ಹೆಂಡತಿಯರೇ, ಗಂಡಂದಿರನ್ನ ಸುಮ್ನಿರೋಕೆ ಬಿಡಿ! ಇಷ್ಟೆಲ್ಲಾ ಮಾಡಬೇಡಿ!
Wife s annoying habits: ಗಂಡ ಹೆಂಡತಿ ಸಂಬಂಧದಲ್ಲಿ ಹೆಂಡತಿಯ ಕೆಲವು ನಡವಳಿಕೆಗಳು ಗಂಡನಿಗೆ ಇಷ್ಟವಾಗುವುದಿಲ್ಲ. ಅವು ಯಾವುವು ಎಂದು ಇಲ್ಲಿ ನೋಡೋಣ.
ಕೆಲವೊಮ್ಮೆ ಹೆಂಗಸರು ಸಣ್ಣ ವಿಷಯಗಳನ್ನೂ ದೊಡ್ಡದು ಮಾಡ್ಕೊಳ್ತಾರೆ. ಇದು ಸಾಮಾನ್ಯ. ಆದ್ರೆ ಆಗಾಗ್ಗೆ ಹೀಗೆ ಮಾಡಿದ್ರೆ ಗಂಡಸರಿಗೆ ಬೇಜಾರಾಗುತ್ತೆ. ಹೆಂಡತಿಯ ಈ ರೀತಿಯ ಕೆಲವು ನಡವಳಿಕೆ ಗಂಡನಿಗೆ ಕಿರಿಕಿರಿ ಉಂಟುಮಾಡುತ್ತೆ.
ಪ್ರತಿ ಗಂಡನೂ ತನ್ನ ಹೆಂಡತಿ ಕೆಲವು ವಿಷಯಗಳನ್ನು ತುಂಬಾ ಗಂಭೀರವಾಗಿ ಪರಿಗಣಿಸಬಾರದು ಅಂತ ಬಯಸ್ತಾನೆ. ಆದರೆ ಹೆಂಗಸರು ಹಾಗೆ ಮಾಡೋದು ಕಷ್ಟ ಅಂತ ಅನ್ಸುತ್ತೆ. ಇದರಿಂದ ಗಂಡ ಹೆಂಡತಿ ಜಗಳ ಆಗುತ್ತೆ. ಹಾಗಾಗಿ, ಗಂಡನಿಗೆ ಇಷ್ಟವಾಗದ ಹೆಂಡತಿಯ ಕೆಲವು ವಿಷಯಗಳ ಬಗ್ಗೆ ಇಲ್ಲಿ ನೋಡೋಣ.
ಅತಿಯಾದ ಯೋಚನೆ: ಕೆಲವು ಹೆಂಡತಿಯರು ಮನಸ್ಸಲ್ಲಿ ತುಂಬಾ ಯೋಚನೆ ಮಾಡಿ ಗಂಡನ ಮೇಲೆ ಆರೋಪ ಮಾಡ್ತಾರೆ. ಗಂಡ ಸರಿಯಾಗಿದ್ರೂ, ಹೆಂಡತಿಗೆ ತಪ್ಪು ಅಂತಲೇ ಅನ್ನಿಸುತ್ತೆ. ಇದರಿಂದ ಗಂಡನಿಗೆ ಕಿರಿಕಿರಿ ಶುರುವಾಗುತ್ತೆ. ಉದಾಹರಣೆಗೆ ಗಂಡ ಏನನ್ನಾದರೂ ಮರೆತರೆ, ಹೆಂಡತಿ ತಕ್ಷಣವೇ ದೂಷಿಸಲು ಪ್ರಾರಂಭಿಸುತ್ತಾಳೆ.
ಜೋಕ್‌ಗಳನ್ನು ಸೀರಿಯಸ್ ಆಗಿ ತೆಗೆದುಕೊಳ್ಳುವುದು: ಸಾಮಾನ್ಯವಾಗಿ ಕೆಲವು ಹೆಂಗಸರಿಗೆ ಜೋಕ್ ಇಷ್ಟ ಆಗಲ್ಲ. ಅದನ್ನು ಸೀರಿಯಸ್ ಆಗಿ ತೆಗೆದುಕೊಂಡು ಕೋಪ ಮಾಡ್ಕೊಳ್ತಾರೆ. ಆದರೆ ಗಂಡಸರು ತಮ್ಮ ಹೆಂಡತಿಯೂ ಜೋಕ್ ಮಾಡಬೇಕು ಅಂತ ಬಯಸ್ತಾರೆ.
ಪ್ರೀತಿ: ಕೆಲವು ಹೆಂಗಸರು ತಮ್ಮ ಗಂಡ ಎಲ್ಲರ ಮುಂದೆ ಪ್ರೀತಿ ತೋರಿಸಬೇಕು ಅಂತ ಬಯಸ್ತಾರೆ. ಗಂಡ ಹಾಗೆ ಮಾಡದಿದ್ದರೆ, ಅದನ್ನು ದೊಡ್ಡ ವಿಷಯ ಮಾಡಿಕೊಂಡು ಜಗಳ ಶುರು ಮಾಡ್ತಾರೆ. ಇದರಿಂದ ಗಂಡ ಹೆಂಡತಿ ಸಂಬಂಧದಲ್ಲಿ ಬಿರುಕು ಮೂಡಬಹುದು.