ಯಾಕೆ ಕೆಲವರಿಗೆ ಮತ್ತೆ ಮತ್ತೆ ಲವ್ ಆಗ್ತಾನೆ ಇರುತ್ತೆ?
ಪ್ರೀತಿಯು ಅನೇಕ ಏರಿಳಿತಗಳನ್ನು ಹೊಂದಿರುವ ರೋಲರ್ ಕೋಸ್ಟರ್ ಸವಾರಿಯಂತೆ. ಈ ಕಾರಣಕ್ಕಾಗಿ ಕೆಲವರು ಅನೇಕ ಬಾರಿ ಪ್ರೀತಿಯಲ್ಲಿ ಬೀಳುತ್ತಾರೆ. ಯಾಕೆ ಕೆಲವರು ಮಾತ್ರ ಮತ್ತೆ ಮತ್ತೆ ಏಕೆ ಪ್ರೀತಿಯಲ್ಲಿ ಬೀಳುತ್ತಾರೆ ಎಂದು ತಿಳಿಯೋಣ.
ಕೆಲವರಿಗೆ ಪ್ರೀತಿ ಆಗೋದೆ ಕಡಿಮೆ, ಇನ್ನೂ ಕೆಲವರಿಗೆ ಪದೇ ಪದೇ ಒಬ್ಬರಲ್ಲ, ಒಬ್ಬರ ಮೇಲೆ ಪ್ರೀತಿ ಆಗುತ್ತಲೇ ಇರುತ್ತೆ. ಅದು ಯಾಕೆ ಕೆಲವರಿಗೆ ಈ ರೀತಿ ಮತ್ತೆ ಮತ್ತೆ ಪ್ರೀತಿಯಾಗುತ್ತೆ ಅನ್ನೋದು ಮಾತ್ರ ಗೊತ್ತಾದಲ್ಲ. ಈ ಬಗ್ಗೆ ನಿಮಗೆ ತಿಳಿಯಬೇಕು ಅಂದ್ರೆ ಇಲ್ಲಿದೆ ಫುಲ್ ಡಿಟೇಲ್ಸ್.
ಹೊಸ ಅವಕಾಶ: ಈ ರೀತಿಯ ಜನರು ಸಂತೋಷವಾಗಿರಲು ಹೆಚ್ಚು ಇಷ್ಟಪಡ್ತಾರೆ ಮತ್ತು ಪ್ರತಿಯೊಂದು ಸಂಬಂಧದಲ್ಲಿ ಹೊಸ ಅವಕಾಶಗಳನ್ನು (new opportunity) ನೋಡುತ್ತಾರೆ. ಅದಕ್ಕಾಗಿ ಮತ್ತೆ ಮತ್ತೆ ಪ್ರೀತಿಯಲ್ಲಿ ಬೀಳ್ತಾರೆ.
ಜೀವನದಲ್ಲಿ ಮುಂದೆ ಹೋಗ್ತಾನೆ ಇರ್ತಾರೆ: ಹಿಂದಿನ ಸಂಬಂಧ ಮುರಿದುಹೋದ ನಂತರವೂ ಈ ಜನರು ಪ್ರೀತಿಯಲ್ಲಿ ನಂಬಿಕೆಯನ್ನು ಕಳೆದುಕೊಳ್ಳುವುದಿಲ್ಲ. ಈ ಲವ್ ಹೋದ್ರೆ ಹೋಗ್ಲಿ, ಬೇರೋಂದು ಪ್ರೀತಿ ಸಿಕ್ಕೇ ಸಿಗುತ್ತೆ ಎಂದು ಮುಂದೆ ಹೋಗ್ತಾನೆ ಇರ್ತಾರೆ.
ಪ್ರೀತಿಯಿಂದ ತುಂಬಾನೆ ಕಲಿತಾರೆ: ಪ್ರತಿಯೊಂದು ಸಂಬಂಧವು ಹೊಸದನ್ನು ಕಲಿಸುತ್ತದೆ ಮತ್ತು ಈ ಜನರು ಪ್ರೀ ಎಂದರೆ ಫೈನಲ್ ಡೆಸ್ಟಿನೇಶನ್ ಅಲ್ಲ, ಅದು ಟ್ರಾವೆಲ್ ಮಾಡುವ ಹಾದಿ ಎಂದು ನಂಬುತ್ತಾರೆ. ಅದಕ್ಕಾಗಿ ಮತ್ತೆ ಮತ್ತೆ ಲವ್ವಲ್ಲಿ (falling in love) ಬೀಳ್ತಾರೆ.
ವೈಯಕ್ತಿಕ ಬೆಳವಣಿಗೆ: ಈ ಜನರು ವೈಯಕ್ತಿಕ ಬೆಳವಣಿಗೆ ಮತ್ತು ಸ್ವಯಂ ಅನ್ವೇಷಣೆಯನ್ನು ನಂಬುತ್ತಾರೆ. ಅದಕ್ಕಾಗಿಯೇ ಅವರು ಪ್ರೀತಿಯಲ್ಲಿ ಬೀಳಲು ಹೆದರುವುದಿಲ್ಲ. ಈ ಸಂಬಂಧ ಸರಿ ಇಲ್ಲಾಂದ್ರೆ, ಇನ್ನೊಂದು, ಇನ್ನೊಂದು ಇಲ್ಲಾಂದ್ರೆ ಮತ್ತೊಂದು ಎಂದು ಯೋಚನೆ ಮಾಡ್ತಾರೆ.
ಆದ್ಯತೆ: ಅನೇಕ ಜನರು ತಮ್ಮ ಅಗತ್ಯಗಳಿಗೆ ಅನುಗುಣವಾಗಿ ಪ್ರೀತಿಯಲ್ಲಿ ಬದಲಾವಣೆಗೆ ಸಿದ್ಧರಾಗಿರುತ್ತಾರೆ. ಅಂತಹ ಪರಿಸ್ಥಿತಿಯಲ್ಲಿ, ಬ್ರೇಕಪ್ (breakup) ಸಂದರ್ಭದಲ್ಲಿಯೂ ಅವರು ಮುಂದುವರಿಯುವುದು ತುಂಬಾನೆ ಸುಲಭ.
ತಪ್ಪುಗಳಿಂದ ಕಲಿಯುವವರು: ತಪ್ಪುಗಳು ಅತ್ಯಂತ ಮುಖ್ಯ ಎಂದು ಅರ್ಥಮಾಡಿಕೊಳ್ಳುವ ಜನರು, ಪ್ರತಿ ಹೊಸ ಸಂಬಂಧವನ್ನು ಧೈರ್ಯದಿಂದ ಒಪ್ಪಿಕೊಳ್ಳುತ್ತಾರೆ. ಹಿಂದೆ ಆಗಿರೋ ತಪ್ಪು ಮುಂದಿನ ಬಾರಿ ಆಗದಂತೆ ನೋಡಿಕೊಂಡು ಹೊಸ ಸಂಬಂಧಕ್ಕೆ ಜೈ ಎನ್ನುತ್ತಾರೆ.
ಬ್ರೇಕ್ ಅಪ್ ಆದ್ರೂ ಪರವಾಗಿಲ್ಲ: ಪ್ರೀತಿಯನ್ನು ನಂಬುವ ಜನರು ಹಿಂದಿನ ಸಂಬಂಧಗಳು (previous relationship) ತಮ್ಮ ಭವಿಷ್ಯವನ್ನು ನಿರ್ಧರಿಸೋದಿಲ್ಲ ಎಂದು ನಂಬುತ್ತಾರೆ.. ಈ ಕಾರಣದಿಂದಾಗಿ, ಅನೇಕ ಬಾರಿ ಬ್ರೇಕ್ ಅಪ್ ಆದ ನಂತರವೂ, ಅವರು ಮತ್ತೆ ಹೊಸ ಸಂಬಂಧಕ್ಕೆ ಸಿದ್ಧರಾಗಿರುತ್ತಾರೆ