- Home
- Life
- Relationship
- ಆಫೀಸ್‌ನಲ್ಲಿ ರೋಮ್ಯಾನ್ಸ್ ರ‍್ಯಾಂಕಿಂಗ್ ಪ್ರಕಟ, ಪ್ರಮುಖ ದೇಶಗಳ ಪೈಕಿ ಅಚ್ಚರಿ ಸ್ಥಾನದಲ್ಲಿ ಭಾರತ
ಆಫೀಸ್‌ನಲ್ಲಿ ರೋಮ್ಯಾನ್ಸ್ ರ‍್ಯಾಂಕಿಂಗ್ ಪ್ರಕಟ, ಪ್ರಮುಖ ದೇಶಗಳ ಪೈಕಿ ಅಚ್ಚರಿ ಸ್ಥಾನದಲ್ಲಿ ಭಾರತ
ಆಫೀಸ್‌ನಲ್ಲಿ ರೋಮ್ಯಾನ್ಸ್ ರ‍್ಯಾಂಕಿಂಗ್ ಪ್ರಕಟ, ಪ್ರಮುಖ ದೇಶಗಳ ಪೈಕಿ ಅಚ್ಚರಿ ಸ್ಥಾನದಲ್ಲಿ ಭಾರತ, ಕಚೇರಿಯಲ್ಲಿನ ಸಂಬಂಧ, ಹುಟ್ಟಿಕೊಳ್ಳುವ ಪ್ರೀತಿ, ಸಹೋದ್ಯೋಗಿಗಳ ಜೊತೆ ಡೇಟಿಂಗ್‌ನಲ್ಲಿ ಭಾರತದ ರ‍್ಯಾಂಕಿಂಗ್ ಅಚ್ಚರಿಗೊಳಿಸಿದೆ.

ಭಾರತದಲ್ಲಿ ಆಫೀಸ್ ರೊಮ್ಯಾನ್ಸ್
ಆಫೀಸ್ ರೊಮ್ಯಾನ್ಸ್ ಹೊಸದೇನಲ್ಲ. ಆದರೆ ಭಾರತದಲ್ಲಿ ಇದು ಕಾಮನ್ ಅಲ್ಲ. ಭಾರತೀಯರು ಕಚೇರಿಗಳಲ್ಲಿ ನೀತಿ ನಿಯಮಗಳಿಗೆ ಹೆಚ್ಚು ಗಮನ ನೀಡುತ್ತಾರೆ, ಕಚೇರಿಯಲ್ಲಿ ಉದ್ಯೋಗ ಕುರಿತು ಶೇಕಡಾ 100 ರಷ್ಟು ಶ್ರಮವಹಿಸುತ್ತಾರೆ ಎಂದೆಲ್ಲಾ ಊಹಿಸಿದ್ದರೆ ಈ ಸಮೀಕ್ಷಾ ವರದಿ ಲೆಕ್ಕಾಚಾರ ಉಲ್ಟಾ ಮಾಡುತ್ತಿದೆ.
ಭಾರತಕ್ಕೆ ಎಷ್ಟನೇ ಸ್ಥಾನ
ಬಾಸ್ ಜೊತೆ, ಉದ್ಯೋಗಿ ಜೊತೆ, ಪ್ರಮೋಶನ್, ಹೈಕ್ ಸೇರಿದಂತೆ ಇತರ ಆಮಿಷಗಳು, ತನ್ನ ವೇವ್‌ಲೆಂತಗೆ ಮ್ಯಾಚಿಂಗ್ ಸೇರಿದಂತೆ ಹಲವು ಕಾರಣಗಳಿಂದ ಸಂಬಂಧ ಹುಟ್ಟಿಕೊಳ್ಳುತ್ತದೆ. ಕೆಲವು ಸಕ್ರಮವಾಗಿದ್ದರೆ, ಹಲವು ಅಕ್ರಮ ಸಂಬಂಧಗಳಾಗಿರುತ್ತದೆ. ವಿಶ್ವದ ಪ್ರಮುಖ ರಾಷ್ಟ್ರಗಳಲ್ಲಿ ಈ ಸರ್ವೆ ನಡೆಸಲಾಗಿದೆ. ಈ ಸರ್ವೆ ವರದಿ ಪ್ರಕಾರ ಆಫೀಸ್ ರೊಮ್ಯಾನ್ಸ್‌ನಲ್ಲಿ ಭಾರತ 2ನೇ ಸ್ಥಾನದಲ್ಲಿದೆ.
11 ದೇಶಗಳಲ್ಲಿ ಸರ್ವೆ, ಮೊದಲ ಸ್ಥಾನ ಯಾರಿಗೆ?
ಆಶ್ಲೆ ಮ್ಯಾಡಿಸನ್ ಹಾಗೂ ಯೂಗವ್ (YouGov) ಜಂಟಿಯಾಗಿ ಈ ಸರ್ವೆ ನಡೆಸಿದೆ. ಭಾರತ, ಅಮೆರಿಕ, ಬ್ರಿಟನ್, ಇಟಲಿ ಸೇರಿದಂತೆ 11 ದೇಶಗಳಲ್ಲಿ ಸರ್ವೆ ಮಾಡಲಾಗಿದೆ. ಅಕ್ರಮ ಸಂಬಂಧ ಹೆಚ್ಚು, ಸಕ್ರಮ ಸಂಬಂಧ ಕಡಿಮೆ, ಆದರೂ ಆಫೀಸ್ ರೊಮ್ಯಾನ್ಸ್ ನಡೆಯುತ್ತಲೇ ಇರುವ ರಾಷ್ಟ್ರಗಳಲ್ಲಿ ಭಾರತ 2ನೇ ಸ್ಥಾನದಲ್ಲಿದ್ದರೆ, ಮೆಕ್ಸಿಕೋ ಮೊದಲ ಸ್ಥಾನದಲ್ಲಿದೆ.
ಶೇಕಡಾ 40 ರಷ್ಟು ರೊಮ್ಯಾಂಟಿಕ್ ರಿಲೇಶನ್‌ಶಿಪ್
ಭಾರತದಲ್ಲಿ ಶೇಕಡಾ 40 ರಷ್ಟು ಮಂದಿ ಸಹೋದ್ಯೋಗಿಗಳ ಜೊತೆ ರೊಮ್ಯಾಂಟಿಕ್ ರಿಲೇಶನ್‌ಶಿಪ್ ಹೊಂದಿದ್ದಾರೆ ಎಂದಿದ್ದಾರೆ. ಅಮೆರಿಕ, ಇಂಗ್ಲೆಂಡ್, ಕೆನಡಾಗೆ ಹೋಲಿಸಿದರೆ ಭಾರತ ಭಾರಿ ಮುಂದಿದೆ. ಕಾರಣ ಈ ದೇಶದಲ್ಲಿ ಈ ರೀತಿಯ ಆಫೀಸ್ ರೊಮ್ಯಾನ್ಸ್ ಶೇಕಡಾ 30ರಷ್ಟಿದೆ. ಆದರೆ ಭಾರತ ಭಾರಿ ಮುಂದಿದೆ.
ಶೇಕಡಾ 40 ರಷ್ಟು ರೊಮ್ಯಾಂಟಿಕ್ ರಿಲೇಶನ್‌ಶಿಪ್
ಒಪನ್ ರಿಲೇಶನ್‌ಶಿಪ್‌ನಲ್ಲೂ ಭಾರತ ಮುಂದು
ಒಪನ್ ರಿಲೇಶನ್‌ಶಿಪ್ ಟ್ರೆಂಡ್ ಭಾರತ ಪರಂಪರೆ ಅಲ್ಲ. ಸಾಂಪ್ರದಾಯಿಕ, ಕುಟುಂಬ ಆಧಾರಿತ ಸಂಬಂಧದಲ್ಲಿ ಭಾರತ ಹೆಚ್ಚು ದೃಢವಾಗಿದೆ. ಆದರೆ ಶೇಕಡಾ 35ರಷ್ಟು ಭಾರತೀಯರು ಒಪನ್ ರಿಲೇಶನ್‌ಶಿಪ್‌ನಲ್ಲಿದ್ದಾರೆ ಎಂದು ಸರ್ವೇ ಹೇಳುತ್ತಿದೆ. ಶೇಕಡಾ 41 ರಷ್ಟು ಮಂದಿ ಓಪನ್ ರಿಲೇಶನ್‌ಶಿಪ್ ಒಪ್ಪಿಕೊಳ್ಳಲು ಸಿದ್ಧರಿದ್ದಾರೆ.