MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Life
  • Relationship
  • ಸ್ಯಾಲರಿ ಹೈಕ್‌ ಮಾಡದ ಕಂಪನಿ, ಇಡೀ ಉಗ್ರಾಣಕ್ಕೆ ಬೆಂಕಿ ಇಟ್ಟ 29 ವರ್ಷದ ಉದ್ಯೋಗಿ

ಸ್ಯಾಲರಿ ಹೈಕ್‌ ಮಾಡದ ಕಂಪನಿ, ಇಡೀ ಉಗ್ರಾಣಕ್ಕೆ ಬೆಂಕಿ ಇಟ್ಟ 29 ವರ್ಷದ ಉದ್ಯೋಗಿ

ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ನಡೆದ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಸಂಬಳ ಹೆಚ್ಚಳ ಸಿಗಲಿಲ್ಲ ಎಂಬ ಅಸಮಾಧಾನದಿಂದ ಉದ್ಯೋಗಿಯೊಬ್ಬ 12 ಲಕ್ಷ ಚದರ ಅಡಿ ವಿಸ್ತೀರ್ಣದ ಬೃಹತ್ ಗೋದಾಮಿಗೆ ಬೆಂಕಿ ಹಚ್ಚಿದ ಆರೋಪದಲ್ಲಿ ಬಂಧನಕ್ಕೊಳಗಾಗಿದ್ದಾನೆ. ವಿಡಿಯೋ ಕೂಡ ವೈರಲ್ ಆಗಿದೆ.

1 Min read
Author : Sushma Hegde
Published : Jun 05 2026, 04:01 PM IST
Share this Photo Gallery
  • FB
  • TW
  • Linkdin
  • Whatsapp
15
ಏನಿದು ಘಟನೆ?
Image Credit : Asianet News

ಏನಿದು ಘಟನೆ?

ಕ್ಯಾಲಿಫೋರ್ನಿಯಾದ ಒಂಟಾರಿಯೊ ನಗರದಲ್ಲಿರುವ ಭಾರೀ ಗೋದಾಮಿನಲ್ಲಿ ಏಪ್ರಿಲ್ 7ರ ಮುಂಜಾನೆ ಅಗ್ನಿ ಅವಘಡ ಸಂಭವಿಸಿತು. ಸುಮಾರು 29 ವರ್ಷದ ಉದ್ಯೋಗಿ ಚಾಮೆಲ್ ಅಬ್ದುಲ್ಕರೀಂ ಎಂಬಾತನೇ ಉದ್ದೇಶಪೂರ್ವಕವಾಗಿ ಬೆಂಕಿ ಹಚ್ಚಿದ್ದಾನೆ ಎಂದು ಪೊಲೀಸರು ಆರೋಪಿಸಿದ್ದಾರೆ. ಈ ಗೋದಾಮಿನಲ್ಲಿ ಟಿಶ್ಯೂ, ಟಾಯ್ಲೆಟ್ ಪೇಪರ್ ಸೇರಿದಂತೆ ಕಾಗದ ಆಧಾರಿತ ಅಗತ್ಯ ವಸ್ತುಗಳನ್ನು ಸಂಗ್ರಹಿಸಲಾಗುತ್ತಿತ್ತು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
25
ಬದುಕಲು ಸಾಕಾಗುವಷ್ಟು ಸಂಬಳ ಕೊಟ್ಟಿದ್ದರೆ ಸಾಕಿತ್ತು
Image Credit : Asianet News

ಬದುಕಲು ಸಾಕಾಗುವಷ್ಟು ಸಂಬಳ ಕೊಟ್ಟಿದ್ದರೆ ಸಾಕಿತ್ತು

ವೈರಲ್ ಆಗಿರುವ ವಿಡಿಯೋದಲ್ಲಿ ಆರೋಪಿಯು ಗೋದಾಮಿನೊಳಗೆ ವಸ್ತುಗಳಿಗೆ ಬೆಂಕಿ ಹಚ್ಚುತ್ತಾ, "ನಮಗೆ ಬದುಕಲು ಸಾಕಾಗುವಷ್ಟು ಸಂಬಳ ಕೊಟ್ಟಿದ್ದರೆ ಸಾಕಿತ್ತು" ಎಂದು ಹೇಳುತ್ತಿರುವುದು ಕೇಳಿಬಂದಿದೆ. ಬೆಂಕಿ ಹಚ್ಚಿದ ನಂತರ "ಇಗೋ ನಿಮ್ಮ ಸರಕುಗಳೆಲ್ಲ ಹೋಗಿವೆ" ಎಂದು ಹೇಳಿರುವುದಾಗಿ ವರದಿಯಾಗಿದೆ.

35
175 ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ
Image Credit : Asianet News

175 ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ

ಬೆಂಕಿ ಕ್ಷಣಾರ್ಧದಲ್ಲೇ ವ್ಯಾಪಿಸಿ ಆರು ಹಂತದ (Six-Alarm) ತುರ್ತು ಪರಿಸ್ಥಿತಿಯಾಗಿ ಮಾರ್ಪಟ್ಟಿತು. ಸುಮಾರು 175 ಅಗ್ನಿಶಾಮಕ ಸಿಬ್ಬಂದಿ ಹಲವು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ನಿಯಂತ್ರಿಸಿದರು. ಬೆಂಕಿಯ ತೀವ್ರತೆಗೆ ಗೋದಾಮಿನ ಮೇಲ್ಛಾವಣಿಯ ಒಂದು ಭಾಗ ಕುಸಿದಿದ್ದು, ಅಪಾರ ಪ್ರಮಾಣದ ಸರಕುಗಳು ನಾಶವಾಗಿವೆ.

45
ಕೋಟ್ಯಂತರ ರೂಪಾಯಿ ನಷ್ಟ
Image Credit : Asianet News

ಕೋಟ್ಯಂತರ ರೂಪಾಯಿ ನಷ್ಟ

ಸುಮಾರು 156 ಮಿಲಿಯನ್ ಡಾಲರ್ ಮೌಲ್ಯದ ಗೋದಾಮು ಹಾಗೂ ಅದರಲ್ಲಿದ್ದ ಸರಕುಗಳಿಗೆ ಭಾರೀ ಹಾನಿಯಾಗಿದೆ. ಒಟ್ಟು ನಷ್ಟವು 600 ಮಿಲಿಯನ್ ಡಾಲರ್‌ಗಿಂತಲೂ ಹೆಚ್ಚು ಇರಬಹುದು ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ. ಈ ಘಟನೆಯಿಂದ ಪಶ್ಚಿಮ ಅಮೆರಿಕದ ಸರಕು ಸರಬರಾಜು ವ್ಯವಸ್ಥೆಯ ಮೇಲೂ ಪರಿಣಾಮ ಬೀರುವ ಸಾಧ್ಯತೆಯಿದೆ.

55
ಬಂಧನ, ತನಿಖೆ ಮುಂದುವರಿಕೆ
Image Credit : IANS

ಬಂಧನ, ತನಿಖೆ ಮುಂದುವರಿಕೆ

ಘಟನೆ ಬಳಿಕ ಆರೋಪಿಯನ್ನು ಪೊಲೀಸರು ಬಂಧಿಸಿದ್ದು, ಅಗ್ನಿಸ್ಪರ್ಶ (Arson) ಸೇರಿದಂತೆ ಹಲವು ಗಂಭೀರ ಆರೋಪಗಳಡಿ ಪ್ರಕರಣ ದಾಖಲಿಸಲಾಗಿದೆ. ವಿಡಿಯೋ ಮತ್ತು ಸಾಮಾಜಿಕ ಜಾಲತಾಣದ ಪೋಸ್ಟ್‌ಗಳನ್ನು ತನಿಖೆಯ ಭಾಗವಾಗಿ ಪರಿಶೀಲಿಸಲಾಗುತ್ತಿದೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

SH
Sushma Hegde
ಸುವರ್ಣ ನ್ಯೂಸ್ ಸುದ್ದಿ ಮಾಧ್ಯಮದ ಡಿಜಿಟಲ್ ವಿಭಾಗದಲ್ಲಿ ಕಳೆದ ಮೂರು ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ದೃಶ್ಯ ಮಾಧ್ಯಮ, ಡಿಜಿಟಲ್‌ ಮಾಧ್ಯಮದಲ್ಲಿ 5 ವರ್ಷ ಕೆಲಸ ಮಾಡಿದ ಅನುಭವವಿದೆ. SDM ಉಜಿರೆಯಲ್ಲಿ ಪತ್ರಿಕೋದ್ಯಮದ ಸ್ನಾತಕೋತ್ತರ ಪದವಿ. ಸುದ್ದಿಲೋಕದಲ್ಲಿ ರಾಜಕೀಯ, ದೇಶ, ಜ್ಯೋತಿಷ್ಯ, ಜೀವನಶೈಲಿ, ವಾಣಿಜ್ಯ, ಕ್ರೈಂ ಸುದ್ದಿಗಳಲ್ಲಿ ಆಸಕ್ತಿ.
ವೈರಲ್ ಸುದ್ದಿ
ಸಂಬಂಧಗಳು
ಸುದ್ದಿ
Latest Videos
Recommended Stories
Recommended image1
ಹೈಸ್ಕೂಲ್ ಗೆಳತಿಯನ್ನ ಮದುವೆಯಾಗಲು ಲಿಂಗ ಬದಲಿಸಿಕೊಂಡು ರಾಹುಲ್ ಆದ ರಾಖಿ ಕುಮಾರಿ!
Recommended image2
ವಿಜಯ್ ಸಿಎಂ ಆಗೋದಕ್ಕೂ ಮೊದಲು ತ್ರಿಶಾಗೆ ಬೈದಿದ್ದ ಈ ನಟ ಈಗ ಮಾಡಿದ್ದೇನು? ಮುಂದೇನ್ ಗ್ರಹಚಾರ ಕಾದಿದೆ!?
Recommended image3
ಗಂಡ ಹೆಂಡತಿ ನಾಚಿಕೆಯಿಲ್ಲದೆ ಈ ಕೆಲಸಗಳನ್ನು ಮಾಡಬೇಕಂತೆ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved