ಸಿಂಪಲ್ ಸುನಿ ಹೊಸ ಚಿತ್ರಕ್ಕೆ ನಾಯಕಿಯಾಗ್ತಿದ್ದಾರೆ ನಟಿ ಶ್ರುತಿ ಫ್ಯಾಮಿಲಿಯ ಕುಡಿ
ಸಿಂಪಲ್ ಸುನಿ ನಿರ್ದೇಶನದ ದೇವರು ರುಜು ಮಾಡಿದನು ಸಿನಿಮಾಗೆ ಮತ್ತೊಬ್ಬ ನಾಯಕಿಯಾಗಿ ನಟಿ ಶ್ರುತಿ ಕುಟುಂಬದ ಕುಡಿ ಎಂಟ್ರಿ ಕೊಡ್ತಿದ್ದಾರೆ. ಇದು ಶ್ರುತಿ ಮಗಳಲ್ಲ ಮತ್ಯಾರು ನೋಡೋಣ.

ಸಿಂಪಲ್ ಸುನಿ (Simple Suni) ಹೊಸ ಸಿನಿಮಾ ನಿರ್ದೇಶನ ಮಾಡಲಿದ್ದು, ಈಗಾಗಲೇ ದೇವರು ರುಜು ಮಾಡಿದನು ಸಿನಿಮಾ ಪೋಸ್ಟರ್ ಬಿಡುಗಡೆಯಾಗಿ ಭಾರಿ ಸದ್ದು ಮಾಡ್ತಿದೆ. ಸಿಂಪಲ್ ಸುನಿ ಸಿಂಪಲ್ ಆಗಿ ಉಳಿದಿಲ್ಲ ಅಂತಿದ್ದಾರೆ ಜನ. ಯಾಕಂದ್ರೆ ಸಿನಿಮಾ ಪೋಸ್ಟರ್ ತುಂಬಾನೆ ವೈಲ್ಡ್ ಆಗಿತ್ತು.
ಸಿಂಪಲ್ ಸುನಿ ಸಿನಿಮಾಗಳೆಂದರೆ ತುಂಬಾನೆ ವಿಶಿಷ್ಟವಾಗಿರುತ್ತೆ. ಹೊಸ ಹೊಸ ಪ್ರತಿಭೆಗಳನ್ನು ಸಹ ಸುನಿ ಪರಿಚಯಿಸುತ್ತಾರೆ. ಈ ಸಿನಿಮಾಗೆ ಈಗ ನಾಯಕನಾಗಿ ವಿರಾಜ್ ಆಯ್ಕೆಯಾಗಿದ್ದಾರೆ. ಅಲ್ಲದೇ ಇಬ್ಬರು ನಾಯಕಿಯರೂ ಕೂಡ ಇದ್ದಾರೆ. ಮಿಸ್ ಇಂಡಿಯಾ ಕಂಟೆಸ್ಟಂಟ್ ಆಗಿದ್ದ ದಿವಿತಾ ರೈ ಮತ್ತು ಕೀರ್ತಿ ಕೃಷ್ಣ (Keerthi Krishna) ಈ ಸಿನಿಮಾದ ಇಬ್ಬರು ನಾಯಕಿಯರು.
ಈ ಕೀರ್ತಿ ಕೃಷ್ಣ ಬೇರೆ ಯಾರೂ ಅಲ್ಲ ನಟಿ ಶ್ರುತಿ (Actress Shruthi) ಮತ್ತು ಶರಣ್ ಅವರ ಸಹೋದರಿ ಉಷಾ ಅವರ ಪುತ್ರಿ. ಹಾಗಾಗಿ ಇದೀಗ ಶ್ರುತಿ ಮತ್ತು ಶರಣ್ ಬಳಿಕ, ಇವರ ಕುಟುಂಬದ ಮತ್ತೊಂದು ಕುಡಿ ಕೂಡ ಸಿನಿಮಾ ರಂಗಕ್ಕೆ ಎಂಟ್ರಿ ಕೊಡ್ತಿದ್ದಾರೆ.
ಕೀರ್ತಿ ಕೃಷ್ಣಾ ಈಗಾಗಲೇ ಕನ್ನಡ ಸಿನಿಮಾವೊಂದಕ್ಕೆ ಬಣ್ಣ ಹಚ್ಚಿದ್ದರು. ಆದರೆ ಆ ಸಿನಿಮಾ ರಿಲೀಸ್ ಆಗಿಲ್ಲ, ಜೊತೆಗೆ ಸಿನಿಮಾ ಬಗ್ಗೆ ಯಾವ ಮಾಹಿತಿಯೂ ಇಲ್ಲ. ಹಾಗಾಗಿ ದೇವರು ರುಜು ಮಾಡಿದನು ಕೀರ್ತಿಯವರ ಮೊದಲ ಸಿನಿಮಾವಾಗಲಿದೆ.
ಕೀರ್ತಿ ಕೃಷ್ಣ ದೇವರು ರುಜು ಮಾಡಿದನು (Devaru Ruju Madidanu) ಸಿನಿಮಾದಲ್ಲಿ ಮುಗ್ಧ ವೀಣಾ ವಾದಕಿಯ ಪಾತ್ರ ಮಾಡುತ್ತಿದ್ದಾರೆ.. ಈಗಾಗಲೇ ಕೀರ್ತಿಯ ಪೋಸ್ಟರ್ ಕೂಡ ರಿಲೀಸ್ ಆಗಿದ್ದು, ಕೀರ್ತಿ ಈ ಸಿನಿಮಾದಲ್ಲಿ ಸುಶ್ರಾವ್ಯ ಎನ್ನುವ ವೀಣಾ ವಾದಕಿಯ ಪಾತ್ರದಲ್ಲಿ ನಟಿಸುತ್ತಿದ್ದಾರೆ.
ಪುಷ್ಕರ್ ಮಲ್ಲಿಕಾರ್ಜುನಯ್ಯ ಅವರ ನಟನಾ ಶಾಲೆಯಲ್ಲಿ ನಟನಾ ಕೋರ್ಸ್ (Acting course) ಕಲಿತಿರುವ ಕೀರ್ತಿ ಇದೀಗ ದೇವರು ರುಜು ಮಾಡಿದನು ಸಿನಿಮಾ ಮೂಲಕ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಈ ಸಿನಿಮಾದಲ್ಲಿ ಸಂಗೀತವನ್ನೆ ಜೀವನವಾಗಿಸಿರುವ ಸುಶ್ರಾವ್ಯ ಎನ್ನುವ ವೀಣಾ ವಾದಕಿಯಾಗಿ ಕೀರ್ತಿ ನಟಿಸಿದ್ದಾರೆ.
ಗ್ರೀನ್ ಹೌಸ್ ಮೂವೀಸ್ ಬ್ಯಾನರ್ ನಡಿಯಲ್ಲಿ ಬರ್ತಿರುವ ದೇವರು ರುಜು ಮಾಡಿದನು ಸಿನಿಮಾಗೆ ಗೋವಿಂದ್ ರಾಜ್ ಸಿಟಿ ನಿರ್ಮಾಣ ಮಾಡುತ್ತಿದ್ದಾರೆ. ಜೆಜೆ ಮತ್ತು ಜೇಡ್ ಸ್ಯಾಂಡಿ ಸಂಗೀತ ನಿರ್ದೇಶನ, ಸಂತೋಷ್ ರೈ ಪತಾಜಿ ಛಾಯಾಗ್ರಹಣ, ವಿನಯ್ ಸಂಕಲನ ಚಿತ್ರಕ್ಕಿದೆ. ಬೆಂಗಳೂರು, ಉತ್ತರ ಕನ್ನಡ, ಗೋವಾ ಸುತ್ತಮುತ್ತ ಚಿತ್ರೀಕರಣ ನಡೆಯಲಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.