ದಾಂಪತ್ಯ ಜೀವನದಲ್ಲಿ ರೋಮ್ಯಾನ್ಸ್ ಕಡಿಮೆಯಾಗಿದ್ಯಾ? ಕಾರಣ ತಿಳ್ಕೊಳಿ
ಪ್ರೀತಿ, ಸ್ನೇಹ , ಭಾಂಧವ್ಯ ಇವೆಲ್ಲವೂ ಸಂಬಂಧದ ಪ್ರಮುಖ ಅಂಶಗಳು. ಸಂಬಂಧದಲ್ಲಿ ಇಬ್ಬರು ಸಂಗಾತಿಗಳ ನಡುವೆ ಪ್ರೀತಿ ಇರುವುದು ಮತ್ತು ಅದನ್ನು ವ್ಯಕ್ತಿ ಪಡಿಸುವ ನಡುವೆ ತುಂಬಾನೇ ವ್ಯತ್ಯಾಸವಿದೆ. ಸಂಬಂಧ ಹೊಸದಾಗಿದ್ದರೆ ಮೊದ ಮೊದಲು, ಹೆಚ್ಚಾಗಿ ಪ್ರೀತಿಸುತ್ತಾರೆ, ಆದರೆ ಅವರ ನಡುವಿನ ಪ್ರಣಯವು ಕ್ರಮೇಣ ಕಡಿಮೆಯಾಗುತ್ತದೆ. ಸಂಗಾತಿಯಿಂದ ದೂರ ಇರಲು ಆರಂಭಿಸುತ್ತಾರೆ, ಅಷ್ಟೇ ಅಲ್ಲದೆ ಅವರನ್ನು ಅನುಮಾನಿಸಲು ಆರಂಭಿಸುತ್ತಾರೆ. ಆದ್ದರಿಂದಲೇ ಜನರು ಕೆಲವೊಮ್ಮೆ ಇನ್ನೊಬ್ಬ ವ್ಯಕ್ತಿಯ ಕಡೆಗೆ ಆಕರ್ಷಿತರಾಗುತ್ತಾರೆ ಮತ್ತು ಸಂಗಾತಿಯೊಂದಿಗಿನ ಸಂಬಂಧವು ಹದಗೆಡುತ್ತದೆ.
ಸಂಗಾತಿಗಳ ನಡುವಿನ ಪ್ರಣಯವನ್ನು ಯಾವಾಗಲೂ ಕಾಪಾಡಿಕೊಳ್ಳಬೇಕು. ಇಲ್ಲದಿದ್ದರೆ ವೈವಾಹಿಕ ಜೀವನವು ನೀರಸ ಮತ್ತು ತುಂಬಾ ಹೊರೆ ಎನಿಸುತ್ತದೆ. ಇಂತಹ ಸಂಬಂಧದಲ್ಲಿ ಇಬ್ಬರು ಬದುಕುವುದೂ ಕಷ್ಟ. ಆದ್ದರಿಂದ ದಂಪತಿ ನಡುವಿನ ರೋಮ್ಯಾನ್ಸ್ ಅನ್ನು ಕಡಿಮೆ ಮಾಡುವ ಕೆಲವು ಕಾರಣಗಳನ್ನು ನೋಡೋಣ.
ಮಾನಸಿಕ ಉದ್ವಿಗ್ನತೆ
ಆರೋಗ್ಯಕರ ಸಂಬಂಧಕ್ಕಾಗಿ ದಂಪತಿಗಳು ಮಾನಸಿಕ ಒತ್ತಡದಿಂದ ದೂರವಿರಬೇಕು. ಸಂಗಾತಿಯು ಯಾವುದೇ ಕಾರಣಕ್ಕಾಗಿ ಮಾನಸಿಕವಾಗಿ ತೊಂದರೆಗೊಳಗಾದರೆ ಅಥವಾ ಖಿನ್ನತೆಗೆ ಒಳಗಾಗಿದ್ದರೆ, ಖಂಡಿತವಾಗಿಯೂ ನಿಮ್ಮ ನಡುವೆ ರೋಮ್ಯಾನ್ಸ್‌ಗೆ ಅವಕಾಶವಿರುವುದಿಲ್ಲ. ಸಂಗಾತಿಯು ಹೆಚ್ಚು ಉದ್ವಿಗ್ನತೆಗೆ ಒಳಗಾದಷ್ಟು, ಅವರು ಕ್ರಮೇಣ ಹೆಚ್ಚು ಒತ್ತಡದಿಂದ ಬಳಲುತ್ತಾರೆ.
ಈ ಸಂದರ್ಭದಲ್ಲಿ ದಂಪತಿ ನಡುವಿನ ದೈಹಿಕ ಅನ್ಯೋನ್ಯತೆ ಕಣ್ಮರೆಯಾಗುದೆ ಮತ್ತು ಅವರ ಲೈಂಗಿಕ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಜೀವನದಲ್ಲಿ ಸಾಕಷ್ಟು ಸಮಸ್ಯೆಗಳು ಇರಬಹುದು, ಆದರೆ ಅದನ್ನು ಸಮತೋಲನಗೊಳಿಸುವುದು ಸಂಬಂಧವನ್ನು ಆರೋಗ್ಯಕರವಾಗಿರಿಸುತ್ತದೆ. ಆದ್ದರಿಂದ ಯಾವಾಗಲೂ ಉದ್ವಿಗ್ನರಾಗೋ ಬದಲು ಸಂಗಾತಿಯೊಂದಿಗೆ ಉತ್ತಮ ಸಮಯ ಕಳೆಯಿರಿ. ಆ ಮೂಲಕ ಟೆನ್ಶನ್ ಫ್ರೀ ಆಗಿರಿ.
ನೀರಸ ಜೀವನ
ದಿನವೂ ಅದೇ ಕೆಲಸ ಮಾಡುವುದರಿಂದ, ಜೀವನ ಪೂರ್ತಿ ಒಂದೇ ರೀತಿ ನೀರಸವಾಗಿರುತ್ತದೆ. ಕೆಲವೊಮ್ಮೆ ದಂಪತಿ ಒಂದೇ ಜೀವನಶೈಲಿಯಲ್ಲಿ ಎಷ್ಟು ಕಳೆದುಹೋಗುತ್ತಾರೆಂದರೆ ಪರಸ್ಪರ ಸಮಯ ಕಳೆಯಲು ಮರೆಯುತ್ತಾರೆ. ಈ ಸಂದರ್ಭದಲ್ಲಿ ಇಬ್ಬರ ನಡುವಿನ ಆಕರ್ಷಣೆ ಕಡಿಮೆಯಾಗಲು ಆರಂಭಿಸುತ್ತದೆ.
ಒಟ್ಟಿಗೆ ಗುಣಮಟ್ಟದ ಸಮಯವನ್ನು ಕಳೆಯುವುದು, ಮೋಜು, ಮಸ್ತಿ ಮಾಡುವುದು ಮತ್ತು ಪರಸ್ಪರ ಸರ್ಪ್ರೈಸ್ ಯೋಜನೆಗಳನ್ನು ಮಾಡುವುದು ಸಂಬಂಧವನ್ನು ತಾಜಾವಾಗಿರಿಸುತ್ತೆ. ನೀರಸ ಜೀವನವು ಪ್ರೀತಿಯ ಜೀವನದ ಮೇಲೆ ಯಾವುದೇ ಪರಿಣಾಮ ಬೀರಲು ಬಿಡಬೇಡಿ. ಸಣ್ಣ ವಿಷಯಗಳನ್ನು ಒಳಗೊಂಡಂತೆ ಪ್ರಣಯವನ್ನು ಹಾಗೆ ಉಳಿಸಿಕೊಳ್ಳಿ.
ಜಗಳಗಳಲ್ಲಿ ಹೆಚ್ಚಳ
ಯಾವುದೇ ಸಂಬಂಧವು ಪರಿಪೂರ್ಣವಲ್ಲ, ಆದರೆ ಇಬ್ಬರು ಸಂಗಾತಿಗಳು ಒಟ್ಟಿಗೆ ಅದನ್ನು ಪರಿಪೂರ್ಣಗೊಳಿಸುತ್ತಾರೆ. ಗಂಡ ಹೆಂಡಿರ ನಡುವೆ ವಾದ ಆರಂಭವಾಗುತ್ತವೆ. ಅವರು ಆಗಾಗ್ಗೆ ಪರಸ್ಪರ ಮಾತನಾಡುವುದನ್ನು ನಿಲ್ಲಿಸುತ್ತಾರೆ. ದಾಂಪತ್ಯದಲ್ಲಿ ಇಂಥ ಮನಸ್ಥಿತಿ ಇಬ್ಬರ ಸಂಬಂಧವನ್ನು ಬಹುಬೇಗ ಹದಗೆಡಿಸುತ್ತಿದೆ. ರೊಮ್ಯಾನ್ಸ್ ಕಡಿಮೆ ಮಾಡುತ್ತದೆ. ಇಬ್ಬರ ನಡುವಿನ ಕಹಿ ಎಷ್ಟು ಹೆಚ್ಚಾಗುತ್ತದೆ ಎಂದರೆ ಅವರು ಮಾತನಾಡಲು ಸಹ ಇಷ್ಟಪಡುವುದಿಲ್ಲ.
ಆದಾಗ್ಯೂ, ಜೋಡಿಗಳು ದೀರ್ಘಕಾಲದವರೆಗೆ ಪರಸ್ಪರ ಇದ್ದ ನಂತರ ತಮ್ಮ ಅಭ್ಯಾಸಗಳ ಬಗ್ಗೆ ಅರಿತುಕೊಳ್ಳುವುದು ಸುಳ್ಳಲ್ಲ. ಆದ್ದರಿಂದ ಸಂಗಾತಿಯ ಗುಣಗಳೊಂದಿಗೆ ನ್ಯೂನತೆಗಳನ್ನು ಸ್ವೀಕರಿಸುವುದು ಬಹಳ ಮುಖ್ಯ. ಸಂಗಾತಿಯ ಕೆಟ್ಟ ಅಭ್ಯಾಸವನ್ನು ಸಹಿಸಿಕೊಳ್ಳಬೇಕು ಎಂದು ನಾವು ಹೇಳುತ್ತಿಲ್ಲ, ಆದರೆ ಸಣ್ಣ ವಿಷಯಗಳನ್ನು ನಿರ್ಲಕ್ಷಿಸುವುದು ಉತ್ತಮ. ಕಡಿಮೆ ಜಗಳಗಳನ್ನು ಮಾಡಿದಷ್ಟು ಸಂಗಾತಿ ಜೊತೆ ಉತ್ತಮ ಬಾಂಧವ್ಯ ವೃದ್ಧಿಯಾಗೋದು ಸುಳ್ಳಲ್ಲ.
ವೈಯಕ್ತಿಕ ಜೀವನಕ್ಕಿಂತ ವೃತ್ತಿ ಜೀವನಕ್ಕೆ ಒತ್ತು
ವೃತ್ತಿಪರ ಜೀವನ ಎಂದರೆ ಪ್ರತಿಯೊಬ್ಬರ ಜೀವನದಲ್ಲಿ ಬಹಳಷ್ಟು ಮುಖ್ಯ. ಆದರೆ ವೈಯಕ್ತಿಕ ಜೀವನಕ್ಕಿಂತ ಹೆಚ್ಚಾಗಿ ವೃತ್ತಿ ಜೀವನದ ಮೇಲೆ ಮಾತ್ರ ಗಮನ ಹರಿಸುತ್ತಿದ್ದರೆ, ಅದು ಖಂಡಿತವಾಗಿಯೂ ಸಂಬಂಧದ ಮೇಲೆ ಪರಿಣಾಮ ಬೀರುತ್ತೆ. ಕೆಲವೊಮ್ಮೆ ವೃತ್ತಿಪರ ಏರಿಳಿತಗಳ ಮಧ್ಯೆ ಜನ ಎಷ್ಟು ಸಿಕ್ಕಿಹಾಕಿಕೊಳ್ಳುತ್ತಾರೆಂದರೆ ಅವರು ತಮ್ಮ ಪ್ರೀತಿಯ ಜೀವನವನ್ನು ಮರೆತು ಬಿಡುತ್ತಾರೆ. ಇದರ ಪರಿಣಾಮವಾಗಿ, ಸಂಗಾತಿಗಳ ನಡುವಿನ ಪ್ರಣಯವು ಕಡಿಮೆಯಾಗುತ್ತದೆ. ಕ್ರಮೇಣ ಈ ಸಂಬಂಧ ಅದೆಷ್ಟು ಹಳಸುತ್ತದೆ ಎಂದರೆ ಡಿವೋರ್ಸ್‌ಗೆ ಬೇಕಾದರೂ ತಲುಪಹುದು.
ಕಷ್ಟದ ಸಮಯದಲ್ಲಿ, ಹೆಚ್ಚಿನ ಬೆಂಬಲವು ಸಂಗಾತಿಗೆ ಅಗತ್ಯವಿದೆ ಎಂಬುದರಲ್ಲಿ ಸಂದೇಹವಿಲ್ಲ, ಆದರೆ ಸಂಗಾತಿಗೂ ಜೀವನದಲ್ಲಿ ಸ್ವಲ್ಪ ಸಮಯವನ್ನು ನೀಡಬೇಕು. ನಿಮ್ಮ ಆಯಾಸವನ್ನು ಸ್ವಲ್ಪ ಕಡಿಮೆ ಮಾಡುವ ಮೂಲಕ ಸಮಯದ ಕೊರತೆ ನಿರ್ವಹಿಸುವುದು ಮುಖ್ಯ, ವೃತ್ತಿ ಜೀವನಕ್ಕೂ ಮತ್ತು ವೈಯಕ್ತಿಕ ಜೀವನಕ್ಕೂ ಸಮಾನವಾದ ಸ್ಥಾನಮಾನ ನೀಡಬೇಕು. ಇದರಿಂದ ಸಂಗಾತಿಯೊಂದಿಗೆ ಸಮಯ ಕಳೆಯಬಹುದು. ಇದರಿಂದ ಇಬ್ಬರ ನಡುವಿನ ಪ್ರಣಯ ಯಾವಾಗಲೂ ಜೀವಂತವಾಗಿರುತ್ತೆ.