Western Lookನಲ್ಲಿ ಚುಟುಚುಟು ಬೆಡಗಿ: ಕಾವೇರಿನು ನಮ್ಮದು ಈ Ashikaನು ನಮ್ಮವಳು ಎಂದ ಫ್ಯಾನ್ಸ್!
ಸ್ಯಾಂಡಲ್‌ವುಡ್‌ನ ನಟಿ ಆಶಿಕಾ ರಂಗನಾಥ್ ಇದೀಗ ಟಾಲಿವುಡ್ನಲ್ಲಿ ಬಹುಬೇಡಿಕೆಯ ನಟಿ ಆಗಿದ್ದಾರೆ. ಆಶಿಕಾ ಸ್ಯಾಂಡಲ್‌ವುಡ್, ಟಾಲಿವುಡ್ನಲ್ಲಿ ಅಭಿಮಾನಿಗಳ ಮನಗೆದ್ದಿದ್ದಾರೆ. ಇದೀಗ ಹೊಸ ಫೋಟೋಶೂಟ್ನಲ್ಲಿ ಮಿಂಚುತ್ತಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ಆಶಿಕಾ ರಂಗನಾಥ್ ಸಖತ್ ಆ್ಯಕ್ಟಿವ್ ಆಗಿದ್ದಾರೆ. ಅಭಿಮಾನಿಗಳೊಂದಿಗೆ ಟಚ್‌ನಲ್ಲಿರುವ ಆಶಿಕಾ ರಂಗನಾಥ್, ಆಗಾಗೆ ತಮ್ಮ ಫೋಟೋಗಳನ್ನು ಹಂಚಿಕೊಳ್ತಾರೆ. ನಟಿಗೆ ಸೋಶಿಯಲ್ ಮೀಡಿಯಾದಲ್ಲಿ ಸಾವಿರಾರು ಫಾಲೋವರ್ಸ್ಗಳಿದ್ದಾರೆ.

ಆಶಿಕಾ ರಂಗನಾಥ್ ವೆಸ್ಟರ್ನ್ ಲುಕ್‌ನಲ್ಲಿರುವ ಪೋಟೋಗಳನ್ನು ಪೋಸ್ಟ್ ಮಾಡಿದ್ದಾರೆ. ಇದನ್ನು ನೋಡಿದ ನೆಟ್ಟಿಗರು ಬ್ಯೂಟಿ, ಸ್ವೀಟಿ, ಬೇಬಿ ಡಾಲ್, ಮಿಲ್ಕ್ ಬ್ಯೂಟಿ ಸೇರಿದಂತೆ ಕಾವೇರಿನು ನಮ್ಮದು ಈ ಆಶಿಕಾನು ನಮ್ಮವಳು ಅಂತೆಲ್ಲಾ ಪ್ರತಿಕ್ರಿಯೆ ನೀಡಿದ್ದಾರೆ.
ಮದಗಜ ಮಿಲ್ಕ್ ಬ್ಯೂಟಿ ಆಶಿಕಾ ರಂಗನಾಥ್, ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. ಫಿಟ್ನೆಸ್ ವಿಚಾರದಲ್ಲೂ ಆಶಿಕಾ ರಂಗನಾಥ್ ತುಂಬಾ ಶಿಸ್ತು ಕಾಪಾಡಿಕೊಂಡು ಬಂದಿದ್ದಾರೆ. ಶೂಟಿಂಗ್ ಬ್ಯುಸಿಯಲ್ಲೂ ಆಶಿಕಾ ವರ್ಕೌಟ್ ಮಿಸ್ ಮಾಡೋದಿಲ್ಲ.
ಕನ್ನಡ ಚಿತ್ರರಂಗದಲ್ಲಿ ಮಿಲ್ಕ್ ಬ್ಯೂಟಿ ಎಂದೇ ಖ್ಯಾತಿಯಾಗಿರುವ ಆಶಿಕಾ ರಂಗನಾಥ, 2016 ರಿಂದ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಇವರು ಕ್ರೇಜಿ ಬಾಯ್ ಚಿತ್ರದಿಂದ ಸಿನಿಪಯಣ ಆರಂಭಿಸಿದರು. ಕನ್ನಡಕ್ಕೂ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ್ದಾರೆ.
ನಾಗಾರ್ಜುನ ಅವರ ‘ನಾ ಸಾಮಿ ರಂಗ’ ಸಿನಿಮಾಗೆ ಆಶಿಕಾ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಈಗಾಗಲೇ ಫೋಟೋ ಶೂಟ್ ಕೂಡಾ ನಡೆದಿದೆ. ಆಶಿಕಾ ಈ ಸಿನಿಮಾದಲ್ಲಿ ಸಖತ್ ಗ್ಲಾಮರಸ್ ಆಗಿ ಕಾಣಿಸಿಕೊಳ್ಳಲಿದ್ದಾರಂತೆ.
ಸ್ಯಾಂಡಲ್‌ವುಡ್‌ನ ಚುಟು ಚುಟು ಬೆಡಗಿ ಆಶಿಕಾ ರಂಗನಾಥ್ ತಮ್ಮ ನಟನೆಯ ಜೊತೆಗೆ ಸೌಂದರ್ಯದಿಂದಲೂ ಅಭಿಮಾನಿಗಳನ್ನು ಹೆಚ್ಚಿಸಿಕೊಂಡಿದ್ದಾರೆ. ಬಗೆ ಬಗೆಯ ಫೋಟೋಶೂಟ್ ಮೂಲಕ ಕನ್ನಡಿಗರಿಗೆ ಮತ್ತಷ್ಟು ಸನಿಹವಾಗಿದ್ದಾರೆ.