ಪ್ರಯಾಗ್ ರಾಜ್ ಕುಂಭಮೇಳದಲ್ಲಿ ಪುಣ್ಯಸ್ನಾನ ಮಾಡಿದ ನಟ ಪ್ರೇಮ್ ದಂಪತಿಗಳು
ಸ್ಯಾಂಡಲ್ ವುಡ್ ನಟ ಲವ್ಲಿ ಸ್ಟಾರ್ ಪ್ರೇಮ್ ತಮ್ಮ ಪತ್ನಿ ಜ್ಯೋತಿ ಜೊತೆ ಪ್ರಯಾಗ್ ರಾಜ್ ಕುಂಭಮೇಳಕ್ಕೆ ತೆರಳಿದ್ದು, ಅಲ್ಲಿ ತ್ರಿವೇಣಿ ಸಂಗಮದಲ್ಲಿ ಪುಣ್ಯಸ್ನಾನ ಮಾಡಿದ್ದಾರೆ.

ಸ್ಯಾಂಡಲ್’ವುಡ್ ನಟ ಲವ್ಲಿ ಸ್ಟಾರ್ ಪ್ರೇಮ್ (Lovely Star Prem) ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ ನಡೆಯುತ್ತಿರುವ ಕುಂಭಮೇಳಕ್ಕೆ ತೆರಳಿದ್ದು, ಪತ್ನಿ ಜ್ಯೋತಿ ಜೊತೆ ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನ ಮಾಡಿದ್ದಾರೆ. ತಾವು ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನ ಮಾಡುತ್ತಿರುವ ಫೋಟೊಗಳನ್ನು ನಟ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಕುಂಭಮೇಳ (Kumbhamela) ಆರಂಭವಾದಾಗಿನಿಂದ ದೇಶ, ವಿದೇಶದಿಂದ ಭಕ್ತರು ಕುಂಭ ಸ್ನಾನ ಮಾಡಲು ಪ್ರಯಾಗ್ ರಾಜ್ ನತ್ತ ಮುಖ ಮಾಡಿದ್ದಾರೆ. ಸೆಲೆಬ್ರಿಟಿಗಳು ಸಹ ತ್ರಿವೇಣಿ ಸಂಗಮದಲ್ಲಿ ಮಿಂದು ಪುನೀತರಾಗುತ್ತಿದ್ದಾರೆ. ಈ ಹಿಂದೆ ಕೆಜಿಎಫ್ ಬೆಡಗಿ ಶ್ರೀನಿಧಿ ಶೆಟ್ಟಿ ಪ್ರಯಾಗ್ ರಾಜ್ ಶಾಹಿ ಸ್ನಾನ ಮಾಡಿರುವ ವಿಡಿಯೋಗಳನ್ನು ಶೇರ್ ಮಾಡಿದ್ದರು, ಅಲ್ಲದೇ ನಿರೂಪಕಿ ಅನುಶ್ರೀ, ನಟ ರಾಜ್ ಬಿ ಶೆಟ್ಟಿ, ನಿರ್ದೇಶಕ ಕಿರಣ್ ರಾಜ್ ಜೊತೆಯಾಗಿ ಪ್ರಯಾಗ್ ರಾಜ್ ಗೆ ತೆರಳಿದ್ದರು.
ಇದೀಗ ನಟ ನೆನಪಿರಲಿ ಪ್ರೇಮ್ ಕುಂಭ ಸ್ನಾನ ಮಾಡಿ ಕೆಲವೊಂದು ಫೋಟೊಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. ಕುಂಭ ಮೇಳ (Kumbhamela)ಪುಣ್ಯ ಸ್ನಾನ . ಎಲ್ಲರ ಬಾಳು ಅಮೃತಮಯವಾಗಿರಲಿ ಎಂದು ಬರೆದುಕೊಂಡಿದ್ದಾರೆ. ಜೊತೆಗೆ ಪತ್ನಿ ಜೊತೆಗೆ ಪುಣ್ಯ ಸ್ನಾನ ಮಾಡಿರುವ ಫೋಟೊ ಹಂಚಿಕೊಂಡಿದ್ದು, ಈ ಜನ್ಮದ ಪುಣ್ಯದ ಜೊತೆಗೆ ಪುಣ್ಯ ಸ್ನಾನ ಎಂದು ಬರೆದುಕೊಂಡಿದ್ದಾರೆ.
ಪ್ರೇಮ್ ಅವರು ದೈವ ಭಕ್ತ ಅಂತಾನೆ ಹೇಳಬಹುದು. ಇವರು ದೇಗುಲಗಳಿಗೆ ಭೇಟಿ ನೀಡುತ್ತಲೇ ಇರುತ್ತಾರೆ. ಜನವರಿ ತಿಂಗಳಲ್ಲಿ ನಟ ಕೇರಳದ ಗುರುವಾಯುರು ಸನ್ನಿಧಾನಕ್ಕೆ ಭೇಟಿ ನೀಡಿದ್ದರು, ಅಲ್ಲದೇ ಮಾಲೆ ಧರಿಸಿ, ಶಬರಿ ಮಲೆ ಅಯ್ಯಪ್ಪ ಸ್ವಾಮಿಯ ದರ್ಶನ ಕೂಡ ಮಾಡಿ ಬಂದಿದ್ದರು. ಇದೀಗ ಪ್ರಯಾಗ್ ರಾಜ್ ತೆರಳಿ ತ್ರಿವೇಣಿ ಸಂಗಮದಲ್ಲಿ ಮಿಂದು ಪುಳಕಿತರಾಗಿದ್ದಾರೆ.
ಇನ್ನು ಸಿನಿಮಾ ವಿಚಾರಕ್ಕೆ ಬರೋದಾದ್ರೆ ಪ್ರೇಮ್ ಕೊನೆಯದಾಗಿ ಅಪ್ಪ ಐ ಲವ್ ಯೂ ಸಿನಿಮಾದಲ್ಲಿ ನಟಿಸಿದ್ದರು. ನಂತರ ಮಗಳು ಅಮೃತಾ ಪ್ರೇಮ್ ಸಿನಿಮಾದಲ್ಲೇ ಬ್ಯುಸಿಯಾಗಿದ್ದರು ಎವರ್ ಗ್ರೀನ್ ನಟ ಪ್ರೇಮ್. ಸದ್ಯದಲ್ಲೇ ಹೊಸ ಸಿನಿಮಾ ಒಂದರಲ್ಲಿ ಪೊಲೀಸ್ ಪಾತ್ರದಲ್ಲಿ ಪ್ರೇಮ್ ನಟಿಸುತ್ತಿದ್ದು, ಅದಕ್ಕಾಗಿ ಸಖತ್ತಾಗಿ ದೇಹವನ್ನು ದಂಡಿಸಿ, ಸ್ಲಿಮ್ ಆಗಿದ್ದಾರೆ, ಜೊತೆಗೆ ಉತ್ತಮ ಮೈಕಟ್ಟು ಕೂಡ ಬೆಳೆಸಿಕೊಂಡಿದ್ದಾರೆ.