MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Jobs
  • Private Jobs
  • ಯುಕೆಯಲ್ಲಿ ನರ್ಸಿಂಗ್ ಉದ್ಯೋಗ ನೇಮಕಾತಿ ಆರಂಭ, 40 ಲಕ್ಷ ರೂ ಸ್ಯಾಲರಿ!

ಯುಕೆಯಲ್ಲಿ ನರ್ಸಿಂಗ್ ಉದ್ಯೋಗ ನೇಮಕಾತಿ ಆರಂಭ, 40 ಲಕ್ಷ ರೂ ಸ್ಯಾಲರಿ!

ಕೈತುಂಬ ಸಂಬಳದ ಕೆಲಸ ಹುಡುಕುತ್ತಿದ್ದೀರಾ? ವಿದೇಶದಲ್ಲಿ ಕೆಲಸ ಮಾಡಲು ಆಸಕ್ತಿ ಇದ್ದರೆ ಉತ್ತಮ ಅವಕಾಶ ಒದಗಿ ಬಂದಿದೆ. ಯುಕೆಯಲ್ಲಿ ನರ್ಸಿಂಗ್ ನೇಮಕಾತಿ ಆರಂಭಗೊಂಡಿದೆ. 40 ಲಕ್ಷ ರೂಪಾಯಿ ವೇತನ ಸಿಗಲಿದೆ.  

2 Min read
Author : Chethan Kumar
Published : Oct 19 2024, 05:08 PM IST
Share this Photo Gallery
  • FB
  • TW
  • Linkdin
  • Whatsapp
15
UKಯಲ್ಲಿ ಜಾಬ್

UKಯಲ್ಲಿ ಜಾಬ್

ನರ್ಸ್‌ಗಳಿಗೆ ಸೂಪರ್ ಜಾಬ್ ಆಫರ್.  ನರ್ಸಿಂಗ್‌ ಪೂರೈಸಿದ ಅಭ್ಯರ್ಥಿಗಳಿಗೆ ಉತ್ತಮ ಅವಕಾಶ ಒದಗಿ ಬಂದಿದೆ. ಕೈತುಂಬ ಸಂಬಳ, ಇತರ ಸೌಲಭ್ಯಗಳ ನರ್ಸಿಂಗ್ ಜಾಬ್ ಅರಸಿ ಬಂದಿದೆ. ಯುನೈಟೆಡ್ ಕಿಂಗ್‌ಡಮ್‌ನಲ್ಲಿ ನರ್ಸಿಂಗ್ ಕೆಲಸಕ್ಕೆ ನೇಮಕಾತಿ ನಡೆಯೆುತ್ತಿದೆ. 40 ಲಕ್ಷ ರೂಪಾಯಿವರೆಗೆ ಸಂಬಳ. ನೇಮಕಾತಿಯಲ್ಲಿ ಆಯ್ಕೆಯಾದ ಅಭ್ಯರ್ಥಿಳ IELTS/OET, CBT, NMC ಅರ್ಜಿ ಫೀಸ್, ವೀಸಾ, ಫ್ಲೈಟ್ ಟಿಕೆಟ್‌ಗಳಿಗೆ ರಿಫಂಡ್ ಕೂಡ ಇದೆ. ವೇಲ್ಸ್‌ನಲ್ಲಿ ನರ್ಸ್ ಜಾಬ್‌ಗೆ ನೋರ್ಕಾ ರೂಟ್ಸ್ ನೇಮಕಾತಿ ಮಾಡುತ್ತಿದೆ.
 

25
ನರ್ಸ್ ಕ್ವಾಲಿಫಿಕೇಶನ್

ನರ್ಸ್ ಕ್ವಾಲಿಫಿಕೇಶನ್

ಕ್ವಾಲಿಫಿಕೇಶನ್ ಏನು?

ನರ್ಸಿಂಗ್‌ನಲ್ಲಿ ಡಿಗ್ರಿ ಅಥವಾ ಡಿಪ್ಲೊಮಾ ಮಾಡಿರೋರು ಅರ್ಜಿ ಹಾಕಬಹುದು. ಕನಿಷ್ಠ ಆರು ತಿಂಗಳು ಕೆಲಸದ ಅನುಭವ ಇರಬೇಕು. IELTS 7 (ರೈಟಿಂಗ್‌ನಲ್ಲಿ 6.5) ಅಥವಾ OET B (ರೈಟಿಂಗ್‌ನಲ್ಲಿ C+) ಬೇಕು. NMC ರಿಜಿಸ್ಟ್ರೇಷನ್‌ಗೆ ಅರ್ಹತೆ ಹೊಂದಿರಬೇಕು. IELTS/OET ಸರ್ಟಿಫಿಕೇಟ್ 2025 ನವೆಂಬರ್ 15ರವರೆಗೆ ವ್ಯಾಲಿಡ್ ಇರಬೇಕು.

35
ಅರ್ಜಿ ಹಾಕೋದು ಹೇಗೆ?

ಅರ್ಜಿ ಹಾಕೋದು ಹೇಗೆ?

ಅರ್ಜಿ ಹಾಕೋದು ಹೇಗೆ?

www.norkaroots.org ಅಥವಾ www.nifl.norkaroots.org ವೆಬ್‌ಸೈಟ್ ನೋಡಿ. CV ಮತ್ತು IELTS/OET ಮಾರ್ಕ್ಸ್ ಕಾರ್ಡ್ ಜೊತೆ ಅಕ್ಟೋಬರ್ 25ರೊಳಗೆ ಅರ್ಜಿ ಹಾಕಿ. ಆಯ್ಕೆಯಾದವರನ್ನ 2025 ಮಾರ್ಚ್ ನಂತರ ನೇಮಕ ಮಾಡಲಾಗುತ್ತದೆ. ಅರ್ಜಿ ಹಾಕುವಾಗ ಸೂಕ್ತ ದಾಖಲೆಗಳನ್ನು ಲಗತ್ತಿಸಬೇಕು. ವಿವರಗಳನ್ನು ಭರ್ತಿ ಮಾಡಬೇಕು. 
 

45

IELTS/OET, CBT, NMC ಅರ್ಜಿ ಫೀಸ್, ವೀಸಾ, ಫ್ಲೈಟ್ ಟಿಕೆಟ್‌ಗಳಿಗೆ ರಿಫಂಡ್ ಸೌಲಭ್ಯ ಇದೆ. ಏರ್‌ಪೋರ್ಟ್‌ನಿಂದ ಫ್ರೀ ಟ್ರಾವೆಲ್. ಒಂದು ತಿಂಗಳು ಫ್ರೀ ವಸತಿ. OSCE ಪರೀಕ್ಷೆ ಖರ್ಚು ಕೂಡ ಯುಕೆ ನೀಡಲಿದೆ. ಉತ್ತಮ ಪಾವತಿ, ಇತರ ಸೌಲಭ್ಯ, ಕನಿಷ್ಠ ಗಂಟೆ ಕೆಲಸ ಸೇರಿದಂತೆ ಉತ್ತಮ ಕೆಲಸದ ವಾತಾವರಣ ಕೂಡ ಇರಲಿದೆ.
 

55
ರೂಪಾಯಿಗಳಲ್ಲಿ ಸಂಬಳ

ರೂಪಾಯಿಗಳಲ್ಲಿ ಸಂಬಳ

NMC ರಿಜಿಸ್ಟ್ರೇಷನ್ ಮೊದಲು £26,928 (₹30 ಲಕ್ಷ) ಸಂಬಳ. NMC ರಿಜಿಸ್ಟ್ರೇಷನ್ ಆದ್ಮೇಲೆ £30,420 ರಿಂದ £37,030 ವರೆಗೆ (₹40 ಲಕ್ಷ) ಸಂಬಳ. 5 ವರ್ಷಗಳಿಗೆ ₹5.74 ಲಕ್ಷ ಫೈನಾನ್ಶಿಯಲ್ ಅಸಿಸ್ಟೆನ್ಸ್ ಕೂಡ ಇದೆ. ಹೆಚ್ಚಿನ ಮಾಹಿತಿಗೆ ನೋರ್ಕಾ ಗ್ಲೋಬಲ್ ಕಾಲ್ ಸೆಂಟರ್‌ಗೆ 1800 425 3939 ಅಥವಾ +91-8802 012 345 ನಂಬರ್‌ಗೆ ಕಾಲ್ ಮಾಡಿ ಮಾಹಿತಿ ಪಡೆಯಬಹುದು. ಇದೇ ವೇಳೆ ನಕಲಿ ಎಜನ್ಸಿಗಳ ಕರೆ, ವೆಬ್‌ಸೈಟ್ ಮೂಲಕ ಅರ್ಜಿ ಹಾಕಿ ಮೋಸ ಹೋಗಬೇಡಿ. ಅರ್ಹತೆ ಆಧಾರದಲ್ಲಿ ನಡೆಯುವ ನೇಮಕಾತಿ ಇದು. ಹೀಗಾಗಿ ಹಣ ಕಟ್ಟಿ ಮೋಸ ಹೋಗಬೇಡಿ.
 

About the Author

CK
Chethan Kumar
ಎಲೆಕ್ಟ್ರಾನಿಕ್, ಡಿಜಿಟಲ್ ಮಾಧ್ಯಮ ಸೇರಿ ಪತ್ರಿಕೋದ್ಯಮದಲ್ಲಿ 13 ವರ್ಷಗಳ ಅನುಭವ. ಊರು ಧರ್ಮಸ್ಥಳ. ಪತ್ರಿಕೋದ್ಯಮ ಸ್ನಾತಕೋತ್ತರ ಪದವಿ ಪಡೆದಿದ್ದು ಉಜಿರೆ ಎಸ್‌ಡಿಎಂನಲ್ಲಿ. ಟಿವಿ9, ಸ್ಟಾರ್ ಸ್ಪೋರ್ಟ್ಸ್‌ನಲ್ಲಿ ಕಾರ್ಯ ನಿರ್ವಹಿಸಿದ ಅನುಭವವಿದೆ. ರಾಷ್ಟ್ರೀಯ, ಅಂತಾರಾಷ್ಟ್ರೀಯ, ಜಿಯೋ ಪಾಲಿಟಿಕ್ಸ್, ಆಟೋ, ಟೆಕ್, ಸ್ಪೋರ್ಟ್ಸ್..ಏನೇ ಕೊಟ್ಟರೂ ಬರೆಯೋದು ನನ್ನ ಶಕ್ತಿ.
ಉದ್ಯೋಗಗಳು
ಯುನೈಟೆಡ್ ಕಿಂಗ್‌ಡಮ್

Latest Videos
Recommended Stories
Recommended image1
ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್‌ನಲ್ಲಿ ಭಾರೀ ನೇಮಕಾತಿ, ಬಿಇ-ಬಿಟೆಕ್ ಪದವೀಧರರ ಭವಿಷ್ಯಕ್ಕೆ ಹೊಸ ದಾರಿ!
Recommended image2
ನಿಮ್ಹಾನ್ಸ್ ಗ್ರೂಪ್ ಬಿ ಮತ್ತು ಸಿ ಹುದ್ದೆಗಳ ನೇಮಕಾತಿ 2026, ನಿಮ್ಮ ಭವಿಷ್ಯ ಬದಲಿಸುವ ಅವಕಾಶ
Recommended image3
ವಿಪ್ರೋ ಉದ್ಯೋಗಿಗಳಿಗೆ ಸ್ಯಾಲರಿ ಹೈಕ್ ಭಾಗ್ಯ; ಮಾರ್ಚ್ 1 ರಿಂದ ಜಾರಿಗೆ ಬರಲಿದೆ ವೇತನ ಹೆಚ್ಚಳ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved