ತಿಮ್ಮಪ್ಪನ ಸನ್ನಿಧಿಯಲ್ಲಿ ಮಗಳೊಂದಿಗೆ ಶ್ರುತಿ… ಯಾವಾಗ ಸಿನಿಮಾದಲ್ಲಿ ನಟಿಸ್ತೀರಿ? ಗೌರೀನ ಫ್ಯಾನ್ಸ್ ಪ್ರಶ್ನೆ
ಕನ್ನಡ ಸಿನಿಮಾದ ಹಿರಿಯ ನಟಿ ಶ್ರುತಿ ಮತ್ತು ಅವರ ಮಗಳು ಗೌರಿ ಶ್ರುತಿ ತಿರುಪತಿಗೆ ತೆರಳಿ ತಿಮ್ಮನ ದರ್ಶನ ಪಡೆದು ಬಂದಿದ್ದು, ಗೌರಿ ಸುಂದರ ಕ್ಷಣಗಳ ಫೋಟೋ ಹಂಚಿಕೊಂಡಿದ್ದಾರೆ.
ಕನ್ನಡ ಸಿನಿಮಾ ರಂಗದ ಜನಪ್ರಿಯ ನಟಿ ಶ್ರುತಿ ಮತ್ತು ಅವರ ಮಗಳು ಗೌರಿ ಶ್ರುತಿ ಇತ್ತೀಚೆಗೆ ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ತೆರಳಿದ್ದು, ಅಲ್ಲಿನ ಸುಂದರ ಫೋಟೋಗಳನ್ನು ತಮ್ಮ ಸೋಶಿಯಲ್ ಮಿಡಿಯಾದಲ್ಲಿ ಶೇರ್ ಮಾಡಿದ್ದಾರೆ.
ತಿರುಪತಿ ತಿಮ್ಮಪ್ಪನ ದೇಗುಲದ ಮುಂದೆ ಅಮ್ಮ ಮಗಳು ಜೊತೆಯಾಗಿ ಬಿಳಿ ಬಣ್ಣದ ಸೀರೆಯುಟ್ಟು ತೆಗೆದಿರುವ ಫೋಟೋಗಳು, ಗೌರಿ ಒಬ್ಬರೇ ನಿಂತಿರುವ ಫೋಟೋಗಳು ಮತ್ತು ದೇಗುಲದ ಒಂದಷ್ಟು ಫೋಟೋಗಳನ್ನು ಗೌರಿ (Gouri Shruthi) ಹಂಚಿಕೊಂಡಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ (social media) ಆಕ್ಟೀವ್ ಆಗಿರುವ ಗೌರಿ ಹೆಚ್ಚಾಗಿ ತಮ್ಮ ಫ್ಯಾಮಿಲಿ ಫೋಟೋ, ದೇಗುಲ ದರ್ಶನ ಮತ್ತು ಟ್ರಾವೆಲ್ ಫೋಟೋಗಳನ್ನು ಶೇರ್ ಮಾಡುತ್ತಿರುತ್ತಾರೆ, ಜೊತೆಗೆ ತಮ್ಮ ಹಾಡಿನ ವಿಡೀಯೋಗಳನ್ನು ಸಹ ಹಂಚಿಕೊಳ್ಳುತ್ತಾರೆ.
ಹೆಚ್ಚಾಗಿ ದೇಗುಲಗಳಿಗೆ ಭೇಟಿ ನೀಡುತ್ತಾ, ದೇವರ ದರ್ಶನಕ್ಕೆ ಹೋಗುವಾಗಲೆಲ್ಲಾ ಸೀರೆ, ಲಂಗ ದಾವಣಿ ಹಾಕಿ, ತಲೆತುಂಬಾ ಹೂವು ಮುಡಿಯುವ ಗೌರಿ ಅಂದ್ರೆ ಅಭಿಮಾನಿಗಳಿಗೆ ಸಿಕ್ಕಾಪಟ್ಟೆ ಇಷ್ಟ, ಇನ್ನು ಸಿನಿಮಾಕ್ಕೆ ಬಾರದೇ ಇದ್ದರೂ ಸಹ ಅಪಾರ ಅಭಿಮಾನಿಗಳನ್ನು ಪಡೆದಿದ್ದಾರೆ ಗೌರಿ.
ಈಗಷ್ಟೇ ಡಿಗ್ರಿ ಮುಗಿಸಿರುವ ಗೌರಿ, ನಟನೆಗಿಂತ ಹೆಚ್ಚಾಗಿ ಸಂಗೀತದ ಕಡೆಗೆ ಹೆಚ್ಚಿನ ಒಲವು ತೋರಿಸಿದ್ದಾರೆ. ಹೆಚ್ಚಾಗಿ ಸಿನಿಮಾದ ಹಾಡುಗಳು, ದೇವರ ನಾಮ ಸಂಕೀರ್ತನೆ, ಇಂಗ್ಲಿಷ್ ಹಾಡುಗಳನ್ನು ಮಧುರವಾಗಿ ಹಾಡುವ ಮೂಲಕ ಅಭಿಮಾನಿಗಳಿಂದ ಮೆಚ್ಚುಗೆ ಪಡೆದಿದ್ದಾರೆ ಗೌರಿ.
ತಿರುಪತಿ ತಿಮ್ಮಪ್ಪನ ದರ್ಶನದ ಸಮಯದಲ್ಲೂ ಗೌರಿ ಸೀರೆಯುಟ್ಟಿದ್ದು, ಅಭಿಮಾನಿಗಳು ಇದು ಕನ್ನಡತಿಯ ಗತ್ತು, ಸೀರೆಯುಟ್ಟ ಮುದ್ದು ಗೌರಿ ತುಂಬಾನೆ ಚೆನ್ನಾಗಿ ಕಾಣಿಸ್ತಾರೆ, ಗೊಂಬೆ ಥರ ಕಾಣಿಸ್ತಿದ್ದೀರಿ, ಕ್ರಶ್ ಆಗೋಯ್ತು ಎಂದೆಲ್ಲಾ ಜನ ಕಾಮೆಂಟ್ ಮಾಡಿದ್ದಾರೆ.
ಇನ್ನು ಒಂದಷ್ಟು ಜನ ನೀವು ಯಾಕಿನ್ನು ನಟನೆಗೆ ಎಂಟ್ರಿ ಕೊಟ್ಟಿಲ್ಲ ಎಂದು ಸಹ ಕೇಳಿದ್ದಾರೆ. ಹೆಚ್ಚಾಗಿ ಅಮ್ಮ ಶ್ರುತಿ (Shruthi) ಜೊತೆ ಸಿನಿಮಾ ಕಾರ್ಯಕ್ರಮಗಳಲ್ಲಿ, ಶೂಟಿಂಗ್ ಗಳಲ್ಲಿ ಕಾಣಿಸಿಕೊಳ್ಳುವ ಗೌರಿ ಇಲ್ಲಿವರೆಗೂ ತಾವು ಸಿನಿಮಾದಲ್ಲಿ ನಟಿಸುವ ಬಗ್ಗೆ ಮತ್ತು ಅದರಲ್ಲಿ ಆಸಕ್ತಿ ಇದೆಯೋ ಎನ್ನುವ ಬಗ್ಗೆ ಮಾತನಾಡಿಲ್ಲ. ಆದ್ರೆ ಸಂಗೀತ ಕ್ಷೇತ್ರದಲ್ಲಿ ಸಾಧನೆ ಮಾಡಬೇಕು ಎಂದು ಹೇಳಿದ್ದರು. ಇವರು ಆಲ್ಬಂ ಹಾಡೊಂದನ್ನು ಹಾಡಿದ್ದಾರೆ.