- Home
- Entertainment
- Sandalwood
- Chaitra Achar: 3BHK ಯಲ್ಲಿ ಮಿಂಚೋಕೆ ರೆಡಿಯಾಗ್ತಿದ್ದಾರೆ ಚೈತ್ರಾ ಆಚಾರ್… ಜೋರಾಗಿ ನಡೀತಿದೆ ಪ್ರಚಾರ
Chaitra Achar: 3BHK ಯಲ್ಲಿ ಮಿಂಚೋಕೆ ರೆಡಿಯಾಗ್ತಿದ್ದಾರೆ ಚೈತ್ರಾ ಆಚಾರ್… ಜೋರಾಗಿ ನಡೀತಿದೆ ಪ್ರಚಾರ
ಚಂದನವನ ಚೆಲುವೆ ಚೈತ್ರಾ ಆಚಾರ ತಮ್ಮ ಮೊದಲ ತಮಿಳು ಸಿನಿಮಾ 3BHK ಯಲ್ಲಿ ಮಿಂಚೋದಕ್ಕೆ ರೆಡಿಯಾಗ್ತಿದ್ದಾರೆ. ಈ ಸಿನಿಮಾ ಜುಲೈನಲ್ಲಿ ಬಿಡುಗಡೆಯಾಗಲಿದೆ.

ಚೈತ್ರಾ ಆಚಾರ್ (Chaithra Achar) ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ನಟಿ, ಗಾಯಕಿ. ಕನ್ನಡದಲ್ಲಿ ವೈವಿಧ್ಯಮಯವಾದ ಪಾತ್ರಗಳನ್ನು ನಿರ್ವಹಿಸಿ ಸೈ ಎನಿಸಿಕೊಂಡ ನಟಿ ಇವರು. ಇದೀಗ ತಮಿಳಿನಲ್ಲಿ ತಮ್ಮ ಚಾರ್ಮ್ ತೋರಿಸೋದಕ್ಕೆ ರೆಡಿಯಾಗಿದ್ದಾರೆ.
ಚೈತ್ರಾ ಆಚಾರ್ ಈಗಾಗಲೇ ತಮಿಳಿನಲ್ಲಿ ಎರಡು ಸಿನಿಮಾಗಳಲ್ಲಿ ನಟಿಸಿದ್ದು, ಮೊದಲನೇ ಸಿನಿಮಾ 3BHK (3BHK film) ಜುಲೈ ತಿಂಗಳಲ್ಲಿ ಬಿಡುಗಡೆಯಾಗಲು ತಯಾರಾಗಿ ನಿಂತಿದೆ. ಸದ್ಯಕ್ಕಂತೂ ನಟಿ ಈ ಸಿನಿಮಾ ಪ್ರಚಾರದಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ.
ಇದೀಗ ಸಿನಿಮಾ ಪ್ರಚಾರಕ್ಕೆ ರೆಡಿಯಾಗಿರುವ ಚೈತ್ರಾ ಸಿಂಪಲ್ ಆಗಿರುವ ಸೀರೆ ಜೊತೆಗೆ ಸ್ಲೀವ್ ಲೆಸ್ ಬ್ಲೌಸ್, ಮೆಟಲ್ ಇಯರಿಂಗ್ಸ್ ಮತ್ತು ಕೈ ಬಳೆ ಧರಿಸಿ ಫೊಟೊ ಶೂಟ್ ಮಾಡಿ, ತಮ್ಮ ಸೋಶಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ಸೀರೆಯಲ್ಲಿ ಚೈತ್ರಾ ಮುದ್ದಾಗಿ ಕಾಣಿಸುತ್ತಿದ್ದು, ಸ್ನೇಹಿತರೊಬ್ಬರು ದೃಷ್ಟಿ ತೆಗೆಸಿಕೋ ರಾಜ ಎಂದಿದ್ದಾರೆ.
ಅಂದ ಹಾಗೇ 3BHK ಸಿನಿಮಾದಲ್ಲಿ ಹಿರಿಯ ನಟ ಶರತ್ ಕುಮಾರ್ (Sarat Kumar), ದೇವಯಾನಿ, ಸಿದ್ಧಾರ್ಥ್, ಚೈತ್ರಾ ಆಚಾರ್, ನೀತಾ ರಘುನಾಥ್, ಯೋಗಿ ಬಾಬು ಮೊದಲಾದವರು ನಟಿಸುತ್ತಿದ್ದಾರೆ. ಈ ಸಿನಿಮಾ ಜುಲೈ 4ರಂದು ಬಿಡುಗಡೆಯಾಗಲಿದೆ. ಇದು ಮಿಡಲ್ ಕ್ಲಾಸ್ ಕುಟುಂಬವೊಂದರ ಕಥೆಯಾಗಿದೆ.
ಚೈತ್ರಾ ಮತ್ತೊಂದು ತಮಿಳು ಸಿನಿಮಾದಲ್ಲಿ ನಟ ನಿರ್ದೇಶಕ ಶಶಿಕುಮಾರ್ ಜೊತೆ ನಟಿಸುತ್ತಿದ್ದಾರೆ. ಹೀಗೆ ಸದ್ಯಕ್ಕಂತೂ ಚೈತ್ರಾ ಆಚಾರ್ ಕನ್ನಡ ಮತ್ತು ತಮಿಳು ಸಿನಿಮಾಗಳಲ್ಲಿ ಬ್ಯುಸಿಯಾಗಿರುವಂತಹ ನಟಿಯರ ಸಾಲಿಗೆ ಸೇರುತ್ತಾರೆ.
ಕನ್ನಡದ ಸಿನಿಮಾಗಳ ಬಗ್ಗೆ ಹೇಳೋದಾದರೆ, ಚೈತ್ರಾ ಮಾರ್ನಮಿ (marnami) ಎನ್ನುವ ತುಳುನಾಡಿನ ಕಥೆಯನ್ನು ಹೇಳುವ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ದೀಕ್ಷಾ ಅನ್ನೋ ಪಾತ್ರ ಮಾಡಿದ್ದು, ಇದರ ಫಸ್ಟ್ ಲುಕ್ ಟೀಸರ್ ಇತ್ತೀಚೆಗೆ ರಿಲೀಸ್ ಆಗಿತ್ತು, ಅಲ್ಲದೇ ಚೈತ್ರಾ ಉತ್ತರಕಾಂಡ ಸಿನಿಮಾದಲ್ಲಿ ಲಚ್ಚಿ ಎನ್ನುವ ಪಾತ್ರದಲ್ಲಿ ನಟಿಸುತ್ತಿದ್ದಾರೆ.
ಸಿನಿಮಾಗಳ ಜೊತೆಗೆ ಸೋಶಿಯಲ್ ಮೀಡಿಯಾದಲ್ಲೂ ಆಕ್ಟಿವ್ ಅಗಿರುವ ಚೈತ್ರಾ ಆಚಾರ್ ತಮ್ಮ ಬೋಲ್ಡ್ ಫೋಟೊ ಶೂಟ್ ಮೂಲಕ ಜನ ಹುಬ್ಬೇರಿಸಿ ನೋಡುವಂತೆ ಮಾಡುತ್ತಿರುತ್ತಾರೆ. ಜೊತೆಗೆ ತಮ್ಮ ಗಾಯನದ ವಿಡಿಯೋಗಳನ್ನು ಸಹ ಪೋಸ್ಟ್ ಮಾಡಿತ್ತಿರುತ್ತಾರೆ ಈ ಚೆಲುವೆ.