- Home
- Entertainment
- Sandalwood
- Jockey 42 Movie Teaser: ಬೆಳ್ಳಂಬೆಳಗ್ಗೆ ಗುಡ್‌ನ್ಯೂಸ್ ಕೊಟ್ಟ Kiran Raj; ಫ್ಯಾನ್ಸ್‌ಗೆ ಹಬ್ಬದ ಸಂಭ್ರಮ
Jockey 42 Movie Teaser: ಬೆಳ್ಳಂಬೆಳಗ್ಗೆ ಗುಡ್‌ನ್ಯೂಸ್ ಕೊಟ್ಟ Kiran Raj; ಫ್ಯಾನ್ಸ್‌ಗೆ ಹಬ್ಬದ ಸಂಭ್ರಮ
Kiran Raj Movies: ಜಾಕಿ 42 ಸಿನಿಮಾದ ಟೀಸರ್ ಬಿಡುಗಡೆಯಾಗಿದ್ದು, ಟೀಸರ್ ಸಿನಿಮಾ ಪ್ರೇಕ್ಷಕನ ಗಮನ ಸೆಳೆದಿದೆ, ಗೋಲ್ಡನ್ ಗೇಟ್ ಸ್ಟುಡಿಯೋಸ್ ಬ್ಯಾನರ್‌ನಲ್ಲಿ ಭಾರತಿ ಸತ್ಯನಾರಾಯಣ ಅದ್ದೂರಿಯಾಗಿ ನಿರ್ಮಿಸಿದ್ದಾರೆ. ಹಾರ್ಸ್ ರೇಸ್ ಹಿನ್ನೆಲೆಯಲ್ಲಿ ನಡೆಯುವ ಕಥೆ ಈ ಟೀಸರ್‌ನ ಹೈಲೆಟ್ಸ್ ಇದಾಗಿದೆ.

ದ್ವಿಪಾತ್ರದಲ್ಲಿ ಕಿರಣ್ ರಾಜ್
ನೂರಾರು ಕುದುರೆಗಳು ಸಾವಿರಾರು ಸಹಕಲಾವಿದರು ಒಳಗೊಂಡ ದೃಶ್ಯಗಳು ಟೀಸರ್‌ನಲ್ಲಿ ನೋಡಿ ಪ್ರೇಕ್ಷಕನ ಕುತೂಹಲ ಹೆಚ್ಚಿಸಿದರೆ, ಕಿರಣ್ ರಾಜ್ ದ್ವಿಪಾತ್ರದಲ್ಲಿ ಅಭಿನಯಿಸಿದ್ದು, ಅವರ ಅಭಿಮಾನಿಗಳಿಗೆ ಇನ್ನಷ್ಟು ಸಿನಿಮಾ ನೋಡುವ ಕುತೂಹಲ ಹೆಚ್ಚಿಸಿದೆ.
ಬಿಡುಗಡೆ ಯಾವಾಗ?
ಈ ಪಾತ್ರಕ್ಕಾಗಿ ಅವರು ಸಾಕಷ್ಟು ತಯಾರಿ ನಡೆಸಿದ್ದಾರಂತೆ, ಮಾತಿನ ಬಾಗದ ಚಿತ್ರೀಕರಣ ಮುಗಿದಿದ್ದು ಎರಡು ಹಾಡುಗಳು ಬಾಕಿ ಇದ್ದು ಬಿಡುಗಡೆ ದಿನಾಂಕ ತಿಳಿಸುತ್ತೇನೆ ಎನ್ನುತ್ತಾರೆ ನಿರ್ಮಾಪಕರಾದ ಭಾರತಿ ಸತ್ಯನಾರಾಯಣ.
ಕಲಾವಿದರು ಯಾರು?
ವಿನೀದ್ ಯಜಮಾನ್ಯ ಸಂಗೀತ ನೀಡಿದ್ದು ರಾಗವೇಂದ್ರ ಬಿ ಕೋಲಾರ ಛಾಯಾಗ್ರಹಣ ಉಮೇಶ್ ಆರ್ ಬಿ ಸಂಕಲ ಸತೀಶ್ ಕಲಾ ನಿರ್ದೇಶನವಿದೆ, ಕಾಂತಾರ ಕ್ಯಾತಿಯ ದೀಪಕ್ ರೈ, ರಾಜೇಂದ್ರ ಕಾರಂತ್, ಮಧುಸೂದನ್, ಶಾಂತಲಾ ಕಮತ್, ಬಾಲರಾಜ್ ವಾಡಿ, ಯಶ್ ಶೆಟ್ಟಿ, ಚೇತನ್ ರೈ ಮಾಣಿ ಮುಂತಾದ ಹೆಸರಾಂತ ಕಲಾವಿದರು ನಟಿಸಿದ್ದಾರೆ.
ಹಾರ್ಸ್ ರೇಸ್ ಸುತ್ತ ನಡೆಯುವ ಕಥೆ
ಕಥೆ ಚಿತ್ರಕಥೆ ಸಂಭಾಷಣೆ ಬರೆದು ನಿರ್ದೇಶನ ಮಾಡಿರುವ ಗುರುತೇಜ್ ಶೆಟ್ಟಿ ಮಾತನಾಡುತ್ತಾ ಇದೊಂದು ಹಾರ್ಸ್ ರೇಸ್ ಸುತ್ತ ನಡೆಯುವ ಕಥೆಯಾದರೂ ಇಲ್ಲಿ ಫ್ಯಾಮಿಲಿ, ಲೈವ್, ಆಕ್ಷನ್ ಎಲ್ಲವೂ ಒಳಗೊಂಡಿದೆ. ನಾಯಕಿಯಾಗಿ ಹೃತಿಕಾ ಶ್ರೀನಿವಾಸ್ ನಟಿಸುತ್ತಿದ್ದಾರೆ
ಕ್ರಿಸ್‌ಮಸ್‌ಗೆ ಉಡುಗೊರೆ
ಇದೊಂದು ನನಗೆ ತುಂಬಾ ವಿಶೇಷವಾದ ಚಿತ್ರ ಎನ್ನುತಾರೆ. ಸಿನಿಮಾದ ಎಲ್ಲ ಕೆಲಸಗಳು ಭರದಿಂದ ಸಾಗಿದ್ದು ಕ್ರಿಸ್ಮಸ್ ಹಬ್ಬಕ್ಕೆ ಚಿತ್ರ ಬಿಡುಗಡೇ ಮಾಡುವ ತಯಾರಿ ಮಾಡುತ್ತಿದ್ದೇವೆ ಎಂದರು
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

