ಪತಿ, ಮಕ್ಕಳ ಜೊತೆ ಮಾಲ್ಡೀವ್ಸ್ ನಲ್ಲಿ ವ್ಯಾಲೆಂಟೈನ್ಸ್ ಡೇ ಸಂಭ್ರಮಿಸಿದ ಅಮೂಲ್ಯ
ಚಂದನವನದ ತಾರೆ ಅಮೂಲ್ಯ ತಮ್ಮ ಪತಿ ಹಾಗೂ ಮಕ್ಕಳ ಜೊತೆ ಮಾಲ್ಡೀವ್ಸ್ ಗೆ ತೆರಳಿದ್ದು, ಅಲ್ಲಿಯೇ ವ್ಯಾಲೆಂಟೈನ್ಸ್ ಡೇ ಸೆಲೆಬ್ರೇಟ್ ಮಾಡಿದ್ದಾರೆ.

ಸ್ಯಾಂಡಲ್ ವುಡ್ ನ ಮುದ್ದಿನ ಬೆಡಗಿ ಅಮೂಲ್ಯ (Actress Amulya) ಕೆಲವು ದಿನಗಳ ಹಿಂದೆ ಪತಿ ಜಗದೀಶ್ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಮಾಲ್ಡೀವ್ಸ್ ಗೆ ತೆರಳಿದ್ದರು. ಅಲ್ಲಿ ಫ್ಯಾಮಿಲಿ ಜೊತೆ ಎಂಜಾಯ್ ಮಾಡುತ್ತಾ, ಗಂಡನ ಹುಟ್ಟುಹಬ್ಬವನ್ನು ಸಂಭ್ರಮದಿಂದ ಸೆಲೆಬ್ರೇಟ್ ಕೂಡ ಮಾಡಿದ್ದರು.
ಇದೀಗ ವ್ಯಾಲೆಂಟೈನ್ಸ್ ಡೇ (Valentines Day) ಸಂಭ್ರಮದಂದು ನಟಿ ಅಮೂಲ್ಯ ತಮ್ಮ ಪತಿ ಹಾಗೂ ಮಕ್ಕಳ ಜೊತೆಗಿನ ಸುಂದರವಾದ ಫೋಟೋಗಳನ್ನು ಶೇರ್ ಮಾಡಿ, ಪ್ರೇಮಿಗಳ ದಿನದ ಶುಭಾಶಯಗಳನ್ನು ತಿಳಿಸಿದ್ದಾರೆ. ಬ್ಯೂಟಿಫುಲ್ ಫ್ಯಾಮಿಲಿ ಫೋಟೊ ನೋಡಿ ಅಭಿಮಾನಿಗಳು ಸಖತ್ ಖುಷಿಯಾಗಿದ್ದಾರೆ.
ಅಮೂಲ್ಯ ಮಾಲ್ಡೀವ್ಸ್ ನಲ್ಲಿಯೇ ಈ ಸುಂದರವಾದ ಫ್ಯಾಮಿಲಿ ಫೋಟೊ ಶೂಟ್ ಮಾಡಿಸಿದ್ದು, ಅಮೂಲ್ಯ, ಪತಿ ಜಗದೀಶ್, ಅವಳಿ ಮಕ್ಕಳಾದ ಅಥರ್ವ್ ಮತ್ತು ಆದವ್ ಮೂರು ಜನ ಕೂಡ ನೀಲಿ ಬಣ್ಣದ ಮ್ಯಾಚಿಂಗ್ ಡ್ರೆಸ್ ಧರಿಸಿದ್ದು, ನೀಲಿ ಕಡಲು ಮತ್ತು ಆಕಾಶಕ್ಕೆ ಮ್ಯಾಚ್ ಮಾಡಿಕೊಂಡು, ಸಮುದ್ರದ ಕಿನಾರೆಯಲ್ಲಿ ನಿಂತು ಸುಂದರವಾದ ಫ್ಯಾಮಿಲಿ ಪಿಕ್ಛರ್ ತೆಗೆಸಿಕೊಂಡಿದ್ದಾರೆ.
ತಮ್ಮ ಫೋಟೊಗಳ ಜೊತೆಗೆ ಅಮೂಲ್ಯ ಒಂದು ಸುಂದರವಾದ ಹಾಗೂ ಶಾಂತಿಯುತವಾದ ಕುಟುಂಬಕ್ಕಿಂತ ಬೇರೆ ಆಶೀರ್ವಾದ ಇನ್ನೇನಿದೆ ಎಂದು ಬರೆದುಕೊಂಡಿದ್ದಾರೆ. ಇದರ ಜೊತೆಗೆ ಹ್ಯಾಪಿ ವ್ಯಾಲೆಂಟೈನ್ಸ್ ಡೇ ಎಂದು ತಮ್ಮ ಪ್ರೀತಿಯ ಪತಿಗೆ ಪ್ರೇಮಿಗಳ ದಿನದ ಶುಭಾಶಯಗಳನ್ನು ಕೂಡ ತಿಳಿಸಿದ್ದಾರೆ.
ಈ ಫೋಟೊಗ್ರಾಫಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದು, ಈ ಸುಂದರವಾದ ಫ್ಯಾಮಿಲಿಯ ಮುದ್ದಾದ ಫೋಟೊಗ್ರಫಿಯನ್ನು ಜನ ಕೊಂಡಾಡಿದ್ದಾರೆ. ಅಮೂಲ್ಯ ಅವರ ಸುಂದರ ಸಂಸಾರ ಯಾವಾಗಲೂ ಹೀಗೆ ನಗು ನಗುತ್ತಲೇ ಮಧುರವಾಗಿರಲಿ ಎಂದು ಹಾರೈಸಿದ್ದಾರೆ.
ನಟಿ ಅಮೂಲ್ಯ ಮದುವೆಯಾದ ನಂತರ ಸಿನಿಮಾಗಳಿಂದ, ನಟನೆಯಿಂದ ದೂರವೇ ಉಳಿದಿದ್ದಾರೆ. ಸದ್ಯಕ್ಕಂತೂ ಪತಿ, ಮಕ್ಕಳು ಎಂದು ಪೂರ್ತಿಯಾಗಿ ಬ್ಯುಸಿಯಾಗಿದ್ದಾರೆ. ನಟಿ ಮತ್ತೆ ಸಿನಿಮಾಕ್ಕೆ ಎಂಟ್ರಿ ಕೊಡುತ್ತಿದ್ದಾರೆ ಎನ್ನುವ ಸುದ್ದಿ ಕೇಳಿ ಬಂದಿದೆ. ಆದರೆ, ನಿಜಕ್ಕೂ ಅವರು ಸಿನಿಮಾಗೆ ಎಂಟ್ರಿ ಕೊಡುತ್ತಿದ್ದಾರೆಯೇ? ಇದು ಕೇವಲ ಊಹಾಪೋಹವೇ ಅನ್ನೋದು ಮಾತ್ರ ತಿಳಿದು ಬಂದಿಲ್ಲ.