ರೆಡ್ ಬ್ಲೇಜರ್ ತೊಟ್ಟ 'ಜಾಕಿ' ಭಾವನಾ: ಕಣ್ಣಲ್ಲೇ ಕೊಲ್ಲುವ 'ಕೋಲ್ಮಿಂಚು' ಎಂದ ಫ್ಯಾನ್ಸ್!
ಸೌತ್ ಬ್ಯೂಟಿಫುಲ್ ನಟಿ ಭಾವನಾ ಮೆನನ್ ಮಲಯಾಳಂ ಮಾತ್ರವಲ್ಲದೇ ಕನ್ನಡ, ತೆಲುಗು, ತಮಿಳು ಭಾಷೆಯ ಸಿನಿಮಾಗಳಲ್ಲಿ ಛಾಪು ಮೂಡಿಸಿದ್ದಾರೆ. ಇದೀಗ ಭಾವನಾ ಶೇರ್ ಮಾಡಿದ ಫೋಟೋಸ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
ಭಾವನಾ ಮೆನನ್ 16ನೇ ವಯಸ್ಸಿನಲ್ಲಿ 'ನಮ್ಮಳ್' ಎಂಬ ಮಲಯಾಳಂ ಚಿತ್ರದ ಮೂಲಕ ಬಣ್ಣದ ಲೋಕ ಪ್ರವೇಶಿಸಿದರು. 2010ರಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ನಟನೆಯ 'ಜಾಕಿ' ಚಿತ್ರದ ಮೂಲಕ ಸ್ಯಾಂಡಲ್ವುಡ್ಗೆ ಕಾಲಿಟ್ಟರು.
ಗೋಲ್ಡನ್ ಸ್ಟಾರ್ ಗಣೇಶ್ ಜೊತೆ 'ರೋಮೀಯೋ' ಹಾಗೂ '99' ಸಿನಿಮಾದಲ್ಲಿ ನಟಿಸಿ ಕರುನಾಡ ಪ್ರೇಕ್ಷಕರಿಗೆ ಮತ್ತಷ್ಟು ಸನಿಹವಾದರು. ಬಳಿಕ ಟಗರು, ಇನ್ಸ್ಪೆಕ್ಟರ್ ವಿಕ್ರಮ್, ಭಜರಂಗಿ 2, ಗೋವಿಂದ ಗೋವಿಂದ, ಶ್ರೀಕೃಷ್ಣ @ಜಿಮೈಲ್.ಕಾಮ್ ಚಿತ್ರಗಳಲ್ಲಿ ನಟಿಸಿದರು.
ಇದೀಗ ಸ್ಯಾಂಡಲ್‌ವುಡ್ ನಟಿ ಭಾವನಾ ಅವರು ಸೂಪರ್ ಆಗಿ ಕಾಣಿಸಿಕೊಂಡಿದ್ದಾರೆ. ಜಾಕಿ ಬೆಡಗಿ ರೆಡ್ ಬ್ಲೇಜರ್ ಹಾಗೂ ವೈಟ್ ಶರ್ಟ್ ಧರಿಸಿಕೊಂಡು ನಟಿ ಬ್ಯೂಟಿಫುಲ್ ಆಗಿ ಕಾಣಿಸಿಕೊಂಡಿದ್ದಾರೆ.
ಜೊತೆಗೆ ಸುಂದರವಾದ ರಿಂಗ್ಸ್ ಧರಿಸಿಕೊಂಡು ಕ್ಯೂಟ್ ಆಗಿ ಭಾವನಾ ಸ್ಮೈಲ್ ಮಾಡಿದ್ದಾರೆ. ನಟಿಯ ಶಾರ್ಟ್ ಹೇರ್ಸ್ಟೈಲ್ ಸಖತ್ ಆಗಿ ಕಾಣಿಸಿದೆ. ನಟಿ ಮನಮೋಹಕವಾಗಿ ಆಗಿ ಸ್ಮೈಲ್ ಕೊಟ್ಟಿದ್ದಾರೆ.
ಭಾವನಾ ಅವರ ಈ ಲುಕ್ ನೋಡಿದ ನೆಟ್ಟಿಗರು ಲೇಡಿ ಬಾಸ್, ಏಂಜಲ್, ಬ್ಯೂಟಿ ಎಂದು ಹೊಗಳಿದ್ದಾರೆ. ಇವರು ತಮ್ಮ ನಟನೆ ಮತ್ತು ಸೌಂದರ್ಯದಿಂದಲೇ ಅಪಾರ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ.
ಇನ್ಸ್ಟಾದಲ್ಲಿ 2 ಮಿಲಿಯನ್ ಫಾಲೋವರ್ಸ್ ಸಂಪಾದಿಸಿರುವ ನಟಿ ಈವರೆಗೆ 231 ಪೋಸ್ಟ್ಗಳನ್ನು ಹಂಚಿಕೊಂಡಿದ್ದಾರೆ. ಅವರ ಇನ್ಸ್ಟಾ ಓಪನ್ ಮಾಡಿದರೆ ಸಾಕು, ಬಗೆ ಬಗೆಯ ಫೋಟೋಗಳನ್ನು ಕಾಣಬಹುದು.
ನಟಿ ಭಾವನಾ ಅವರು ತಮ್ಮ ಬಹುಕಾಲದ ಗೆಳೆಯ ಮತ್ತು ಕನ್ನಡ ನಿರ್ಮಾಪಕ ನವೀನ್ ಎಂಬುವವರನ್ನು ನವೆಂಬರ್ 22, 2018 ರಲ್ಲಿ ಮದುವೆ ಆಗಿದ್ದರು. ಜೀವನದಲ್ಲಿ ನಡೆದ ಕಹಿ ಘಟನೆಯನ್ನು ಮರೆತು ಸಂತೋಷವಾಗಿ ಜೀವನ ಸಾಗಿಸುತ್ತಿದ್ದಾರೆ.