- Home
- Entertainment
- Sandalwood
- ಅವಳಿ ಮಕ್ಕಳ ಜೊತೆ ನಟಿ ಅಮೂಲ್ಯಾ ದಂಪತಿ ಸಂಕ್ರಾಂತಿ ಸಂಭ್ರಮ; ಮುದ್ದಾದ ಕುಟುಂಬ ಎಂದ ಫ್ಯಾನ್ಸ್
ಅವಳಿ ಮಕ್ಕಳ ಜೊತೆ ನಟಿ ಅಮೂಲ್ಯಾ ದಂಪತಿ ಸಂಕ್ರಾಂತಿ ಸಂಭ್ರಮ; ಮುದ್ದಾದ ಕುಟುಂಬ ಎಂದ ಫ್ಯಾನ್ಸ್
ಸ್ಯಾಂಡಲ್ ವುಡ್ ನಟಿ ಅಮೂಲ್ಯಾ ಮತ್ತು ಜಗದೀಶ್ ದಂಪತಿ ಅದ್ದೂರಿಯಾಗಿ ಸಂಕ್ರಾಂತಿ ಸಂಭ್ರಮಿಸಿದ್ದಾರೆ. ಅಮೂಲ್ಯಾ ಅವರ ಮುದ್ದಾದ ಕುಟುಂಬದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.

ಸ್ಯಾಂಡಲ್ ವುಡ್ ನಟಿ ಅಮೂಲ್ಯಾ ಮತ್ತು ಜಗದೀಶ್ ದಂಪತಿ ಅದ್ದೂರಿಯಾಗಿ ಸಂಕ್ರಾಂತಿ ಸಂಭ್ರಮಿಸಿದ್ದಾರೆ. ಮುದ್ದಾದ ಮಕ್ಕಳ ಜೊತೆ ಸಂಕ್ರಾಂತಿ ಹಬ್ಬ ಆಚರಿಸಿದ ಅಮೂಲ್ಯಾ ಮತ್ತು ಜಗದೀಶ್ ಸುಂದರ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ.
ಮುದ್ದಾದ ಅವಳಿ ಮಕ್ಕಳಾದ ಅಥರ್ವ್ ಮತ್ತು ಆಧವ್ ಇಬ್ಬರೂ ಕ್ಯಾಮರಾಗೆ ಪೋಸ್ ನೀಡಿದ್ದಾರೆ. ಅಮೂಲ್ಯಾ ಮತ್ತು ಜಗದೀಶ್ ಇಬ್ಬರೂ ಮಕ್ಕಳನ್ನು ಎತ್ತಿಕೊಂಡು ಪೋಸ್ ನೀಡಿದ್ದಾರೆ. ಸುಂದರ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
ಅಂದಹಾಗೆ ಮುದ್ದಾದ ಕುಟುಂಬವನ್ನು ಸುಂದರವಾಗಿ ಸೆರೆ ಹಿಡಿದುದ್ದು ಪಿಕೆ ಸ್ಟುಡಿಯೋ ಫೋಟೋಗ್ರಫಿ. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಪೋಟೋಗಳಿಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಮುದ್ದಾ ಕುಟುಂಬ ಎಂದು ಹಾಡಿಹೊಗಳುತ್ತಿದ್ದಾರೆ. ಅಮೂಲ್ಯಾ ಮತ್ತು ಜಗದೀಶ್ ಜೊತೆ ಮುದ್ದಾದ ಹಸು ಕೂಡ ಕಾಣಿಸಿಕೊಂಡಿದೆ.
ಕಳೆದ ವರ್ಷ ನವೆಂಬರ್ ನಲ್ಲಿ ಮುದ್ದಾದ ಮಕ್ಕಳಿಗೆ ಅದ್ದೂರಿಯಾಗಿ ನಾಮಕರಣ ಮಾಡಿದರು. ಸಮಾರಂಭದಲ್ಲಿ ಸ್ಯಾಂಡಲ್ ವುಡ್‌ನ ಅನೇಕ ಗಣ್ಯರು ಹಾಜರಿದ್ದರು. ಅಮೂಲ್ಯಾ ಮಕ್ಕಳ ನಾಮಕರಣದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ನಟಿ ಅಮೂಲ್ಯಾ ಮಾರ್ಚ್ 1, 2022ರಂದು ಅವಳಿ ಗಂಡು ಮಕ್ಕಳಿಗೆ ಜನ್ಮ ನೀಡಿದ್ದರು. ನಾಲ್ಕು ತಿಂಗಳ ಬಳಿಕ ಮಕ್ಕಳ ಕ್ಯೂಟ್ ಕೈಗಳ ಪೋಟೋವನ್ನು ರಿವೀಲ್ ಮಾಡಿದ್ದರು. ಅಮೂಲ್ಯಾ ಕ್ಯೂಟ್ ಮಕ್ಕಳು ಹೇಗಿದ್ದಾರೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಇತ್ತು. ಬಳಿಕ 6 ತಿಂಗಳಿಗೆ ಮಕ್ಕಳ ಮುದ್ದಾದ ಫೋಟೋವನ್ನು ಹಂಚಿಕೊಂಡಿದ್ದರು.
ಸಂಕ್ರಾಂತಿ ಹಬ್ಬವನ್ನು ಎಲ್ಲರೂ ಅದ್ದೂರಿಯಾಗಿ ಆಚರಣೆ ಮಾಡಿದ್ದಾರೆ. ಅದರಲ್ಲೂ ಸ್ಯಾಂಡಲ್ ವುಡ್‌ನ ಬಹುತೇಕ ಮಂದಿ ಹಬ್ಬವನ್ನು ಗ್ರ್ಯಾಂಡ್ ಆಗಿ ಆಚರಿಸಿದ್ದಾರೆ. ರಾಕಿಂಗ್ ಸ್ಟಾರ್ ಯಶ್ ದಂಪತಿ, ರಕ್ಷಿತಾ ಪ್ರೇಮ್ ಸೇರಿದಂತೆ ಅನೇಕರು ಹಬ್ಬವನ್ನು ಅದ್ದೂರಿಯಾಗಿ ಆಚರಣೆ ಮಾಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.