ಇಟಲಿಯ ಕ್ರೂಸ್ನಲ್ಲಿ ಅಂಬಾನಿ ಪ್ರೀ ವೆಡ್ಡಿಂಗ್, ಐಶಾರಾಮಿ ಹಡಗು ಸೇರಿ ಕಣ್ಣು ಕುಕ್ಕುವ ಹಲವು ಫೋಟೋಗಳು ವೈರಲ್!
ಬಿಲಿಯನೇರ್ ಮುಕೇಶ್ ಅಂಬಾನಿ ಕಿರಿಯ ಮಗ ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ವಿವಾಹ ಮಹೋತ್ಸವ ಜುಲೈ 12ರಂದು ಮುಂಬೈನ ಪ್ರತಿಷ್ಠಿತ ಜಿಯೋ ವರ್ಲ್ಡ್ ಕನ್ವೆನ್ಷನ್ ಸೆಂಟರ್ನಲ್ಲಿ ನಡೆಯಲಿದ್ದು, ಈಗಿನಿಂದಲೇ ತಯಾರಿ ನಡೆಯುತ್ತಿದೆ. ಮಾರ್ಚ್ ಆರಂಭದಲ್ಲಿ ಗುಜರಾತ್ನ ಜಾಮ್ನಗರದಲ್ಲಿ ಅನಂತ್-ರಾಧಿಕಾ ಅವರ ಮೊದಲ ವಿವಾಹಪೂರ್ವ ಕಾರ್ಯಕ್ರಮ ನಡೆದಿತ್ತು. ಇದೀಗ ಇಟಲಿಯಲ್ಲಿ ಐಶಾರಾಮಿ ಕ್ರೂಸ್ನಲ್ಲಿ ಎರಡನೇ ವಿವಾಹಪೂರ್ವ ಪಾರ್ಟಿ ನಡೆದಿದ್ದು, ಅದ್ಧೂರಿ ಕ್ರೂಸ್ ಸಹಿತ ಮೋಜು ಮಸ್ತಿಯ ಫೋಟೋಗಳು, ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಮದುವೆಯ ಮುನ್ನ ನಡೆದ ಎರಡನೇ ಪಾರ್ಟಿಯು ಮೇ 29ರಿಂದ ಜೂನ್ 1ರ ತನಕ ಒಟ್ಟು ನಾಲ್ಕು ದಿನಗಳ ಕಾಲ ನಡೆದಿದೆ. ಅದ್ದೂರಿ ಪಾರ್ಟಿಗಳು, ಸಂಭ್ರಮಾಚರಣೆಗಳೂ ಮುಗಿದಿದೆ. ಐಶಾರಾಮಿ ಹಡಗಿನ ಫೋಟೋ ವೈರಲ್ ಆಗಿದ್ದು, ಹಲವಾರು ಬಾಲಿವುಡ್ ತಾರೆಯರು, ಉದ್ಯಮಿಗಳು, ಪ್ರಸಿದ್ಧ ಅಂತರರಾಷ್ಟ್ರೀಯ ಬ್ಯಾಂಡ್ಗಳು ಮತ್ತು ಗಾಯಕರು ಪ್ರದರ್ಶನ ನೀಡಿದರು. ಹೀಗಿರುವಾಗ ಜಿಯೋ ವರ್ಲ್ಡ್ ಕನ್ವೆನ್ಷನ್ ಸೆಂಟರ್ ನಲ್ಲಿ ನಡೆಯಲಿರುವ ವಿವಾಹ ಕಾರ್ಯಕ್ರಮ ಇನ್ನೆಷ್ಟು ಅದ್ದೂರಿಯಾಗಿ ನಡೆಯಲಿದೆ ಎಂಬುದನ್ನು ಊಹಿಸುವುದು ಕೂಡ ಅಸಾಧ್ಯ.
ಇದೆಲ್ಲದರ ನಡುವೆ ಈಗ ಇಟಲಿಯ ಐಶಾರಾಮಿ ಹಡಗಿನಲ್ಲಿ ನಡೆದ ಪಾರ್ಟಿಯ ಕೆಲವು ತುಣುಕುಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅಂಬಾನಿ ಅಪ್ಡೇಟ್ ಎಂಬ ಪೇಜ್ ಒಂದು ಕೊನೆಯ ದಿನದ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ರ ಕ್ರೂಸ್ ಪ್ರಿ-ವೆಡ್ಡಿಂಗ್ ಲಾ ಡೋಲ್ಸ್ ವೀಟಾದ ಈವೆಂಟ್ನ ಒಳಗಿನ ನೋಟಗಳನ್ನು ಒಳಗೊಂಡ ಕೆಲ ತುಣುಕುಗಳನ್ನು ಹಂಚಿಕೊಂಡಿದೆ. ಇದರಲ್ಲಿ ಸಾಂಪ್ರದಾಯಿಕ ಇಟಾಲಿಯನ್ ಟೆನರ್, ಆಂಡ್ರಿಯಾ ಬೊಸೆಲ್ಲಿ ವೇದಿಕೆಯಲ್ಲಿ ಪ್ರದರ್ಶನ ನೀಡುವುದನ್ನು ನೋಡಬಹುದು. ನೀತಾ ಅಂಬಾನಿ ಮತ್ತು ಮುಖೇಶ್ ಅಂಬಾನಿ ಪ್ರೇಕ್ಷಕರ ನಡುವೆ ಕುಳಿತು ಮಾತನಾಡುತ್ತಿರುವುದು ಕಂಡುಬಂದಿದೆ.
ಪೀಚ್-ಹ್ಯೂಡ್ ಮೇಳದಲ್ಲಿ ಅಲಂಕರಿಸಲ್ಪಟ್ಟ ಇಶಾ ಅಂಬಾನಿ, ಗುಲಾಬಿ ಬಣ್ಣದ ಪ್ಯಾಂಟ್ಸೂಟ್ನಲ್ಲಿ ಆಕಾಶ್ ಅಂಬಾನಿ , ಗುಲಾಬಿ ಬಣ್ಣದ ಉಡುಪಿನಲ್ಲಿ ಶ್ಲೋಕಾ ಮೆಹ್ತಾ ಅದ್ಭುತವಾಗಿ ಕಾಣುತ್ತಿದ್ದರು. ಅಂಬಾನಿ ಅಪ್ಡೇಟ್ ಇನ್ಟಾ ಹ್ಯಾಂಡಲ್ ನಲ್ಲಿ, ಕ್ರೂಸ್ ಪ್ರಿ-ವೆಡ್ಡಿಂಗ್ ಪಾರ್ಟಿಯ ಕೊನೆ ದಿನದ ಕಾರ್ಯಕ್ರಮದ ನೀತಾ ಅಂಬಾನಿ ಮತ್ತು ಮುಖೇಶ್ ಅಂಬಾನಿ ಅವರ ಹಲವಾರು ಫೋಟೋಗಳನ್ನು ಪೋಸ್ಟ್ ಮಾಡಿದೆ.
ನೀತಾ ಬಿಳಿ-ಟೋನ್ ಉಡುಗೆಯಲ್ಲಿ ಕಂಗೊಳಿಸಿದ್ದು, ಗುಲಾಬಿ ಮತ್ತು ಟುಲಿಪ್ ಅಲಂಕರಣಗಳೊಂದಿಗೆ ಈ ಉಡುಗೆ ನೀತಾಗೆ ಚೆನ್ನಾಗಿ ಒಪ್ಪುವಂತಿತ್ತು. ಹೂವಿನ ನೆಕ್ಪೀಸ್, ಕ್ಲಾಸಿ ಗ್ಲಾಸ್ಗಳು ಮತ್ತು ಮೃದುವಾದ ಮೇಕ್ಅಪ್ನೊಂದಿಗೆ ಚೆನ್ನಾಗಿ ಕಂಗೊಳಿಸುತ್ತಿದ್ದರು. ಮುಖೇಶ್ ಅಂಬಾನಿ ನೀಲಿ ಬಣ್ಣದ ಶರ್ಟ್ ಮತ್ತು ಬಿಳಿ ಪ್ಯಾಂಟ್ನಲ್ಲಿ ಸುಂದರವಾಗಿ ಕಾಣುತ್ತಿದ್ದರು.
ಆನ್ಲೈನ್ನಲ್ಲಿ ಕಾಣಿಸಿಕೊಂಡ ಹಲವಾರು ವಿಡಿಯೋದಲ್ಲಿ, ಆಕಾಶ್ ಅಂಬಾನಿ ಅವರ ಮಗ ಪೃಥ್ವಿ ಸ್ಥಳದಲ್ಲಿ ಓಡುತ್ತಿರುವುದನ್ನು ಕಾಣಬಹುದು, ಇನ್ನೊಂದು ಕಡೆ ನೀತಾ ಅಂಬಾನಿ ತನ್ನ ತೋಳುಗಳಲ್ಲಿ ಮೊಮ್ಮಗ ಪೃಥ್ವಿಯನ್ನು ಎತ್ತಿಕೊಂಡಿರುವುದು ಕಾಣಬಹುದು. ಮತ್ತೊಂದು ವಿಡಿಯೋದಲ್ಲಿ ಇಶಾ ಅಂಬಾನಿ ಅವರು ತಮ್ಮ ಮಗಳು ಆದಿಯಾಳನ್ನು ತಮ್ಮ ತೋಳುಗಳಲ್ಲಿ ಹಿಡಿದುಕೊಂಡು ವೇದಿಕೆಯ ಮೇಲೆ ಪ್ರದರ್ಶನ ನೀಡುತ್ತಿದ್ದರು.
ಈ ಹಡಗಿನಲ್ಲಿ ಪೋರ್ಟೊಫಿನೊ ಅಲಂಕಾರವನ್ನು ಮಾಡಲಾಗಿತ್ತು. ಕೆಂಪು ಬಣ್ಣದ ಹೂವುಗಳಿಂದ ಆಕರ್ಷಣೆಯನ್ನು ಹೆಚ್ಚಿಸಿದ ಲೈಟ್-ಟೋನ್ ಕುರ್ಚಿಗಳು ಇದ್ದವು. ಇವೆಲ್ಲವೂ ಅದ್ದೂರಿಯಾಗಿತ್ತು. ಮತ್ತೆ ಕೆಲವು ಫೋಟೋದಲ್ಲಿ ಅತಿಥಿಗಳಿಗಾಗಿ ಇದ್ದ ರುಚಿಕರವಾದ ಕೇಕುಗಳಿದ್ದವು. ವೀಡಿಯೊವೊಂದರಲ್ಲಿ, ನಟ ಸಿದ್ಧಾರ್ಥ್ ಮಲ್ಹೋತ್ರಾ ಅನಂತ್ ಮತ್ತು ರಾಧಿಕಾ ಅವರೊಂದಿಗೆ ಚಿಟ್ಚಾಟ್ ಮಾಡುವುದು ಕಂಡುಬಂದಿದೆ. ಆಕಾಶ ನೀಲಿ ಬಣ್ಣದ ಪ್ಯಾಂಟ್ ಕೋಟ್ನಲ್ಲಿ ಸಿದ್ಧಾರ್ಥ್ ಸುಂದರವಾಗಿ ಕಾಣುತ್ತಿದ್ದರು. ಮತ್ತೊಂದು ವಿಡಿಯೋದಲ್ಲಿ ಸಲ್ಮಾನ್ ಖಾನ್ ಮತ್ತು ಸಂಜಯ್ ದತ್ ಅವರು ಅನಂತ್ ಅವರೊಂದಿಗೆ ಮಾತನಾಡುತ್ತಿರುವುದು ಕಂಡುಬಂದಿದೆ.
ಇನ್ನು ಭಾವೀ ದಂಪತಿಗಳಾದ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ಕ್ರೂಸ್ ಪೂರ್ವ ವಿವಾಹದ ಪಾರ್ಟಿಯ ಕೊನೆಯ ದಿನ ರಾಧಿಕಾ ಕೆಂಪು ಬಣ್ಣದ ಮಿಡಿ ಉಡುಪನ್ನು ಧರಿಸಿದ್ದರೆ, ಅನಂತ್ ನೀಲಿ ಬಣ್ಣದ ಮುದ್ರಿತ ಜಾಕೆಟ್ನಲ್ಲಿ ಸುಂದರವಾಗಿ ಕಾಣುತ್ತಿದ್ದರು.