MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Life
  • Relationship
  • ಆನ್ ಲೈನ್ ಮೆಸೇಜಿಂಗ್ ಅಪ್ ನಿಂದ ಸಂಬಂಧದಲ್ಲಿ ಬಿರುಕು… ಇರಲಿ ಎಚ್ಚರ

ಆನ್ ಲೈನ್ ಮೆಸೇಜಿಂಗ್ ಅಪ್ ನಿಂದ ಸಂಬಂಧದಲ್ಲಿ ಬಿರುಕು… ಇರಲಿ ಎಚ್ಚರ

ನೀವು ಮೆಸೇಂಜಿಂಗ್ ಅಪ್ಲಿಕೇಶಸ್ ಬಳಕೆ ಮಾಡುತ್ತಿದ್ದೀರಾ? ಹಾಗಿದ್ರೆ ಅದರ ಸರಿಯಾದ ಬಳಕೆ ಮಾಡೋದು ಮುಖ್ಯ. ಯಾಕೆಂದರೆ ಇವುಗಳ ಬಳಕೆಯಿಂದಾಗಿ ನಿಮ್ಮ ಸಂಬಂಧದ ಮೇಲೆ ಭಾರಿ ಪರಿಣಾಮ ಬೀರಬಹುದು. ಆದುದರಿಂದ  ಸರಿಯಾದ ರೀತಿ ಬಳಕೆ ಮಾಡೋದು ತುಂಬಾನೆ ಮುಖ್ಯ. ಮೆಸೇಜಿಂಗ್ ಆಪ್ ಯಾವ ರೀತಿ ಸಂಬಂಧದ ಮೇಲೆ ಪರಿಣಾಮ ಬೀರುತ್ತೆ ನೋಡೋಣ. 

3 Min read
Suvarna News
Published : Nov 12 2022, 08:38 AM IST
Share this Photo Gallery
  • FB
  • TW
  • Linkdin
  • Whatsapp
111

ಈಗಿನ ಕಾಲದಲ್ಲಿ, ಜನರು ತಮ್ಮ ಜೀವನವನ್ನು ಹೆಚ್ಚು ಅನುಕೂಲಕರವಾಗಿಸಲು ತಂತ್ರಜ್ಞಾನವನ್ನು ಆಶ್ರಯಿಸುತ್ತಿದ್ದಾರೆ. ಸ್ಮಾರ್ಟ್ ಫೋನ್ ಮತ್ತು ಅದರಲ್ಲಿರುವ ವಿವಿಧ ಅಪ್ಲಿಕೇಶನ್ಸ್  ಅನೇಕ ವಿಷಯಗಳನ್ನು ಸುಲಭಗೊಳಿಸುತ್ತವೆ. ಈ ದಿನಗಳಲ್ಲಿ, ಪ್ರತಿಯೊಬ್ಬರ ಫೋನ್ ನಲ್ಲಿ ಅನೇಕ ರೀತಿಯ ಆನ್ ಲೈನ್ ಮೆಸೇಜಿಂಗ್ ಅಪ್ಲಿಕೇಶನ್ ಗಳಿವೆ(Online messaging app). ರಿಪೀಟೆಡ್ ಕಾಲ್ಸ್  ಮಾಡುವ ಕಿರಿಕಿರಿಯಿಂದ ಇದು ನಿಮ್ಮನ್ನು ರಕ್ಷಿಸುತ್ತೆ. ಅಲ್ಲದೆ, ಈ ಅಪ್ಲಿಕೇಶನ್ಗಳ ಮೂಲಕ, ನಿಮ್ಮ ಅನೇಕ ಕೆಲಸಗಳನ್ನು ತುಂಬಾ ಸುಲಭಗೊಳಿಸಬಹುದು.

211

ಆದರೆ, ಈ ಮೆಸೇಜಿಂಗ್ ಅಪ್ಲಿಕೇಶನ್ ನಿಮ್ಮ ಫೋನ್ ನಲ್ಲಿರುವ ಒಂದು ಕಾಮನ್ ಅಪ್ಲಿಕೇಶನ್ ಮಾತ್ರವಲ್ಲ, ಇದು ನಿಮ್ಮ ಇಡೀ ಜೀವನ ಮತ್ತು ಸಂಬಂಧಗಳ ಮೇಲೆ ಪರಿಣಾಮ ಬೀರಬಹುದು. ಆನ್ಲೈನ್ ಮೆಸೇಜಿಂಗ್ ಅಪ್ಲಿಕೇಶನ್ಗಳು ನಿಮ್ಮ ರಿಲೇಷನ್ಶಿಪ್ ನ್ನು(Relationship) ಅನೇಕ ರೀತಿಯಲ್ಲಿ ಹಾಳುಮಾಡಬಹುದು. ಆದ್ದರಿಂದ ಈ ಆನ್ ಲೈನ್ ಮೆಸೇಜಿಂಗ್ ಅಪ್ಲಿಕೇಶನ್ ಗಳಿಂದ ನಿಮ್ಮ ಸಂಬಂಧವು ಹೇಗೆ ಹಾನಿಗೊಳಗಾಗಬಹುದು ಎಂಬುದನ್ನು ಇಲ್ಲಿ ತಿಳಿಯೋಣ.  

311

ಮೆಸೇಜ್ ಗೆ ರಿಪ್ಲೈ ಮಾಡಿಲ್ಲಾಂದ್ರೆ ಜಗಳ(Fight) ಗ್ಯಾರಂಟಿ! 
ಆಗಾಗ್ಗೆ ಕಪಲ್ಸ್ ಈ ಆನ್ಲೈನ್ ಮೆಸೇಜಿಂಗ್ ಅಪ್ಲಿಕೇಶನ್ಗಳ ಮೂಲಕ ಪರಸ್ಪರ ಮೆಸೇಜ್ ಕಳುಹಿಸುತ್ತಾರೆ. ಆದರೆ ನೀವು ಫ್ರೀ ಇದ್ದರೆ, ನಿಮ್ಮ ಸಂಗಾತಿಯೂ ಅದೇ ಸಮಯದಲ್ಲಿ ಫ್ರೀ ಇರಬಹುದಾದ ಅಗತ್ಯವಿಲ್ಲ. ಅನೇಕ ಬಾರಿ ಅವರು ಬ್ಯುಸಿ ಇರಬಹುದು ಮತ್ತು ಮೆಸೇಜ್ಗಳಿಗೆ ಉತ್ತರಿಸಲು ಸಾಧ್ಯವಾಗದಿರಬಹುದು. 

411

ಅಂತಹ ಪರಿಸ್ಥಿತಿಯಲ್ಲಿ, ಇನ್ನೊಬ್ಬ ವ್ಯಕ್ತಿ ತನ್ನ ಸಂಗಾತಿ(Partner) ತಮ್ಮನ್ನು ನಿರ್ಲಕ್ಷಿಸುತ್ತಿದ್ದಾರೆ ಅಥವಾ ಈಗ ಅವನು ಈ ರಿಲೇಷನ್ಶಿಪ್ನಲ್ಲಿ ಆಸಕ್ತಿ ಹೊಂದಿಲ್ಲ ಎಂದು ಭಾವಿಸುತ್ತಾನೆ. ಇದರಿಂದಾಗಿ ಪರಸ್ಪರ ಉದ್ವಿಗ್ನತೆ ಮತ್ತು ಜಗಳಗಳು ಹೆಚ್ಚಾಗಲು ಪ್ರಾರಂಭಿಸುತ್ತವೆ.

511

ಹೆಚ್ಚುತ್ತಿರುವ ಅನುಮಾನ
ಇದು ಸಾಮಾನ್ಯವಾಗಿ ಲಾಂಗ್  ಡಿಸ್ಟೆನ್ಸ್ ರಿಲೇಷನ್ಶಿಪ್ ನಲ್ಲಿ(Long Distance relationship) ಕಂಡುಬರುತ್ತೆ. ಆನ್ಲೈನ್ ಮೆಸೇಜಿಂಗ್ ಅಪ್ಲಿಕೇಶನ್ನಲ್ಲಿ, ನಿಮ್ಮ ಸಂಗಾತಿಯ ಲಾಸ್ಟ್ ಸೀನ್ ನೋಡಬಹುದು. ಹಾಗಾಗಿ  ನಿಮ್ಮ ಸಂಗಾತಿಯು ತಡರಾತ್ರಿಯವರೆಗೆ ಆನ್ ಲೈನ್ ಮೆಸೇಜಿಂಗ್ ಅಪ್ಲಿಕೇಶನ್ ನಲ್ಲಿ ಸಕ್ರಿಯವಾಗಿದ್ದರೆ, ವಿಭಿನ್ನ ರೀತಿಯ ಆಲೋಚನೆಗಳು ಬರುತ್ತವೆ. ಅನೇಕ ಬಾರಿ ಜನರು ತಮ್ಮ ಸಂಗಾತಿಯನ್ನು ಅನುಮಾನಿಸಲು ಪ್ರಾರಂಭಿಸುತ್ತಾರೆ. ಇದರಿಂದಾಗಿ ಅವರ ನಡುವೆ ಬಿರುಕು ಬಿಡುವ ಸಾಧ್ಯತೆ ಇರುತ್ತೆ .

611
<p>Recently, an extra-marital dating app, Gleeden, conducted a survey for married people titled "Why do women commit adultery". The app now has over 6,00,000 users ageing between 34-49 years and the data they provide about extra-marital affairs is eye-opening.</p>

<p>Recently, an extra-marital dating app, Gleeden, conducted a survey for married people titled "Why do women commit adultery". The app now has over 6,00,000 users ageing between 34-49 years and the data they provide about extra-marital affairs is eye-opening.</p>

ಮೆಸೇಜ್ ಚೆಕ್ (Message checking)ಮಾಡೋದರಿಂದ ಸಂಬಂಧದಲ್ಲಿ ಬಿರುಕು ಉಂಟಾಗುತ್ತೆ 
ನಮ್ಮ ಸಂಗಾತಿಯ ಆನ್ ಲೈನ್ ಮೆಸೇಜಿಂಗ್ ಅಪ್ಲಿಕೇಶನ್ ನಲ್ಲಿ ಇತರರಿಗೆ ಮೆಸೇಜ್ ಕಳುಹಿಸೋದು ಮತ್ತು ರಿಸೀವ್ ಮಾಡಿದ ಸಂದೇಶಗಳನ್ನು ಪರಿಶೀಲಿಸೋದು ಹೆಚ್ಚಿನವರ ಅಭ್ಯಾಸ. ಆದರೆ ಆಗಾಗ್ಗೆ ಹಾಗೆ ಮಾಡೋದರಿಂದ ಸಂಬಂಧಗಳಲ್ಲಿ ಬಿರುಕು ಉಂಟಾಗುತ್ತವೆ. 
 

711

ಮುಂದೆ ಇರುವ ವ್ಯಕ್ತಿಯ ಮೆಸೇಜ್ ಚೆಕ್ ಮಾಡೋದು ಯಾವುದೇ ವ್ಯಕ್ತಿ ಇಷ್ಟಪಡೋದಿಲ್ಲ. ಈ ಕಾರಣದಿಂದಾಗಿ ಅವರ ನಡುವೆ ಜಗಳಗಳು ನಡೆಯುತ್ತವೆ. ಕೆಲವೊಮ್ಮೆ ವ್ಯಕ್ತಿ ತನ್ನ ಸಂಗಾತಿಯು ತನ್ನನ್ನು ನಂಬೋದಿಲ್ಲ ಎಂದು ಭಾವಿಸುತ್ತಾನೆ. ಈ ಆಲೋಚನೆಯು ಸಂಬಂಧವನ್ನು ಹಾನಿಗೊಳಿಸುತ್ತೆ.

811

ಆನ್ ಲೈನ್ ನಲ್ಲಿ ಮೆಸೇಜ್ ಸ್ಟಾಕ್(Message stock) ಮಾಡುವ ಅಭ್ಯಾಸ ಬೆಳೆಸೋದು
ಆನ್ ಲೈನ್ ಮೆಸೇಜಿಂಗ್ ಅಪ್ಲಿಕೇಶನ್ ಗಳಲ್ಲಿ ಈ ಸಮಸ್ಯೆ ತುಂಬಾ ಸಾಮಾನ್ಯವಾಗಿದೆ. ಹೆಚ್ಚಿನ ದಂಪತಿಗಳು ತಮ್ಮ ಸಂಗಾತಿಯ ಆನ್ ಲೈನ್ ಚಟುವಟಿಕೆಯನ್ನು ಪರಿಶೀಲಿಸಲು ದಿನವಿಡೀ ತಮ್ಮ ಸ್ಕ್ರೀನ್ ಪದೇ ಪದೇ ನೋಡುತ್ತಾರೆ. ಅವರು ಆನ್ ಲೈನ್ ನಲ್ಲಿರೋದರಿಂದ ಹಿಡಿದು ಕೊನೆಯ ಇಮೇಜ್ ವರೆಗೂ ಪರಿಶೀಲಿಸುತ್ತಾರೆ. ಈ ರೀತಿಯಾಗಿ, ಅವರು ತಮ್ಮ ಸಂಗಾತಿಯನ್ನು ಆನ್ ಲೈನ್ ನಲ್ಲಿ ಸ್ಟಾಕ್ ಮಾಡಲು ಅಭ್ಯಾಸ ಮಾಡಿಕೊಳ್ಳುತ್ತಾರೆ. ಈ ಕಾರಣದಿಂದಾಗಿ ಅವರು ಕೆಲವೊಮ್ಮೆ ತಮ್ಮ ಸಂಗಾತಿಗೆ ವಿವಿಧ ಪ್ರಶ್ನೆಗಳನ್ನು ಕೇಳುತ್ತಾರೆ. ಇದರಿಂದ ಸಂಬಂಧ ಹದಗೆಡುವ ಸಾಧ್ಯತೆ ಇದೆ.

911

ನೆಗೆಟೀವ್ ಸ್ಟೇಟಸ್ (Negative status)
ದಂಪತಿಗಳು ಜಗಳವಾಡಿದಾಗಲೆಲ್ಲಾ, ಆಗಾಗ್ಗೆ  ಭಾವನಾತ್ಮಕ ಅಥವಾ ನಕಾರಾತ್ಮಕ ಸಂದೇಶಗಳನ್ನು ಟೈಪ್ ಮಾಡುತ್ತಾರೆ ಅಥವಾ ವೀಡಿಯೊಗಳನ್ನು ಸ್ಟೇಟಸ್ ಗೆ  ಹಾಕುತ್ತಾರೆ. ಹೀಗೆ ಮಾಡೋ ಮೂಲಕ, ತಮ್ಮ ಸಂಗಾತಿಯು ತಮ್ಮನ್ನು ಗುರಿಯಾಗಿಸುತ್ತಿದ್ದಾರೆ ಅಥವಾ ನಿಂದಿಸುತ್ತಿದ್ದಾರೆ ಎಂದು ವ್ಯಕ್ತಿ ಭಾವಿಸುತ್ತಾನೆ. ಇದರಿಂದಾಗಿ ಪರಿಸ್ಥಿತಿ ಸರಿ ಆಗೋ ಬದಲು ಪರಿಸ್ಥಿತಿ ಇನ್ನಷ್ಟು ಹದಗೆಡುತ್ತೆ.

1011

ಆನ್ಲೈನ್ ಮೆಸೇಜಿಂಗ್ ಅಪ್ಲಿಕೇಶನ್ಗಳಲ್ಲಿ ಮಾತನಾಡೋದು
ಇಂದಿನ ಡಿಜಿಟಲ್ ಯುಗದಲ್ಲಿ, ಹೆಚ್ಚಿನ ಕಪಲ್ ಆನ್ಲೈನ್ ಮೆಸೇಜಿಂಗ್ ಅಪ್ಲಿಕೇಶನ್ಗಳಲ್ಲಿ ತಮ್ಮ ಸಮಯ ಕಳೆಯುತ್ತಾರೆ. ಅವರು ಕರೆಗಳಲ್ಲಿ ಪರಸ್ಪರ ಮಾತನಾಡುವುದಕ್ಕಿಂತ ಆನ್ಲೈನ್ ಮೆಸೇಜಿಂಗ್ ಅಪ್ಲಿಕೇಶನ್ಗಳಿಗೆ ಆದ್ಯತೆ ನೀಡುತ್ತಾರೆ. 

1111

ಗಿಫ್ಟ್ ನೀಡೋದರಿಂದ ಹಿಡಿದು ಹುಟ್ಟುಹಬ್ಬದ ಶುಭಾಶಯಗಳನ್ನು ಸಹ ಎಮೋಜಿಗಳ ಮೂಲಕ ಕಳುಹಿಸಲಾಗುತ್ತೆ. ಈ ಕಾರಣದಿಂದಾಗಿ ಸಂಬಂಧದಲ್ಲಿ ವೈಯಕ್ತಿಕ ಸ್ಪರ್ಶ (Personal touch)ಅಥವಾ ಅನ್ಯೋನ್ಯತೆಯು ಕೊನೆಗೊಳ್ಳಲು ಪ್ರಾರಂಭಿಸುತ್ತೆ  ಮತ್ತು  ರಿಲೇಷನ್ಶಿಪ್ನ  ಅಡಿಪಾಯವು ದುರ್ಬಲವಾಗುತ್ತೆ. ಆದ್ದರಿಂದ, ಆನ್ಲೈನ್ ಮೆಸೇಜಿಂಗ್ ಅಪ್ಲಿಕೇಶನ್ನಲ್ಲಿ ಚಾಟ್ ಮಾಡಿ, ಆದರೆ ಒಟ್ಟಿಗೆ ಒಳ್ಳೆ ಟೈಮ್ ಕಳೆಯಲು ಮರೆಯಬೇಡಿ.
 

About the Author

SN
Suvarna News
ಸಂಬಂಧಗಳು
ದಂಪತಿಗಳು
Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved