ಕಡಿಮೆ ಅತಿಥಿಗಳು, ರಾಜವೈಭೋಗ, ಇದು ಈಗಿನ ವೆಡ್ಡಿಂಗ್ ಟ್ರೆಂಡ್
ಈ ಹಿಂದೆ, ಒಂದು ವಾರದ ಮದುವೆಯಲ್ಲಿ ಜನಸಂದಣಿ ಸೇರುತ್ತಿತ್ತು, ನೃತ್ಯ ಮತ್ತು ಹಾಡುಗಾರಿಕೆ ದಿನವಿಡೀ ನಡೆಯುತ್ತಿತ್ತು, ಈಗ ಈ ಟ್ರೆಂಡ್ ಸಹ ಸಮಯದೊಂದಿಗೆ ಬದಲಾಗುತ್ತಿವೆ. ಹಾಗಿದ್ರೆ ಈವಾಗ ಯಾವ ರೀತಿಯ ವೆಡ್ಡಿಂಗ್ ಟ್ರೆಂಡ್ ಇದೆ ಗೊತ್ತಾ?
ನೀವು ಈ ವರ್ಷ ನಿಮ್ಮ ಮದುವೆಯನ್ನು ಯೋಜಿಸುತ್ತಿದ್ದರೆ (wedding plan), ಇನ್ಸ್ಟಾದ ಹ್ಯಾಶ್ಟ್ಯಾಗ್‌ಗಳು, ವೆಡ್ಡಿಂಗ್ ಬೆಲ್ಸ್ ಮತ್ತು ಫ್ಯಾಷನ್, ಅಲಂಕಾರ, ಮೆಹಂದಿ, ಸ್ಟೈಲಿಂಗ್ ಮತ್ತು ಟ್ರಸ್ಸೊ ತಯಾರಿಕೆಯಲ್ಲಿ ನಿಮಗೆ ಸಹಾಯ ಮಾಡುತ್ತದೆ. ಇದು ಬಿಗ್ ಫ್ಯಾಟ್ ಭಾರತೀಯ ವಿವಾಹವಾಗಿರಲಿ ಅಥವಾ ಖಾಸಗಿ ವಿವಾಹವಾಗಿರಲಿ, ಡೆಸ್ಟಿನೇಶನ್ ವೆಡ್ಡಿಂಗ್ ನಿಂದ ಹಿಡಿದು ಗ್ರೀನ್ ವೆಡ್ಡಿಂಗ್ ವರೆಗೆ ಈ ವಿವಾಹ ಸೀಸನ್ ನಲ್ಲಿ ಏನು ವಿಶೇಷಗಳಿವೆ ಎಂದು ತಿಳಿಯಿರಿ.
ಕನಿಷ್ಠ ಅತಿಥಿ, ಮ್ಯಾಕ್ಸಿಮಲಿಸ್ಟ್ ಥೀಮ್ (Minimum guests and maximalist theme)
ಕೊರೋನಾ ಯುಗದಲ್ಲಿ, ಅತಿಥಿಗಳ ಪಟ್ಟಿಯನ್ನು ಕಡಿಮೆ ಮಾಡುವ ಪ್ರೆಶರ್ ಈಗ ಜನರ ಆಯ್ಕೆಯ ಭಾಗವಾಗಿ ಮಾಡಲಾಗಿದೆ. ಈ ಕ್ಷಣವನ್ನು ಸ್ಮರಣೀಯವಾಗಿಸಲು ಜನರು ಅತ್ಯಂತ ಆಪ್ತ ಸ್ನೇಹಿತರು ಮತ್ತು ಸಂಬಂಧಿಕರ ನಡುವೆ ಮದುವೆಯಾಗಲು ಆದ್ಯತೆ ನೀಡುತ್ತಿದ್ದಾರೆ.
ಗೋಧೂಳಿ ಮುಹೂರ್ತದಲ್ಲಿ ಮದುವೆ (evening wedding)
ಇದನ್ನು ಗೋಲ್ಡನ್ ಅವರ್ಸ್ ವೆಡ್ಡಿಂಗ್ ಎಂದೂ ಕರೆಯುತ್ತಾರೆ. ಇದರಲ್ಲಿ ಮದುವೆಯ ಎಲ್ಲಾ ಆಚರಣೆಗಳನ್ನು ಉತ್ತರ ದಿಕ್ಕಿನಲ್ಲಿ ಧ್ರುವ ನಕ್ಷತ್ರವನ್ನು ನೋಡಿ, ಸಂಧ್ಯಾಕಾಲದಲ್ಲಿ ಏಳು ಸುತ್ತುಗಳನ್ನು ತೆಗೆದುಕೊಳ್ಳಬೇಕು. ಈಗಂತೂ ಜೋಡಿಗಳು ತಮ್ಮ ಮದುವೆಯ ಎಲ್ಲಾ ಆಚರಣೆಗಳಲ್ಲಿ ತಮ್ಮ ಸಂಸ್ಕೃತಿಯನ್ನು ಉತ್ಸಾಹದಿಂದ ಅನುಸರಿಸುತ್ತಿದ್ದಾರೆ.
ವಿಕ್ಟೋರಿಯನ್ ಎಫೆಕ್ಟ್ (victorean effect)
ಈ ವರ್ಷ ಅದು ಎಲ್ಲೆಡೆ ಟ್ರೆಂಡ್ ನಲ್ಲಿದೆ. ಇದರಲ್ಲಿ ಭವ್ಯವಾದ ವಿಕ್ಟೋರಿಯನ್ ಯುಗವನ್ನು ಪ್ರದರ್ಶಿಸುವ ರೀತಿಯಲ್ಲಿ ವೆಡ್ಡಿಂಗ್ ಲೊಕೇಶನ್ ಮರುಸೃಷ್ಟಿಸಲಾಗುತ್ತೆ. ಲ್ಯಾವೆಂಡರ್ ಮತ್ತು ಪ್ರಿಮ್ ರೋಸ್ ಬಣ್ಣದ ಲೆಹೆಂಗಾಗಳು ನಿಮ್ಮನ್ನು ಅದೇ ಯುಗಕ್ಕೆ ಕರೆದೊಯ್ಯುತ್ತವೆ. ರಾಯಲ್ ಶೈಲಿಯ ಹೂವುಗಳ ಹೂಗುಚ್ಛಗಳು , ಮೇಣದ ಬತ್ತಿಯ ಅಲಂಕಾರ ಎಲ್ಲವೂ ಅದ್ಭುತವಾಗಿರುತ್ತೆ.
ಗ್ರೀನ್ ವೆಡ್ಡಿಂಗ್ (green wedding)
ಪರಿಸರ ಸ್ನೇಹಿ ವಿವಾಹದಲ್ಲಿ, ಕಾರ್ಬನ್ ಡೈ ಆಕ್ಸೈಡ್ ಕಡಿಮೆ ಮಾಡುವುದು ಮತ್ತು ಆಹಾರ ತ್ಯಾಜ್ಯವನ್ನು ಕನಿಷ್ಠ ಮಟ್ಟದಲ್ಲಿಡುವುದು, ಪ್ಲಾಸ್ಟಿಕ್ ಮತ್ತು ಒಂದು ಬಾರಿಯ ಬಳಕೆಯನ್ನು ತಪ್ಪಿಸುವುದು ಮುಂತಾದ ಭೂಮಿ ತಾಯಿಯನ್ನು ಸಂರಕ್ಷಿಸುವ ಕಾರ್ಯಕ್ಕೆ ಜೋಡಿಗಳು ಆದ್ಯತೆ ನೀಡುತ್ತಿದ್ದಾರೆ.. ಅಲಂಕಾರಕ್ಕಾಗಿ ಮರುಬಳಕೆ ಮಾಡಬಹುದಾದ ಹೂವುಗಳು ಮತ್ತು ವಸ್ತುಗಳನ್ನು ಬಳಸುವುದು. ಗಾಜಿನ ಪಾತ್ರೆಗಳು, ಕುಲ್ಹಾದ್ ಗಳು, ಮರದ ಚಮಚಗಳು ಮತ್ತು ಜೇಡಿಮಣ್ಣಿನ ಲೋಟಗಳು ಈಗ ಟ್ರೆಂಡ್ ನಲ್ಲಿವೆ.
ಸಂಪೂರ್ಣ ಮನರಂಜನೆ ಮದುವೆ (full of entertainment)
ಮನರಂಜನೆಯಿಲ್ಲದೆ ಭಾರತೀಯ ವಿವಾಹಗಳನ್ನು ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ. ಅತಿಥಿಗಳನ್ನು ಸ್ವಾಗತಿಸಲು ದಂಪತಿಗಳು ಎಸ್ಕೇಪ್ ರೂಮ್, ಫೋಟೋ ಬೂತ್ ಮತ್ತು ನೋ ಯುವರ್ ಕಪಲ್ ನಂತಹ ಕಾರ್ಯಕ್ರಮಗಳನ್ನು ಯೋಜಿಸುತ್ತಿದ್ದಾರೆ. ಕೆಲವು ದಂಪತಿಗಳು ಕ್ಯಾರಿಯೋಕ್ ನೈಟ್ ಮತ್ತು ಫ್ಯಾಮಿಲಿ ಆಲ್ಬಮ್ ನಂತಹ ಕಾರ್ಯಕ್ರಮಗಳನ್ನು ಸಹ ಆಯೋಜಿಸುತ್ತಿದ್ದಾರೆ. ಇಂತಹ ಕಾರ್ಯಕ್ರಮಗಳು ತುಂಬಾನೆ ಮಜವಾಗಿರುತ್ತೆ.