- Home
- Life
- Relationship
- ಟ್ರೆಂಡ್ ಅಲ್ಲಿದೆ ನ್ಯಾನೋ ಶಿಪ್… ಪ್ರೀತಿ, ರೋಮ್ಯಾನ್ಸ್ ಶುರುವಾಗುತ್ತಿದ್ದಂತೆ ರಿಲೇಶನ್’ಶಿಪ್ ಕಥಮ್!
ಟ್ರೆಂಡ್ ಅಲ್ಲಿದೆ ನ್ಯಾನೋ ಶಿಪ್… ಪ್ರೀತಿ, ರೋಮ್ಯಾನ್ಸ್ ಶುರುವಾಗುತ್ತಿದ್ದಂತೆ ರಿಲೇಶನ್’ಶಿಪ್ ಕಥಮ್!
ಡೇಟಿಂಗ್ ಯುಗವು ಬಹಳ ವೇಗವಾಗಿ ಅಪ್ ಡೇಟ್ ಆಗುತ್ತಲೇ ಇರುತ್ತೆ. ವರ್ಷ ಬದಲಾಗುತ್ತಿದ್ದಂತೆ ಡೇಟಿಂಗ್ ಟ್ರೆಂಡ್ ಕೂಡ ಬದಲಾಗುತ್ತಿದೆ. ಇದೀಗ 'ನ್ಯಾನೊಶಿಪ್' ಬಹಳ ವೇಗವಾಗಿ ಟ್ರೆಂಡ್ ಆಗುತ್ತಿದೆ. ಏನಿದು ನ್ಯಾನೋಶಿಪ್ ಎನ್ನುವ ಯೋಚನೆ ಇದ್ದರೆ, ಇದನ್ನ ಪೂರ್ತಿಯಾಗಿ ಓದಿ.

ಸಂಬಂಧಗಳಲ್ಲಿ ಪ್ರಾಮಿಸ್ ಮತ್ತು ಭರವಸೆಗಳು ಬಹಳ ಮುಖ್ಯವಾದ ಸಮಯವಿತ್ತು. ಸಪ್ತಪದಿ ತುಳಿದು, ಅಗ್ನಿಗೆ ಏಳು ಸುತ್ತು ಸುತ್ತಿದ ನಂತರ ಅವರು 7 ಜನ್ಮಗಳವರೆಗೆ ಪರಸ್ಪರ ಒಟ್ಟಿಗೆ ಇರುವುದಾಗಿ ಭರವಸೆ ನೀಡುವ ಕಾಲವು ಇತ್ತು. ಆದರೆ ಈಗ ಜಗತ್ತು ಸಂಪೂರ್ಣವಾಗಿ ಬದಲಾಗಿದೆ, ಭರವಸೆಗಳಿಗೆ ಅವಕಾಶವಿಲ್ಲ. ಸಾಮಾಜಿಕ ಮಾಧ್ಯಮದಲ್ಲಿ ಜನಪ್ರಿಯವಾಗುತ್ತಿರುವ ಹೊಸ ಟ್ರೆಂಡ್ ಇದಕ್ಕೆ ಉದಾಹರಣೆಯಾಗಿದೆ.
ಅಂದಹಾಗೆ, Gen Z ಎಂದೂ ಕರೆಯಲ್ಪಡುವ ಹೊಸ ಪೀಳಿಗೆಗಳ ಡೇಟಿಂಗ್ ಟ್ರೆಂಡ್ (dating trend) 90 ರ ದಶಕದಲ್ಲಿದ್ದ ಪ್ರೀತಿಗಿಂತ ಬಹಳ ಭಿನ್ನವಾಗಿದೆ. ಪ್ರತಿಯೊಬ್ಬರೂ ಈಗ ಇದನ್ನು ಅರ್ಥಮಾಡಿಕೊಂಡಿರಬೇಕು. ಬದಲಾಗುತ್ತಿರುವ ಈ ಕಾಲದಲ್ಲಿ ಇದೀಗ ನ್ಯಾನೋ ಶಿಪ್ ಎನ್ನುವ ಡೇಟಿಂಗ್ ಟ್ರೆಂಡ್ ಟ್ರೆಂಡಿಂಗ್ ನಲ್ಲಿದೆ. ಡೇಟಿಂಗ್ ನ ಹೊಸ ಪದ ನ್ಯಾನೊಶಿಪ್ ಎಂದರೆ ಏನು ಅನ್ನೋದು ಅದರ ಹೆಸರಿನಲ್ಲಿ ಅಡಗಿದೆ, ಇದು ಓಲ್ಡ್ ಸ್ಕೂಲ್ ರೋಮ್ಯಾನ್ಸ್ ನಂಬಿರುವ ನಮ್ಮ ನಿಮ್ಮಂತರವರಿಗೆ ಅಚ್ಚರಿಯನ್ನುಂಟು ಮಾಡಬಹುದು.
ನ್ಯಾನೊಶಿಪ್ ಎಂದರೇನು?
ನ್ಯಾನೊಶಿಪ್ ಅಂದ್ರೆ ಏನು ಅನ್ನೋದನ್ನು ಅದರ ಹೆಸರಿನಿಂದಲೇ ಅರ್ಥಮಾಡಿಕೊಳ್ಳಬಹುದು, ಇದು ಎರಡು ಪದಗಳಿಂದ ಮಾಡಲ್ಪಟ್ಟಿದೆ. ಮೊದಲ ಪದ ನ್ಯಾನೊ-ಸೆಕೆಂಡ್ ಶಿಪ್, ಇಲ್ಲಿ ನ್ಯಾನೋ ಎಂದರೆ ತುಂಬಾ ಚಿಕ್ಕದು ಮತ್ತು ಶಿಪ್ ಅಂದ್ರೆ ಎಂದರೆ ಪ್ರಣಯ ಅಥವಾ ಸಂಬಂಧ. ನೀವು ಇದನ್ನು ಸಣ್ಣ ರೋಮ್ಯಾಂಟಿಕ್ ರಿಲೇಶನ್’ಶಿಪ್ (romantic relationship) ಎಂದು ಕರೆಯಬಹುದು. ಇದು ಅಲ್ಪಾವಧಿಗೆ ಮಾತ್ರ, ಅದು ಎಷ್ಟು ಬೇಗ ಪ್ರಾರಂಭವಾಗುತ್ತದೆಯೋ, ಅಷ್ಟು ಬೇಗ ಕೊನೆಗೊಳ್ಳುತ್ತದೆ. ಇದು ಕೆಲವು ನಿಮಿಷಗಳು, ಗಂಟೆಗಳು ಅಥವಾ ದಿನಗಳವರೆಗೆ ಮಾತ್ರ ಇರಬಹುದು.
ಹೇಗಿರುತ್ತೆ ನ್ಯಾನೊ ಶಿಪ್
ನ್ಯಾನೊಶಿಪ್ ತುಂಬಾ ಚಿಕ್ಕದಾಗಿದೆ, ಆದ್ದರಿಂದ ಇದು ಭವಿಷ್ಯದಲ್ಲಿ ಸೀರಿಯಸ್ ಆಗುತ್ತೆ ಎಂದು ನೀರೀಕ್ಷೆ ಮಾಡೋ ಹಾಗಿಲ್ಲ. ಈ ಸಂಬಂಧದ ಜೀವಿತಾವಧಿ ಬಹಳ ಕಡಿಮೆ, ಉದಾಹರಣೆಯೊಂದಿಗೆ ನೀವು ಅರ್ಥಮಾಡಿಕೊಳ್ಳಲು ಸುಲಭವಾಗುತ್ತದೆ. ಪಾರ್ಟಿ, ಮೆಟ್ರೋ ಅಥವಾ ಆಫೀಸ್ ಈವೆಂಟ್ ನಲ್ಲಿ ಇಬ್ಬರ ಕಣ್ಣುಗಳು ಭೇಟಿಯಾಗುತ್ತೆ, ಆಮೇಲೆ ಮಾತುಕತೆ ನಡೆಯುತ್ತೆ, ರೊಮ್ಯಾನ್ಸ್ (romance) ಕೂಡ ನಡೆಯುತ್ತೆ. ಆದರೆ ಇಬ್ಬರೂ ಈ ಸಂಬಂಧವನ್ನು ಮುಂದುವರಿಸುವ ಬಗ್ಗೆ ಯೋಚಿಸುವುದಿಲ್ಲ, ಅದು ಪ್ರಾರಂಭವಾದ ಕೂಡಲೇ ಕೊನೆಗೊಳ್ಳುತ್ತದೆ. ಇದನ್ನು ನ್ಯಾನೊಶಿಪ್ ಎಂದು ಕರೆಯಲಾಗುತ್ತದೆ.
ನ್ಯಾನೊಶಿಪ್ ಎಂಬ ಪದವು ಎಲ್ಲಿಂದ ಬಂದಿದೆ?
ನ್ಯಾನೊಶಿಪ್ ಡೇಟಿಂಗ್ ಅಪ್ಲಿಕೇಶನ್ (Dating application) ಟಿಂಡರ್ ವರದಿಯಲ್ಲಿ ಕಂಡುಬಂದಿದೆ. ಇದರಲ್ಲಿ, 18 ರಿಂದ 34 ವರ್ಷದೊಳಗಿನ 8 ಸಾವಿರ ಜನರನ್ನು ಸಮೀಕ್ಷೆಗೆ ಒಳಪಡಿಸಲಾಯಿತು. ಇದಕ್ಕಾಗಿ ಬ್ರಿಟನ್, ಅಮೆರಿಕ, ಕೆನಡಾ ಮತ್ತು ಆಸ್ಟ್ರೇಲಿಯಾದಿಂದ ಎರಡು ಸಾವಿರ ಜನರನ್ನು ಆಯ್ಕೆ ಮಾಡಲಾಯಿತು. ರೋಮ್ಯಾಂಟಿಕ್ ಕನೆಕ್ಷನ್ ಸಣ್ಣದು ಎನ್ನುವ ಹಾಗಿಲ್ಲ, ಈ ಸಂಬಂಧದಲ್ಲೂ ಕೆಲವೊಂದು ಮಾತುಗಳು ಹೃದಯಕ್ಕೆ ಇರಿಯುತ್ತೆ ಅನ್ನೋದು ಈ ಸಮೀಕ್ಷೆಯಲ್ಲಿ ತಿಳಿದು ಬಂದಿದೆ.
ವರ್ತಮಾನದಲ್ಲಿ ಬದುಕುವುದು, ಭವಿಷ್ಯದ ಬಗ್ಗೆ ಯೋಚಿಸದಿರುವುದು
ನ್ಯಾನೊಶಿಪ್ ಗಳು (Nanoship) ಭವಿಷ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸೋದಿಲ್ಲ. ಇಲ್ಲಿ ರೊಮ್ಯಾಂಟಿಕ್ ಫೀಲಿಂಗ್ ಇರಬಹುದು, ಆದರೆ ಇದನ್ನು ರೊಮ್ಯಾನ್ಸ್ ಗಿಂತ ಹೆಚ್ಚು ಆಕರ್ಷಣೆ ಅಂತ ಹೇಳಬಹುದು. ದಂಪತಿಗಳ ನಡುವೆ ಭಾವನಾತ್ಮಕ ಅಥವಾ ದೈಹಿಕ ಬಂಧ ಇರೋದಿಲ್ಲ. ಭಾವನಾತ್ಮಕ ಬಂಧದ ಕೊರತೆಯಿಂದಾಗಿ, ಈ ಸಂಬಂಧವು ಹೆಚ್ಚು ಕಾಲ ಉಳಿಯುವುದಿಲ್ಲ. ಅದಕ್ಕೆ ಇದನ್ನು ನ್ಯಾನೋ ಶಿಪ್ ಎನ್ನುತ್ತಾರೆ.