ಸಿನಿಮಾಕ್ಕಾಗಿ ಹೆಸರನ್ನೆ ಬದಲಾಯಿಸಿ ಸ್ಟಾರ್ ಪಟ್ಟಕ್ಕೇರಿದ ನಟಿಯರಿವರು
ಚಂದನವನದ ಹಲವು ನಟಿಯರು ತಮ್ಮ ಹುಟ್ಟು ಹೆಸರನ್ನು ಬದಲಾಯಿಸಿ ಸಿನಿಮಾಕ್ಕಾಗಿ ಬೇರೆ ಹೆಸರನ್ನಿಟ್ಟರು, ಹೀಗೆ ಹೆಸರು ಬದಲಾಯಿಸಿಕೊಂಡವರಲ್ಲಿ ಗೆದ್ದವರೇ ಹೆಚ್ಚು.

ಸಿನಿಮಾಕ್ಕಾಗಿ ಹೆಸರು ಬದಲಾವಣೆ ಮಾಡಿದ ನಟಿಯರು
ಚಂದನವನದ ಹಲವು ನಟಿಯರು ಸಿನಿಮಾಕ್ಕಾಗಿ ತಮ್ಮ ಹುಟ್ಟು ಹೆಸರನ್ನೇ ಬದಲಾಯಿಸಿದ್ದಾರೆ. ಅಷ್ಟೇ ಅಲ್ಲ ಬದಲಾಯಿಸಿದವರಲ್ಲಿ ಗೆದ್ದವರೇ ಹೆಚ್ಚು.
ಶ್ರುತಿ
ಹಿರಿಯ ನಟಿ ಅವರ ನಿಜವಾದ ಹೆಸರು ಗಿರಿಜಾ. ಇವರು ಶ್ರುತಿ ಸಿನಿಮಾ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ಹಾಗಾಗಿ ನಟ -ನಿರ್ದೇಶಕ ದ್ವಾರಕೀಶ್ ಅವರು ಇವರ ಹೆಸರನ್ನು ಶ್ರುತಿ ಎಂದು ಬದಲಾಯಿಸಿದರು.
ಸುಧಾರಾಣಿ
80ರ ದಶಕದ ಜನಪ್ರಿಯ ನಾಯಕಿ ಸುಧಾರಾಣಿ ಅವರ ಹುಟ್ಟು ಹೆಸರು ಜಯಶ್ರೀ. ಸಿನಿಮಾಕ್ಕಾಗಿ ಸುಧಾರಾಣಿ ಎಂದು ಬದಲಾಯಿಸಿ, ಗೆಲ್ಲುವ ಕುದುರೆಯಾಗಿ ಚಿತ್ರರಂಗದಲ್ಲಿ ಮಿಂಚಿದರು.
ಮಾಲಾಶ್ರೀ
ನಟಿ ಮಾಲಾಶ್ರೀ ಮೂಲ ಹೆಸರು ಶ್ರೀದುರ್ಗ, ಅವರಿಗೆ ಪಾರ್ವತಮ್ಮ ರಾಜಕುಮಾರ್ ಈ ಹೆಸರನ್ನಿಟ್ಟರು. ಈವಾಗ ಮಾಲಾಶ್ರೀ ಅಂದ್ರೇ ಲೇಡಿ ಟೈಗರ್ ಆಗಿ ಮಿಂಚುತ್ತಿದ್ದಾರೆ.
ರಮ್ಯಾ
ಅಭಿ ಸಿನಿಮಾ ಮೂಲಕ ಚಂದನವನಕ್ಕೆ ಎಂಟ್ರಿ ಕೊಟ್ಟ ರಮ್ಯಾ ಅವರ ಹುಟ್ಟು ಹೆಸರು ದಿವ್ಯ ಸ್ಪಂದನ. ಆದರೆ ಸಿನಿಮಾಕ್ಕಾಗಿ ಪಾರ್ವತಮ್ಮ ರಾಜಕುಮಾರ್ ಅವರು ರಮ್ಯಾ ಎಂದು ಹೆಸರಿಟ್ಟರು.
ರಕ್ಷಿತಾ
ನಟಿ ರಕ್ಷಿತಾ ಪ್ರೇಮ್ ಅವರ ಹುಟ್ಟು ಹೆಸರು ಶ್ವೇತಾ ಆಗಿತ್ತು, ಇವರು ಕೂಡ ಸಿನಿಮಾಕ್ಕಾಗಿ ತಮ್ಮ ಹೆಸರನ್ನು ರಕ್ಷಿತಾ ಎಂದು ಬದಲಾಯಿಸಿ ಅಲ್ವಾವಧಿಯಲ್ಲಿ ಸೂಪರ್ ಸ್ಟಾರ್ ಆಗಿ ಮಿಂಚಿದರು.
ರಚಿತಾ ರಾಮ್
ಡಿಂಪಲ್ ಚೆಲುವೆ ರಚಿತಾ ರಾಮ್ ಅವರ ಹೆಸರು ಬಿಂದಿಯಾ ರಾಮ್ . ಸಿನಿಮಾಗೆ ಎಂಟ್ರಿ ಕೊಡುತ್ತಿದ್ದಂತೆ ಬಿಂದಿಯಾ ರಚಿತಾ ಆಗಿ ಬದಲಾದರು. ಸ್ಟಾರ್ ನಟಿಯಾಗಿ ಯಶಸ್ಸು ಪಡೆದರು.
ಅಮೂಲ್ಯ
ಗೋಲ್ಡನ್ ಬೆಡಗಿ ಅಮೂಲ್ಯ ಅವರ ನಿಜವಾದ ಹೆಸರು ಮೌಲ್ಯ. ನಂತರ ಸಿನಿಮಾಕ್ಕಾಗಿ ಅಮೂಲ್ಯ ಎಂದು ಬದಲಾಯಿಸಿ ಜನಪ್ರಿಯತೆಯನ್ನು ಸಹ ಪಡೆದರು.
ಪೂಜಾ ಗಾಂಧಿ
ಮಳೆ ಹುಡುಗಿ ಪೂಜಾ ಗಾಂಧಿಯ ಮೂಲ ಹೆಸರು ಸಂಜನಾ ಗಾಂಧಿ. ಮುಂಗಾರು ಮಳೆ ಸಿನಿಮಾದ ಆರಂಭದಲ್ಲಿ ಇವರ ಹೆಸರು ಸಂಜನಾ ಅಂತಾನೆ ಇತ್ತು. ನಂತರ ಅದನ್ನು ಪೂಜಾ ಎಂದು ಬದಲಾಯಿಸಲಾಯ್ತು.
ಸಂಗೀತ ಶೃಂಗೇರಿ
ಕನ್ನಡ ಸಿನಿಮಾ, ಸೀರಿಯಲ್ ಹಾಗೂ ಬಿಗ್ ಬಾಸ್ ಮೂಲಕ ಸದ್ದು ಮಾಡಿದ ಸಿಂಹಿಣಿ ಸಂಗೀತ ಶೃಂಗೇರಿ ಅವರ ಹೆಸರು ಕೂಡ ಶ್ರೀದೇವಿ ಎಂದಿತ್ತು, ನಂತರ ಅದನ್ನ ಸಂಗೀತ ಎಂದು ಬದಲಾಯಿಸಲಾಯಿತು.
ಆರಾಧನಾ ರಾಮ್
ಮಾಲಾಶ್ರೀ ಪುತ್ರಿ ಅನನ್ಯಾ ರಾಮ್. ಇವರ ಮೂಲ ಹೆಸರು ಆರಾಧನಾ ರಾಮ್, ನಂತರ ರಾಧನಾ ಅಂದ ಬದಲಾಯಿಸಿ, ಕೊನೆಗೆ ಆರಾಧನಾ ಎನ್ನುವ ಹೆಸರಿನ ಮೂಲಕ ಕಾಟೇರ ಸಿನಿಮಾದಲ್ಲಿ ನಟಿಸಿದರು.