ಮಾಡ್ರನ್ ಹೆಂಗಸರು ಗಂಡಸರಿಂದ ಬಯಸೋದು ಏನು ಗೊತ್ತಾ? ಇದು ಪುರುಷರಿಗೆ ಮಾತ್ರ..
ಸಂಬಂಧದಲ್ಲಿ ಪುರುಷರು ಮತ್ತು ಮಹಿಳೆಯರು ಸಮಾನವಾಗಿರಬೇಕು. ಆದರೆ, ನಮ್ಮ ದೇಶದಲ್ಲಿ ಬಹುತೇಕ ಮದುವೆಗಳಲ್ಲಿ ಪುರುಷ ಪ್ರಾಬಲ್ಯವೇ ಮೇಲುಗೈ ಸಾಧಿಸುತ್ತದೆ. ಪರಿಣಾಮವಾಗಿ, ಮಹಿಳೆಯರ ಹಕ್ಕುಗಳು ಮತ್ತು ಆಶಯಗಳು ಸಾಮಾನ್ಯವಾಗಿ ನಿರ್ಲಕ್ಷಿಸಲ್ಪಡುತ್ತವೆ. ಇತ್ತೀಚಿನ ದಿನಗಳಲ್ಲಿ ಯುವತಿಯರು ತಮ್ಮ ಪುರುಷರಿಂದ ಏನನ್ನು ನಿರೀಕ್ಷಿಸುತ್ತಾರೆ ಎನ್ನುವುದನ್ನು ನೋಡಿ.

ಪತಿ ಮತ್ತು ಪತ್ನಿಯನ್ನು ಒಟ್ಟಿಗೆ ಜೀವಿಸುವ ಮೂಲಕ ಅವರ ವೈಯಕ್ತಿಕ ಸ್ವಾತಂತ್ರ್ಯದ ಬಗ್ಗೆ ಪರಸ್ಪರ ತಿಳುವಳಿಯನ್ನು ಹೊಂದಬೇಕು. ನಮ್ಮ ದೇಶದಲ್ಲಿ ಮಹಿಳಾ ಸ್ವಾತಂತ್ರ್ಯವು ದೊಡ್ಡ ಚರ್ಚೆಯ ವಿಷಯವಾಗಿದೆ, ಮಹಿಳೆಯರು ರಾತ್ರಿ 9 ಗಂಟೆಯ ನಂತರ ಮನೆಯಿಂದ ಹೊರಗೆ ಕಾಲಿಡಬಾರದು ಎಂದು ಅನೇಕ ಜನರು ನಂಬುತ್ತಾರೆ. ಹಾಗಾಗಿ ಪತಿ ತನ್ನ ಹೆಂಡತಿ ಪ್ರತ್ಯೇಕ ವ್ಯಕ್ತಿ ಮತ್ತು ಅವಳ ಸ್ವಾತಂತ್ರ್ಯವನ್ನು ಆನಂದಿಸುವ ಹಕ್ಕನ್ನು ಹೊಂದಿದ್ದಾಳೆ ಎಂದು ಅರಿತುಕೊಳ್ಳ ಬೇಕು.
ಸ್ವತಂತ್ರ ವ್ಯಕ್ತಿಯಾಗಿ, ಮಹಿಳೆಗೆ ತನ್ನದೇ ಆದ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಮರ್ಥ್ಯವಿದೆ. ಪತಿ ತನ್ನ ಹೆಂಡತಿಯನ್ನು ಒಪ್ಪದಿದ್ದರೂ ಸಹ ತನ್ನ ಹೆಂಡತಿಯ ನಿರ್ಧಾರಕ್ಕೆ ಎಂದಿಗೂ ತಿರಸ್ಕಾರವನ್ನು ತೋರಿಸಬಾರದು.ಪತಿಯು ತನ್ನ ಹೆಂಡತಿ ತಪ್ಪು ಮಾಡಿರುವುದನ್ನು ಗಮನಿಸಿದರೆ, ಅವನು ಅವಳನ್ನು ಅವಮಾನಿಸದೆ ನಯವಾಗಿ ಸೂಚಿಸಿ ಗೌರವವನ್ನು ನೀಡ ಬೇಕು.
ಗಂಡನ ಸಂಪೂರ್ಣ ಸಮಯವನ್ನು ಬೇಡುವ ಕೆಲವೇ ಕೆಲವು ಮಹಿಳೆಯರು ಇದ್ದಾರೆ.ತಮ್ಮ ಹೆಂಡತಿಗೆ ತನ್ನದೇ ಆದ ವೈಯಕ್ತಿಕ ಅಗತ್ಯಗಳಿವೆ ಮತ್ತು ಈ ಉದ್ದೇಶಗಳಿಗಾಗಿ ಸಮಯವನ್ನು ವಿನಿಯೋಗಿಸಬೇಕಾಗಬಹುದು ಎಂದು ಪುರಷರು ಅರಿತುಕೊಳ್ಳಬೇಕು. ಹಾಗೇ ದಿನದ ಬಿಡುವಿಲ್ಲದ ದಿನಚರಿಯಲ್ಲಿ ಸ್ವಲ್ಪ ಸಮಯವನ್ನು ಹೆಂಡತಿಗೆ ಮೀಸಲಿಡ ಬೇಕು.
ಬಹುಪಾಲು ಜನರು ಅಡುಗೆ ಮಾಡುವುದು ಮಹಿಳೆಯ ಕೆಲಸ ಎಂದು ನಂಬುತ್ತಾರೆ. ಅದಕ್ಕಾಗಿ ಮಹಿಳೆಯರು ಪುರಷರು ಸ್ವಲ್ಪ ಅಡುಗೆ ಮಾಡಲು ಸಹಾಯ ಮಾಡಿದರು ತಮ್ಮನ್ನು ತಾವೂ ಅದೃಷ್ಟವಂತರು ಎಂದು ನಂಬುತ್ತಾರೆ. ಆದ್ದರಿಂದ, ಮಹಿಳೆಯರು ತಮ್ಮ ಪತಿ ಅಡುಗೆಮನೆಯಲ್ಲಿ ಕನಿಷ್ಠ ಕೆಲವು ಕಾರ್ಯಗಳನ್ನು ನಿರ್ವಹಿಸಬೇಕೆಂದು ಬಯಸುತ್ತಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.