ರಿಯಲ್ ಸ್ಟಾರ್ ಪುತ್ರನಿಗೆ 21ರ ಸಂಭ್ರಮ… ಸಿನಿಮಾಗೆ ಎಂಟ್ರಿ ಕೊಡಲು ಆಯುಷ್ ರೆಡಿ
ರಿಯಲ್ ಸ್ಟಾರ್ ಉಪೇಂದ್ರ ಹಾಗೂ ಪ್ರಿಯಾಂಕ ಪುತ್ರ ಆಯುಷ್ 21ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದು, ಕುಟುಂಬ ಸಮೇತರಾಗಿ ಮಂತ್ರಾಲಯಕ್ಕೂ ತೆರಳಿದ್ದಾರೆ.

ರಿಯಲ್ ಸ್ಟಾರ್ ಉಪೇಂದ್ರ (Real Star Upendra) ಪುತ್ರ ಆಯುಷ್ ಉಪೇಂದ್ರ 21ನೇ ವರ್ಷಕ್ಕೆ ಕಾಲಿಟ್ಟಿದ್ದು, ತಮ್ಮ ಮನೆಯಲ್ಲಿ ಅದ್ಧೂರಿಯಾಗಿ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ನಟಿ ಪ್ರಿಯಾಂಕ ಉಪೇಂದ್ರ ಮಗನ ಹುಟ್ಟು ಹಬ್ಬದ ಫೋಟೊಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದು, ತಮ್ಮ ಕುಟುಂಬದ ಜೊತೆ ಹುಟ್ಟು ಹಬ್ಬ ಆಚರಿಸುವ ಫೋಟೊಗಳನ್ನು ಶೇರ್ ಮಾಡಿದ್ದಾರೆ.
ಆಯುಷ್ ಹುಟ್ಟುಹಬ್ಬಕ್ಕೆ ಅಮ್ಮ ಪ್ರಿಯಾಂಕ (Priyanka Upendra), ಗಟ್ಟಿಯಾಗಿ ತಬ್ಬಿಕೊಂಡು ಪೋಸ್ ನೀಡಿದ್ರೆ, ಅಪ್ಪ ಉಪೇಂದ್ರ ಮಗನ ಕೆನ್ನೆಗೆ ಪ್ರೀತಿಯಿಂದ ಸಿಹಿ ಮುತ್ತನ್ನು ನೀಡಿದ್ದಾರೆ. ರಿಯಲ್ ಸ್ಟಾರ್ ಪುತ್ರನ ಹುಟ್ಟುಹಬ್ಬದ ಸಂಭ್ರಮಕ್ಕೆ ಸೆಲೆಬ್ರಿಟಿಗಳು ಹಾಗೂ ಅಭಿಮಾನಿಗಳು ಸಹ ಶುಭ ಕೋರಿದ್ದಾರೆ. ಲಿಟಲ್ ಸೂಪರ್ ಸ್ಟಾರ್ ಅಪ್ಪನಂತೆ ಬೆಳೆಯಲಿ ಎಮ್ದು ಆಶೀರ್ವದಿಸಿದ್ದಾರೆ.
ಉಪೇಂದ್ರ ಪುತ್ರ ಆಯುಷ್ (Ayush Upendra)ಸೋಶಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿದ್ದು, ಹೆಚ್ಚಾಗಿ ತಮ್ಮ ವರ್ಕ್ ಔಟ್ ಫೋಟೊ ಹಾಗೂ ಇತರ ಫೋಟೊಗಳ ಮೂಲಕ ಕಾಣಿಸಿಕೊಳ್ಳುತ್ತಿರುತ್ತಾರೆ.
ಅಪ್ಪನಂತೆ ಆಯುಷ್ ಕೂಡ ಸಿನಿಮಾ ಇಂಡಷ್ಟ್ರಿಗೆ ಬರುತ್ತಾರೆಯೇ ಎನ್ನುವ ಪ್ರಶ್ನೆ ಹಲವಾರು ಬಾರಿ ಕೇಳಿ ಬಂದಿದೆ. ಆದರೆ ಯಾವಾಗಲೂ ಆಯುಷ್, ನಾನು ಅಪ್ಪನ ಹೆಸರು ಹೇಳಿ ಇಂಡಷ್ಟ್ರಿಗೆ ಬರೋದಕ್ಕೆ ಇಷ್ಟ ಪಡೋದಿಲ್ಲ, ಸಾಧನೆ ನನ್ನಿಂದಲೇ ಆಗಬೇಕು ಎಂದಿದ್ದರು.
ಇದೀಗ ಮತ್ತೆ ಆಯುಷ್ ಹುಟ್ಟುಹಬ್ಬದಂದು ಅವರು ಸಿನಿಮಾಗೆ ಎಂಟ್ರಿ (sandalwood entry) ಕೊಡುವ ಬಗ್ಗೆ ಸುದ್ದಿ ಕೇಳಿ ಬಂದಿದೆ. ಇದು ಅಧಿಕೃತ ಮಾಹಿತಿ ಸದ್ಯದಲ್ಲೇ ಉಪೇಂದ್ರ ಪುತ್ರ ತೆರೆ ಮೇಲೆ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ.
ಆಯುಷ್ ಹುಟ್ಟುಹಬ್ಬದಂದು ಉಪೇಂದ್ರ, ಪ್ರಿಯಾಂಕ ಕುಟುಂಬ ಸಮೇತರಾಗಿ ಮಂತ್ರಾಲಯಕ್ಕೆ ಭೇಟಿ ನೀಡಿ, ರಾಯರ ಅನುಗ್ರಹ ಪಡೆದು ಬಂದಿದ್ದಾರೆ. ಇವರ ಜೊತೆಗೆ ನಟಿ ತಾರಾ ಕುಟುಂಬ ಕೂಡ ಭಾಗಿಯಾಗಿದ್ದರು.
ಪುರುಷೋತ್ತಮ್ ನಿರ್ದೆಶನ ಮಾಡುತ್ತಿರುವ ಸಿನಿಮಾದಲ್ಲಿ ಆಯುಷ್ ನಟಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಸ್ಕ್ರಿಪ್ಟ್ ಪೂಜೆ ಮಾಡಲು ಮಂತ್ರಾಲಯಕ್ಕೆ (Mantralaya)ತೆರಳಿದ್ದರು ಎನ್ನುವ ಮಾಹಿತಿ ಇದೆ. ಇನ್ನು ವೇಣು ಅವರು ಛಾಯಾಗ್ರಹಣ ಮಾಡಲಿದ್ದಾರೆ ಎನ್ನಲಾಗಿದೆ.
ಉಪೇಂದ್ರ ಅವರು ನಿರ್ದೇಶಕರಾದ ಚಂದನವನಕ್ಕೆ ಎಂಟ್ರಿ ಕೊಟ್ಟು, ನಂತರ ನಟರಾಗಿ ಮಿಂಚಿದರು, ಇವರ ಪತ್ನಿ ಪ್ರಿಯಾಂಕ ಕೂಡ ನಟಿಯಾಗಿ ಜನಪ್ರಿಯತೆ ಪಡೆದರು. ಇದೀಗ ಮಗ ಕೂಡ ಸಿನಿಮಾಗೆ ಎಂಟ್ರಿ ಕೊಡುತ್ತಿದ್ದಾರೆ.