ದಾಂಪತ್ಯ ಸುಖಕ್ಕೆ ಪ್ರೀತಿಯಲ್ಲಿ ಬೀಳ್ಬೇಡಿ, ಪ್ರೀತಿಯಲ್ಲಿ ಎದ್ದೇಳಿ....
ಒಂದು ಸಂಬಂಧ ಶಾಶ್ವತವಾಗಿ ಸಂತೋಷವಾಗರಬೇಕೆಂದರೆ ಪಾರದರ್ಶಕತೆ ಇರಬೇಕು. ಒಂದು ಸುಳ್ಹೇಳಿ, ಅದರಿಂದ ತಪ್ಪಿಸಿಕೊಳ್ಳಲು ಮತ್ತೊಂದು ಸುಳ್ಳು. ಇದರಿಂದ ಯಾವುದೇ ಸಮಸ್ಯೆಗಳಿಂದಲೂ ಮುಕ್ತರಾಗಲು ಸಾಧ್ಯವಿಲ್ಲ. ಬಾಂಧವ್ಯ ಗಟ್ಟಿಯಾಗಬೇಕೆಂದರೆ ಕೆಲವು ತ್ಯಾಗ, ಬದ್ಧತೆ ಅನಿವಾರ್ಯ. ಸುಖ ದಾಂಪತ್ಯಕ್ಕೆ ನೀವು ಕೊಡ್ತೇವೆ ಟಿಪ್ಸ್...
ಮದುವೆ ಎನ್ನೋದು ಲಾಟರಿ ಇದ್ದ ಹಾಗೆ. ಆದರೆ, ಬದ್ಧತೆ ಇದ್ದರೆ ಜಾಕ್‌ಪಾಟ್ ಹೊಡೆಯೋದು ಗ್ಯಾರಂಟಿ.
ಮದುವೆ ಆದ ಮೇಲೂ ಎಕ್ಸ್ ಜೊತೆ ಸಂಬಂಧ ಮುಂದುವರಿಸಿದರೆ ನಿಮ್ಮ ತಲೆ ಮೇಲೆ ನೀವೇ ಚಪ್ಪಡಿ ಎಳೆದುಕೊಂಡ ಹಾಗೆ.
ದಾಂಪತ್ಯವೆಂದರೆ ಜಗಳವೂ ಕಾಮನ್. ಹಾಗಂತ ಅದನ್ನೇ ರಬ್ಬರ್‌ನಂತೆ ಎಳೆಯುತ್ತಿರಬೇಡಿ.
ಒಂದು ಸಂಬಂಧಕ್ಕೆ ಕಮಿಟ್ ಆದ ಮೇಲೆ ಮತ್ತೊಬ್ಬರೊಂದಿಗೆ ಫ್ಲರ್ಟ್ ಏಕೆ ಹೇಳಿ.
ಪರ್ಪಸ್ ಎಂಬ ನಿತ್ಯಾಗ್ನಿ ದಾಂಪತ್ಯದಲ್ಲಿ ಉರಿಯುತ್ತಲೇ ಇರಬೇಕು. ಆಗಲೇ ಬದುಕಿಗೊಂದು ಅರ್ಥ.
ಮನ ಬಿಚ್ಚಿ ಮಾತನಾಡಿಕೊಳ್ಳಿ. ಅಲ್ಲಿ ಸುಳ್ಳು, ವಂಚನೆ, ಸುಳ್ಳು ಹೊಗಳಿಕೆಗೆ ಇರಲಿ ಬ್ರೇಕ್.
ಸದಾ ತಮ್ಮ ಸಂಗಾತಿಯ ಕಾಲೆಳೆಯಲು ನೆಪ ಹುಡುಕಬೇಡಿ.
ಸೆಕ್ಸ್ ಲೈಫಿನಲ್ಲಿ ಮುಕ್ತತೆ ಇರಲಿ. ಸಂಕೋಚಕ್ಕೆ ಹೇಳಿ ಗುಡ್ ಬೈ
ತಪ್ಪಾಗೋದು ಸಹಜ. ಅದನ್ನು ಒಪ್ಪಿಕೊಳ್ಳಿ. ಮನಸ್ಸು ನಿರಾಳವಾಗುತ್ತದೆ.
ಓಶೋ ಹೇಳಿದಂತೆ ದಾಂಪತ್ಯದ ಸುಖ ಬೇಕೆಂದರೆ ಪ್ರೀತಿಯಲ್ಲಿ ಬೀಳಬಾರದು. ಪ್ರೀತಿಯಲ್ಲಿ ಏಳಬೇಕು.