- Home
- Entertainment
- Sandalwood
- ಮಹಾಕುಂಭ ಮೇಳದಲ್ಲಿ ನಟ ರಾಜ್ ಬಿ ಶೆಟ್ಟಿ... ಜೊತೆಯಾದ ನಿರೂಪಕಿ ಅನುಶ್ರೀ, ಕಿರಣ್ ರಾಜ್
ಮಹಾಕುಂಭ ಮೇಳದಲ್ಲಿ ನಟ ರಾಜ್ ಬಿ ಶೆಟ್ಟಿ... ಜೊತೆಯಾದ ನಿರೂಪಕಿ ಅನುಶ್ರೀ, ಕಿರಣ್ ರಾಜ್
ಪ್ರಯಾಗ್ ರಾಜ್ ನಲ್ಲಿ ನಡೆಯುತ್ತಿರುವ ಕುಂಭಮೇಳಕ್ಕೆ ಚಂದನವನದ ನಟ, ನಿರ್ದೇಶಕ ರಾಜ್ ಬಿ ಶೆಟ್ಟಿ ತೆರಳಿದ್ದು, ಇವರಿಗೆ ನಿರೂಪಕಿ ಅನುಶ್ರೀ, ನಿರ್ದೇಶಕ ಕಿರಣ್ ರಾಜ್ ಸಾಥ್ ನೀಡಿದ್ದಾರೆ.

ಪ್ರಯಾಗ್ ರಾಜ್ ನಲ್ಲಿ ಮಹಾ ಕುಂಭಮೇಳ (Maha Kumbh Mela) ಅದ್ಧೂರಿಯಾಗಿ ನಡೆಯುತ್ತಿದೆ. ಈ ಕಾರ್ಯಕ್ರಮದಲ್ಲಿ ಭಾಗಿಯಾಗಲು, ದೇಶ, ವಿದೇಶದ ಮೂಲೆ ಮೂಲೆಯಿಂದ ಜನ ಆಗಮಿಸುತ್ತಿದ್ದಾರೆ. ಕನ್ನಡಿಗರ ದಂಡೆ ಅಲ್ಲಿ ಸೇರಿದೆ. ಇದೀಗ ಸ್ಯಾಂಡಲ್ ವುಡ್ ನಟ, ನಿರ್ದೇಶಕನಾಗಿ ಗುರುತಿಸಿಕೊಂಡಿರುವ ರಾಜ್ ಬಿ ಶೆಟ್ಟಿಯವರು ಮಹಾಕುಂಭಕ್ಕೆ ಭೇಟಿ ನೀಡಿದ್ದು, ಅಲ್ಲಿನ ತ್ರಿವೇಣಿ ಸಂಗಮದ ಮುಂದೆ ನಿಂತಿರುವ ಒಂದಷ್ಟು ಫೋಟೊಗಳನ್ನು ಅವರು ಹಂಚಿಕೊಂಡಿದ್ದಾರೆ.
ಯಾವಾಗಲೂ ಸಿಂಪಲ್ ಆಗಿರುವ ರಾಜ್ ಬಿ ಶೆಟ್ಟಿ (Raj B Shetty) ಬಿಳಿ ಶರ್ಟ್, ಕುತ್ತಿಗೆಯಲ್ಲಿ ರುದ್ರಾಕ್ಷಿ ಹಾರ ಧರಿಸಿ, ಹಣೆ ಮೇಲೆ ಗಂಧವನ್ನು ಹಚ್ಚಿ ಅದರ ಮೇಲೆ ಶ್ರೀರಾಮ್ ಎಂದು ಬರೆದುಕೊಂಡಿದ್ದಾರೆ. ಇನ್ನೊಂದು ವಿಶೇಷತೆ ಅಂದ್ರೆ, ರಾಜ್ ಬಿ ಶೆಟ್ಟಿ ಮಹಾಕುಂಭಕ್ಕೆ ಒಬ್ಬರೇ ತೆರಳಿಲ್ಲ, ಇವರಿಗೆ ಕರ್ನಾಟಕದ ಜನಪ್ರಿಯ ನಟಿ ನಿರ್ದೇಶಕಿ ಅನುಶ್ರೀಯವರು ಹಾಗೂ ಚಾರ್ಲಿ 777 ನಿರ್ದೇಶಕರಾಗಿರುವ ಕಿರಣ್ ರಾಜ್ ಕೂಡ ಸಾಥ್ ನೀಡಿದ್ದಾರೆ. ಜೊತೆಗೆ ಸರ್ಕಾರಿ ಹಿರಿಯಪ್ರಾಥಮಿಕ ಶಾಲೆ, ಕಾಂತಾರಾ ಸಿನಿಮಾ ಖ್ಯಾತಿಯ ರಂಜನ್ ಎಸ್ ಹಾಗೂ ಮತ್ತಿತರರು ಕೂಡ ಭಾಗಿಯಾಗಿದ್ದಾರೆ.
ನಿರೂಪಕಿ ಅನುಶ್ರೀಯವರು (Anchor Anushree) ಈ ವಾರ ಸರಿಗಮಪ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿರಲಿಲ್ಲ. ಹಾಗಾಗಿ ಅನುಶ್ರೀ ನಿರೂಪಣೆಗೆ ಗುಡ್ ಬೈ ಹೇಳುತ್ತಿದ್ದಾರೆ, ಅಥವಾ ಮದುವೆಯ ತಯಾರಿಯಲ್ಲಿದ್ದಾರೆ ಎನ್ನುವ ಸುದ್ದಿ ಕೇಳಿ ಬರುತ್ತಿತ್ತು. ಮದುವೆ ಶಾಪಿಂಗ್ ಮಾಡೋದಕ್ಕೆ ದುಬೈಗೆ ತೆರಳುವುದಾಗಿ ಸಹ ಗುಸು ಗುಸು ಕೇಳಿ ಬರುತ್ತಿತ್ತು. ಆದರೆ ಇದೀಗ ರಾಜ್ ಬಿ ಶೆಟ್ಟಿ ಹಾಗೂ ಇತರರೊಂದಿಗೆ ಮಹಾಕುಂಭಕ್ಕೆ ತೆರಳಿದ್ದಾರೆ.
ಅನುಶ್ರೀ ಈ ವರ್ಷ ಮದುವೆಯಾಗುವುದಾಗಿ (Anushree Marriage) ಕಳೆದ ವರ್ಷವೆ ತಿಳಿಸಿದ್ದರು. ಆದರೆ ಮದುವೆ ಯಾವಾಗ? ಹುಡುಗ ಯಾರು ಎನ್ನುವ ಪ್ರಶ್ನೆಗೆ ಮಾತ್ರ ಯಾವ ಉತ್ತರವೂ ಸಿಕ್ಕಿರಲಿಲ್ಲ. ಅಲ್ಲದೇ ಅನುಶ್ರೀ ಹಾಗೂ ರಾಜ್ ಬಿ ಶೆಟ್ಟಿ ಮದುವೆಯಾಗುತ್ತಾರೆ ಎನ್ನುವ ಗಾಳಿ ಸುದ್ದಿ ಕೂಡ ಹರಡಿತ್ತು. ಇದೀಗ ಮತ್ತೆ ಶೆಟ್ರ ಜೊತೆ ಅನುಶ್ರೀಯವರನ್ನು ನೋಡಿದ್ರೆ ಮತ್ತೆ ಆ ಮಾತಿಗೆ ಪುಷ್ಠಿ ನೀಡುತ್ತಿದೆ. ಯಾವುದಕ್ಕೂ ಅನುಶ್ರೀಯವರೇ ತಮ್ಮ ಮದುವೆ ಬಗ್ಗೆ ತಿಳಿಸುವವರೆಗೂ ಕಾದು ನೋಡಬೇಕು.