ಬ್ಲೂ ಫಿಲಂನಲ್ಲಿ ತೋರಿಸೋದೆಲ್ಲಾ ನಿಜ ಅಲ್ಲ; ಎರಡರ ನಡುವೆ ವ್ಯತ್ಯಾಸ ಸಾಕಷ್ಟಿವೆ
ಇತ್ತೀಚಿನ ದಿನಗಳಲ್ಲಿ ಪಾರ್ನ್ ಅಥವಾ ಬ್ಲೂ ಫಿಲಂಗಳು ಜನರ ಮೇಲೆ ಸಾಕಷ್ಟು ಪರಿಣಾಮ ಬೀರುತ್ತಿದೆ. ಮೊದಲ ಬಾರಿಗೆ ಲೈಂಗಿಕ ಕ್ರಿಯೆ ನಡೆಸುವ ಜನರು ಇದರಿಂದ ಹೆಚ್ಚು ಪ್ರಭಾವಿತರಾಗುತ್ತಾರೆ. ಇಂತಹ ಫಿಲಂಗಳನ್ನು ಹೆಚ್ಚು ಹೆಚ್ಚು ನೋಡಿದ ಜನರು ಬೆಡ್ ಮೇಲೂ ನಟಿಸೋಕೆ ಆರಂಭಿಸುತ್ತಾರೆ.
ಇಂದಿನ ಕಾಲದಲ್ಲಿ, ಹೆಚ್ಚಿನ ಜನರು ಬ್ಲೂ ಫಿಲಂಗಳಿಗೆ (blue film) ಅಡಿಕ್ಟ್ ಆಗಿದ್ದಾರೆ,ಯಾಕಂದ್ರೆ ಬ್ಲೂ ಫಿಲಂಗಳನ್ನು ಸುಲಭವಾಗಿ ಇಂಟರ್ನೆಟ್ ನಲ್ಲಿ ನೋಡಬಹುದಾಗಿದೆ. ಆದರೆ ಬ್ಲೂ ಫಿಲಂ ನೋಡೋದರಿಂದ ನಿಮ್ಮ ಲೈಂಗಿಕ ಜೀವನದ ಮೇಲೂ ಪರಿಣಾಮ ಬೀರುತ್ತದೆಯೇ? ಎನ್ನುವ ಪ್ರಶ್ನೆ ಮೂಡದೇ ಇರದು. ಖಂಡಿತಾ ಬೀರುತ್ತೆ. ಪಾರ್ನ್ ಅಥವಾ ಬ್ಲೂ ಫಿಲಂ ನೋಡಿದ ನಂತರ ಜನರು, ಅದೇ ಕಾಲ್ಪನಿಕ ಲೋಕದಲ್ಲಿ ಜೀವಿಸಲು ಆರಂಭಿಸುತ್ತಾರೆ. ಇದರಿಂದ ಜನರು ನಿಜವಾದ ಲೈಂಗಿಕತೆಯನ್ನು ತಪ್ಪಾಗಿ ಗ್ರಹಿಸಲು ಪ್ರಾರಂಭಿಸುತ್ತಾರೆ. ಅಷ್ಟೆ ಅಲ್ಲ ಪಾರ್ನ್ ಸಿನಿಮಾದಲ್ಲಿ ಕಾಣುವುದನ್ನೆ ತಮ್ಮ ಬೆಡ್ ನಲ್ಲೂ ಟ್ರೈ ಮಾಡ್ತಾರೆ. ಇದರಿಂದಾಗಿ ಲೈಂಗಿಕ ಜೀವನದ ಮೇಲೆ ತುಂಬಾ ಪರಿಣಾಮ ಬೀರುತ್ತಿದೆ.
ಲೈಂಗಿಕ ಶಿಕ್ಷಣದ ಕೊರತೆ ಮತ್ತು ಈ ವಿಷಯದ ಬಗ್ಗೆ ಕಡಿಮೆ ಮಾತುಕತೆಯಿಂದಾಗಿ, ಜನರು ಲೈಂಗಿಕ ಅನುಭವವನ್ನು ಅರ್ಥಮಾಡಿಕೊಳ್ಳಲು ಪಾರ್ನ್ ಸಿನಿಮಾ ನೋಡಲು ಆರಂಭಿಸುತ್ತಾರೆ ಮತ್ತು ಅದನ್ನು ಮೊದಲ ಬಾರಿಗೆ ಲೈಂಗಿಕತೆಯಲ್ಲಿ (sex) ಬಳಸುತ್ತಾರೆ, ಆದರೆ ಸತ್ಯವೆಂದರೆ ನಿಜವಾದ ಸ್ಕೆಕ್ಸ್ ಚಲನಚಿತ್ರಗಳಲ್ಲಿ ತೋರಿಸಲಾದ ಸೆಕ್ಸ್ ಗಿಂತ ತುಂಬಾ ಭಿನ್ನವಾಗಿದೆ.
ಹೆಚ್ಚಿನ ಜನರ ಶಿಶ್ನವು ಸಾಮಾನ್ಯವಾಗಿ ತುಂಬಾ ದೊಡ್ಡದಾಗಿರೋದಿಲ್ಲ: ಪ್ರತಿಯೊಬ್ಬ ಮನುಷ್ಯನು ಒಂಬತ್ತು ಇಂಚಿನ ಶಿಶ್ನವನ್ನು ಹೊಂದಿರುವುದಿಲ್ಲ ಅನ್ನೋದು ಸತ್ಯ. ಸಾಮಾನ್ಯವಾಗಿ, ಪುರುಷರ ಶಿಶ್ನದ ಗಾತ್ರವು ಇದಕ್ಕಿಂತ ಚಿಕ್ಕದಾಗಿರುತ್ತದೆ ಮತ್ತು ನಿಮಿರುವಾಗ, ಅದು 5-6 ಇಂಚುಗಳಷ್ಟಿರುತ್ತದೆ. ಪಾರ್ನ್ ಸಿನಿಮಾಗಳಲ್ಲಿ ತೋರಿಸೋದೆಲ್ಲಾ ನಿಜಾ ಅಂತ ಅಂದ್ಕೋಬೇಡಿ. ವಾಸ್ತವ ಬೇರೆ ಇದೆ ಅನ್ನೋದನ್ನು ತಿಳಿಯಿರಿ.
ಹೆಚ್ಚಿನ ಮಹಿಳೆಯರು ಶಿಶ್ನದ ಗಾತ್ರದ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳೋದಿಲ್ಲ: ಗಾತ್ರವು ನಿಜವಾಗಿಯೂ ಡೀಲ್ ಬ್ರೇಕರ್ ಅಲ್ಲ. ನಿಜ ಜೀವನದಲ್ಲಿ, ಮಹಿಳೆಯರು ಶಿಶ್ನದ ಗಾತ್ರದ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳೋದಿಲ್ಲ. ತನ್ನ ಸಂಗಾತಿಯ ಶಿಶ್ನವು 9 ಇಂಚುಗಳಾಗಿರಬೇಕು ಎಂದು ಆಕೆ ಯೋಚಿಸೋದಿಲ್ಲ. ಮಹಿಳೆಯರು ತಮ್ಮ ಸಂಗಾತಿ ಸೆಕ್ಸ್ ಚೆನ್ನಾಗಿ ಮಾಡಬೇಕು, ತಮಗೂ ಫೀಲ್ ನೀಡಬೇಕೆಂದು ಬಯಸುತ್ತಾರೆಯೇ ವಿನಃ ಶಿಶ್ನದ ಬಗ್ಗೆ ತಲೆಕೆಡಿಸೋದೆ ಇಲ್ಲ.
ಹೆಚ್ಚಿನ ಮಹಿಳೆಯರು ಪಾರ್ನ್ ಸ್ಟಾರ್ ಗಳಂತೆ ಕಾಣುವುದಿಲ್ಲ: ಅಡಲ್ಟ್ ಸಿನಿಮಾಗಳಲ್ಲಿ ಇರುವಂತಹ ಮಹಿಳೆಯರು ನಿಜ ಜೀವನದಲ್ಲಿ ಇರೋದಕ್ಕೆ ಸಾಧ್ಯವಿಲ್ಲ. ಯಾವುದೇ ವ್ಯಕ್ತಿ ಪರ್ಫೆಕ್ಟ್ ಆಗಿರೋದಿಲ್ಲ. ಹಾಗಾಗಿ ನಿಮ್ಮ ಸಂಗಾತಿಯೂ ಪಾರ್ನ್ ಸ್ಟಾರ್ ನಂತೆ ಇರುತ್ತಾರೆ ಎಂದು ಭಾವಿಸಿದರೆ ಅದು ತಪ್ಪು. ಹೆಚ್ಚಿನ ಪಾರ್ನ್ ಸ್ಟಾರ್ ಗಳು (porn Star) ಸಿನಿಮಾದಲ್ಲಿ ಚೆನ್ನಾಗಿ ಕಾಣಿಸಲು ಮತ್ತು ಹೆಚ್ಚಿನ ಹಣ ಗಳಿಸಲು ಸರ್ಜರಿ ಮೂಲಕ ತಮ್ಮ ದೇಹವನ್ನು ಬೇಕಾದ ರೀತಿಯಲ್ಲಿ ಬದಲಾಯಿಸುತ್ತಾರೆ. ನಿಜವಾದ ಜೀವನದಲ್ಲಿ ಮಹಿಳೆಯರು ಹಾಗೆ ಇರೋದಿಲ್ಲ.
ಸೆಕ್ಸ್ ಹೆಚ್ಚಾಗಿ ಹೆಚ್ಚು ಭಾವನಾತ್ಮಕವಾಗಿರುತ್ತದೆ: ಸೆಕ್ಸ್ ಅಂದರೆ, ಇಬ್ಬರು ಕಾಮಾತುರದಿಂದ ಸಂಪೂರ್ಣವಾಗಿ ಕಳೆದು ಹೋಗುವುದು ಅಲ್ಲ. ಇದು ತಮ್ಮ ಸಂಬಂಧವನ್ನು ಮುಂದಕ್ಕೆ ಕೊಂಡೊಯ್ಯುತ್ತಿರುವ ಇಬ್ಬರು ವ್ಯಕ್ತಿಗಳ ಭಾವನೆಗಳನ್ನು ಒಳಗೊಂಡಿರುತ್ತದೆ. ಆದರೆ ಪಾರ್ನ್ ಸಿನಿಮಾಗಳಲ್ಲಿ ಭಾವನೆಗಳನ್ನು ಲೈಂಗಿಕ ಸಂಭೋಗದೊಂದಿಗೆ (physical intimacy)ಯಾವುದೇ ಸಂಬಂಧ ಇರೋದಿಲ್ಲ, ಇಲ್ಲಿ ಹೆಚ್ಚಿನ ಕಾಮ, ಸೌಂಡ್ ಗಳನ್ನು ತೋರಿಸೋದೆ ಶೂಟಿಂಗ್ ಮಾಡೋದಕ್ಕೆ ಅಷ್ಟೇ.
ಸಿನಿಮಾಗಳಲ್ಲಿ ಸೆಕ್ಸ್ ಸಮಯದಲ್ಲಿ ಹೆಚ್ಚು ಮಾತನಾಡ್ತಾರೆ: ಬ್ಲೂ ಫಿಲಂಗಳಲ್ಲಿ (blue film) ಹೆಚ್ಚಿನ ಮಹಿಳೆಯರು ಹಾಸಿಗೆಯಲ್ಲಿ ಪುರುಷರಿಗೆ ಏನು ಬೇಕು ಎಂಬುದರ ಬಗ್ಗೆ ಮಾರ್ಗದರ್ಶನ ನೀಡುತ್ತಾರೆ. ಹೆಚ್ಚಿನ ಪುರುಷರು ತಾವು ಏನು ಮಾಡಬೇಕು ಅಥವಾ ಮಾಡಬಾರದು ಎಂದು ಕೇಳುತ್ತಾರೆ. ಆದರೆ ನಿಜ ಜೀವನದಲ್ಲಿ ಸೆಕ್ಸ್ ಸಮಯದಲ್ಲಿ ಹೆಚ್ಚು ಮಾತುಕತೆ ನಡೆಯೋದೆ ಇಲ್ಲ, ಏಕೆಂದರೆ ಆ ಸಮಯದಲ್ಲಿ ದಂಪತಿಗಳು ದೈಹಿಕವಾಗಿ ಮತ್ತು ಭಾವನಾತ್ಮಕವಾಗಿ ಒಂದಾಗುತ್ತಿದ್ದಾರೆ.
ಪಾರ್ನ್ ಸಿನಿಮಾಗಳಲ್ಲಿ ಕ್ಯಾಮೆರಾದಲ್ಲಿ ಉತ್ತಮವಾಗಿ ಕಾಣುವ ಪೊಸಿಷನ್ ಟ್ರೈ ಮಾಡ್ತಾರೆ: ಪಾರ್ನ್ ಸಿನಿಮಾಗಳಲ್ಲಿ ಏನೇನೋ ಭಂಗಿಗಳನ್ನು ನೋಡಿ ನೀವು ಅದನ್ನೆ ಟ್ರೈ ಮಾಡಬೇಕೆಂದು ಬಯಸಿ, ಅದನ್ನು ಮಾಡಿ ಸೋತಿರುವ ಅನುಭವ ಆಗಿರಲೂಬಹುದು. ಈ ಸಂದರ್ಭ ಯಾರನ್ನೂ ದೂರೋದಕ್ಕೆ ಹೋಗಬೇಡಿ. ಯಾಕಂದ್ರೆ ಪಾರ್ನ್ ಸಿನಿಮಾಗಳಲ್ಲಿ ಕ್ಯಾಮೆರಾ ಆಂಗಲ್ ಗೆ ಅನುಸಾರವಾಗಿ, ಚೆನ್ನಾಗಿ ಕಾಣುವ ಭಂಗಿಯನ್ನು ಟ್ರೈ ಮಾಡ್ತಾರೆ. ಅದು ನಿಜ ಜೀವನದಲ್ಲಿ ಸಾಧ್ಯವಿಲ್ಲ.