ಪ್ರೀತ್ಸೋದು ತಪ್ಪಲ್ಲ; ಆದ್ರೆ ಇದನ್ನ ತಿಳ್ಕೊಳ್ದೆ ಬಿದ್ರೆ ಅದು ತಪ್ಪೇ!
ಪ್ರೀತಿ ಅನ್ನೋದೇ ಹಾಗೆ. ಬೀಳೋವರ್ಗೂ ಗೊತ್ತಾಗಲ್ಲ, ಬಿದ್ಮೇಲೆ ಆಚೆ ಬರೋಕಾಗಲ್ಲ ಅನ್ನೋ ಹಾಗಿ ಮಾಡಿ ಬಿಡುತ್ತೆ! ಹುಡುಗಿ ಮೆಸೇಜ್ ಮಾಡಿದ್ರೆ ಸಾಕು ವಾಹ್..! ಮಗಾ ಏನೋ ಇದೇ ಕಣೋ ಅಂತ ಅವ್ನು, ಲೇ ಅವ್ನು ನನ್ನ ಎಲ್ಲಾ ಫೋಟೋ ಲೈಕ್ ಮಾಡ್ತಿದ್ದಾನೆ ಅಂತ ಅವಳು. ಇದು ಬರಿ ಕ್ರಶ್ಶಾ? ಇನ್‌ಫ್ಯಾಚುಯೇಶನ್ನಾ? ಅಥವಾ ನಿಜ್ವಾಗ್ಲೂ ಲವ್ವಾ? ಲವ್ವಲ್ಲಿ ಬೀಳೋ ಮೊದಲು ಇದನ್ನ ನೀವು ಮೊದಲು ಓದಲೇಬೇಕು.
ಪರಸ್ಪರ ಪ್ರೀತಿ, ಗೌರವ, ಪ್ರಾಮಾಣಿಕತೆ, ಸ್ನೇಹ, ಸಲುಗೆ, ಕಾಳಜಿ ಬಂಧವನ್ನು ಬಿಗಿಯಾಗಿ ಅಪ್ಯಾಯಮಾನವಾಗಿಸಬಲ್ಲದು.
ಪರಸ್ಪರ ಗೌರವಿಸುವುದು.
ಒಬ್ಬರನ್ನು ಉಸಿರುಗಟ್ಟಿಸುವ ಬಂಧ ಬೇಡ
ಎಲ್ಲವೂ ನನಗೆ ಗೊತ್ತು ಎಲ್ಲವನ್ನೂ ನಾನೇ ಮಾಡುವುದು ಎಂಬ ಅಹಂ ಬೇಡ. ಪರಸ್ಪರ ಹಂಚಿಕೊಳ್ಳಿ.
ಮೊದಲು ನಿಮ್ಮನ್ನು ನೀವು ಪ್ರೀತಿಸಿದರೆ ಮಾತ್ರ ನೀವು ಇನ್ನೊಬ್ಬರನ್ನು ಯಾವುದೇ ಕಲ್ಮಶವಿಲ್ಲದೆ ಪ್ರೀತಿಸಲು ಸಾಧ್ಯವಾಗುತ್ತದೆ.
ಹಣಕಾಸಿನ ವಿಚಾರವನ್ನು ಹಂಚಿಕೊಳ್ಳಿ. ಗೌಪ್ಯತೆ ಮಾಡುವುದು ಬೇಡ. ಇದರಿಂದ ಅನುಮಾನಗಳಿಗೆ ಕಾರಣವಾಗುತ್ತದೆ.
ವೈವಾಹಿಕ ಜೀವನಕ್ಕೂ- ವೃತ್ತಿ ಜೀವನಕ್ಕೂ ವ್ಯತ್ಯಾಸವಿದೆ. ನಿಮಗೆ ಯಾವುದು ಮುಖ್ಯ ವೆಂದು ತಿಳಿದುಕೊಳ್ಳಿ.
ತಪ್ಪು ಯಾರದೇ ಇರಲಿ ಮೊದಲು ನೀವೇ ಕ್ಷಮೆ ಕೇಳಿ, ಎಲ್ಲವೂ ಶಾಂತವಾದ ಬಳಿಕ ಇಬ್ಬರೂ ಮಾತನಾಡಿ ಬಗೆಹರಿಸಿಕೊಳ್ಳಬಹುದು.
ಏನೇ ಇದ್ದರೂ ನೇರವಾಗಿ ಮಾತನಾಡಿ. ವ್ಯಂಗ್ಯವಾಗಿ ಮಾತನಾಡುವುದರಿಂದ ಮನಸ್ಸಿನಲ್ಲಿ ದ್ವೇಷ ಬೆಳೆಯುತ್ತದೆ.
ಪರ್ಸನಲ್ ಲೈಫ್‌ಗೆ ಪ್ರೈವಸಿ ಕೊಡಿ. ಮೊಬೈಲ್ ಚೆಕ್ ಮಾಡುವುದು, ಆಗಾಗ ಎಲ್ಲಿದ್ದೀರಾ ಎಂದು ಅನುಮಾನದಲ್ಲಿ ಕೇಳುವುದು ಬಿಡಬೇಕು.