ಅಕ್ಕನಂತೆ ಸುಂದ್ರಿ ಸಪ್ತಮಿ ಗೌಡ ತಂಗಿ ಉತ್ತರೆ ಗೌಡ…ಈಕೆಯೂ ನ್ಯಾಷನಲ್ ಸ್ವಿಮ್ಮರ್
ಕಾಂತಾರ ಸಿನಿಮಾ ಮೂಲಕ ಕನ್ನಡಿಗರ ಮನೆಮಾತಾಗಿರುವ ಸಪ್ತಮಿ ಗೌಡಗೆ ಒಬ್ಬ ಮುದ್ದಾದ ತಂಗಿ ಇದ್ದಾರೆ. ಆಕೆ ಕೂಡ ನ್ಯಾಷನಲ್ ಲೆವೆಲ್ ಸ್ವಿಮ್ಮರ್ ಅನ್ನೋದು ಗೊತ್ತಿದ್ಯಾ ನಿಮಗೆ.
ಕಾಂತಾರ ಸಿನಿಮಾದಲ್ಲಿ (Kantara Film) ಫಾರೆಸ್ಟ್ ಆಫೀಸರ್ ಲೀಲಾ ಪಾತ್ರದಲ್ಲಿ ಅದ್ಭುತವಾಗಿ ನಟಿಸುವ ಮೂಲಕ ಕನ್ನಡಿಗರ ಮನ ಗೆದ್ದ ನಟಿ ಸಪ್ತಮಿ ಗೌಡ. ಆ ಸಿನಿಮಾ ಮೂಲಕ ನಟಿ ಲಕ್ಷಾಂತರ ಅಭಿಮಾನಿಗಳನ್ನು ಪಡೆದುಕೊಳ್ಳುವ ಮೂಲಕ ಹೊಸ ಅಲೆಯನ್ನೇ ಸೃಷ್ಟಿಸಿದ ನಟಿ ಇವರು.
ಕಾಂತಾರ ಸಿನಿಮಾ ಮಾತ್ರವಲ್ಲ, ಯುವ ಸಿನಿಮಾದಲ್ಲೂ ತಮ್ಮ ಅಮೋಘ ಅಭಿನಯದ ಮೂಲಕ ಮೋಡಿ ಮಾಡಿದ ಚೆಲುವೆ ಇವರು. ಇವರ ತಂದೆ ಪೊಲೀಸ್ ಆಫೀಸರ್ ಎಸ್ ಕೆ ಉಮೇಶ್ ಅನ್ನೋದು ನಿಮಗೆ ಗೊತ್ತೆ ಇದೆ ಅಲ್ವಾ.
ತಮ್ಮ ಮುದ್ದಾದ ಲುಕ್ ಮೂಲಕ ಕನ್ನಡಿಗರ ಮನ ಗೆದ್ದ ಯುವ ನಟಿ ಸಪ್ತಮಿ ಗೌಡ (Sapthami Gowda)ನಟಿಯಾಗೋದಕ್ಕೂ ಮುನ್ನ ನ್ಯಾಷನಲ್ ಲೆವೆಲ್ ಸ್ವಿಮ್ಮರ್ ಕೂಡ ಆಗಿದ್ದರು ಅನ್ನೋದು ಗೊತ್ತೇ ಇದೆ ಅಲ್ವಾ? ಸಪ್ತಮಿ ಗೌಡ ಸಹೋದರಿ ಕೂಡ ನ್ಯಾಷನಲ್ ಸ್ವಿಮ್ಮರ್ ಆಗಿದ್ದು, ಅಕ್ಕ ಸಪ್ತಮಿಗಿಂತಲೂ ಸುಂದರಿಯಾಗಿದ್ದಾರೆ ಇವರು.
ಹೌದು, ಸಪ್ತಮಿ ಗೌಡ ಸಹೋದರಿಯ ಹೆಸರು ಉತ್ತರೆ ಗೌಡ (Uttare Gowda). ಈಕೆ ಸಿನಿಮಾದಿಂದ ದೂರ ಉಳಿದಿದ್ದಾರೆ. ಆದರೆ ಅಕ್ಕನಂತೆ ಸ್ವಿಮ್ಮಿಂಗ್ ನಲ್ಲಿ ರಾಷ್ಟ್ರಮಟ್ಟದಲ್ಲಿ ಹೆಸರು ಮಾಡಿದ್ದಾರೆ ಈ ಚೆಲುವೆ. ನೋಡೋದಕ್ಕೂ ಸಪ್ತಮಿಯಂತೆ, ಎತ್ತರದ ಪರ್ಸನಾಲಿಟಿ ಇವರದ್ದು.
ಸಪ್ತಮಿ ಗೌಡ ಇತ್ತೀಚೆಗೆ ಹೊಸದಾಗಿ ಫೋಟೊ ಶೂಟ್ ಮಾಡಿಸಿಕೊಂಡಿದ್ದು, ಲಂಗ ಮತ್ತು ಬ್ಲೌಸ್ ನಲ್ಲಿ ತುಂಬಾನೆ ಮುದ್ದಾಗಿ ಕಾಣಿಸುತ್ತಿದ್ದರು. ಇದೇ ಫೋಟೊ ಶೂಟ್ ನಲ್ಲಿ ಸಹೋದರಿ ಉತ್ತರೇ ಗೌಡ ಕೂಡ ಕಾಣಿಸಿಕೊಂಡಿದ್ದಾರೆ.
ಸಪ್ತಮಿ ಗೌಡ ಪರ್ಪಲ್ ಬಣ್ಣದ ಲಂಗ ಬ್ಲೌಸ್ ನಲ್ಲಿ ಮಿಂಚಿದರೆ, ಉತ್ತರೆ ಗೌಡ ಬಿಳಿ ಬಣ್ಣದ ಲಂಗ ಮತ್ತು ಬ್ಲೌಸ್ ಮುದ್ದಾಗಿ ಕಾಣಿಸಿಕೊಂಡಿದ್ದಾರೆ. ಇವರಿಬ್ಬರ ಫೋಟೊ ಶೂಟನ್ನು ಸಿಕ್ಕಾಪಟ್ಟೆ ಜನ ಮೆಚ್ಚಿಕೊಂಡಿದ್ದಾರೆ.