಜೋಡಿಗಳಲ್ಲಿ (celebrity couples) ಒಬ್ಬರು ಅಂದ್ರೆ ಅದು ಡಾರ್ಲಿಂಗ್ ಕೃಷ್ಣ ಹಾಗೂ ಮಿಲನಾ ನಾಗರಾಜ್. ಈ ಜೋಡಿ ಲವ್ ಮಾಕ್ಟೇಲ್ ಸಿನಿಮಾ ಮೂಲಕ ಜನಪ್ರಿಯತೆ ಪಡೆದರು.

ನಾಲ್ಕು ವರ್ಷದ ಹಿಂದೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ಈ ಜೋಡಿ, ಇದೀಗ ಮುದ್ದಾದ ಮಗಳು ಪರಿಯ ಪೋಷಕರಾಗಿದ್ದು ಜೀವನವನ್ನು ಎಂಜಾಯ್ ಮಾಡ್ತಿದ್ದಾರೆ.
ಮಗಳ ಲಾಲನೆ ಪಾಲನೆ ಜೊತೆಗೆ ಈ ಜೋಡಿ ತಮ್ಮ ಸಿನಿಮಾ ಶೂಟಿಂಗ್, ನಟನೆಯಲ್ಲೂ ಸಹ ಬ್ಯುಸಿಯಾಗಿದ್ದಾರೆ. ಅದರ ಜೊತೆಗೆ ಫ್ಯಾಮಿಲಿಗೆ ಸಮಯ ಕೊಡೋದಕ್ಕೂ ಮರೆಯೋದಿಲ್ಲ ಈ ಜೋಡಿ.
ಇತ್ತೀಚೆಗಷ್ಟೇ ಈ ಜೋಡಿ ತಮ್ಮ ಲವ್ ಮಾಕ್ಟೆಲ್ (love mocktail) ಸಿನಿಮಾದ ಲವ್ ಯು ಚಿನ್ನ ಹಾಡನ್ನು ಮಗಳ ಮುಂದೆ ಹಾಡಿ, ಮಗಳು ನಗುತ್ತಿರುವ ರಿಯಾಕ್ಷನ್ ನ್ನು ಸೆರೆ ಹಿಡಿದಿದ್ದರು.
ಇದೀಗ ಮಿಲನಾ ಕೃಷ್ಣ(Darling Krishna) ಜೋಡಿ ಪುಟ್ಟ ಪರಿ ಹಾಗೂ ಪೂರ್ತಿ ಫ್ಯಾಮಿಲಿ ಜೊತೆ ಶ್ರೀಲಂಕಾಗೆ ಹಾರಿದ್ದು, ಅಲ್ಲಿ ಸಮ್ಮರ್ ಎಂಜಾಯ್ ಮಾಡ್ತಿದ್ದಾರೆ.
ನಟಿ ಮಿಲನಾ ನಾಗರಾಜ್ (Milana Nagraj)ಸೋಶಿಯಲ್ ಮೀಡಿಯಾದಲ್ಲಿ ಫೋಟೊಗಳನ್ನು ಶೇರ್ ಮಾಡಿದ್ದು, ಪುಟಾಣಿ ಪರಿ ಹಾಗೂ ಬೆಸ್ಟ್ ಗ್ರೂಪ್ ಜೊತೆ ಶ್ರೀಲಂಕಾಗೆ ಪಯಣ ಎಂದು ಬರೆದುಕೊಂಡಿದ್ದಾರೆ.
ಇನ್ನು ಕೃಷ್ಣ -ಮಿಲನಾ ಹಾಗೂ ಅವರ ಕುಟುಂಬಕ್ಕೆ ಸ್ಯಾಂಡಲ್ ವುಡ್ ಮತ್ತೋರ್ವ ನಟಿ ಅಮೃತಾ ಅಯ್ಯಂಗಾರ್ (Amrutha Ayyangar) ಕೂಡ ಸಾಥ್ ನೀಡಿದ್ದರು.
ಕೃಷ್ಣ ಮಿಲನಾ ಫ್ಯಾಮಿಲಿ ಜೊತೆ ಹಾಗೂ ಪುಟಾಣಿ ಮಗು ಪರಿ (Little Pari) ಜೊತೆ ಅಮೃತಾ ಅಯ್ಯಂಗಾರ್ ಪೋಸ್ ಕೊಟ್ಟಿರುವ ಫೋಟೋಗಳು ಸಹ ಇವೆ.
ಅಂದ ಹಾಗೇ ಕೃಷ್ಣ -ಮಿಲನಾ ಫ್ಯಾಮಿಲಿಗೆ ಅಮೃತಾ ಅಯ್ಯಂಗಾರ್ ಲವ್ ಮಾಕ್ಟೇಲ್ 1 ರಿಂದಲೇ ಪರಿಚಯ. ಹಾಗಾಗಿ ಅವರು ಫ್ರೆಂಡ್ಸ್ ಗಿಂತ ಹೆಚ್ಚಾಗಿ ಫ್ಯಾಮಿಲಿಯಾಗಿದ್ದಾರೆ.
ಸಿನಿಮಾ ವಿಚಾರಕ್ಕೆ ಬಂದ್ರೆ ಮಿಲನಾ ಕೊನೆಯದಾಗಿ ಆರಾಮ್ ಅರವಿಂದ ಸ್ವಾಮಿ ಸಿನಿಮಾದಲ್ಲಿ ನಟಿಸಿದ್ದು, ಡಾರ್ಲಿಂಗ್ ಕೃಷ್ಣ ಲವ್ ಮಿ ಆರ್ ಹೇಟ್ ಮಿ, ಫಾದರ್ ಹಾಗೂ ಇನ್ನೂ ಹೆಸರಿಡದ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.