MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • News
  • Politics
  • ಟಿಪ್ಪು ರಾಜಕೀಯ ಕಾರಣಕ್ಕೆ 10 ದೇಗುಲ ಕೆಡವಿರಬಹುದು, 150 ದೇವಾಲಯ ಜೀರ್ಣೋದ್ಧಾರ ಯಾಕೆ ಹೇಳಲ್ಲ?- ಪ್ರಿಯಾಂಕ್ ಖರ್ಗೆ!

ಟಿಪ್ಪು ರಾಜಕೀಯ ಕಾರಣಕ್ಕೆ 10 ದೇಗುಲ ಕೆಡವಿರಬಹುದು, 150 ದೇವಾಲಯ ಜೀರ್ಣೋದ್ಧಾರ ಯಾಕೆ ಹೇಳಲ್ಲ?- ಪ್ರಿಯಾಂಕ್ ಖರ್ಗೆ!

ಟಿಪ್ಪು ಸುಲ್ತಾನರನ್ನು 'ಮೇಕ್ ಇನ್ ಮೈಸೂರು' ಹರಿಕಾರ. ರಾಜಕೀಯ ಲಾಭಕ್ಕಾಗಿ ಇತಿಹಾಸ ತಿರುಚಲಾಗುತ್ತಿದೆ. ಟಿಪ್ಪು 150 ದೇವಾಲಯಗಳನ್ನು ಜೀರ್ಣೋದ್ಧಾರ ಮಾಡಿದ್ದನ್ನು ಮರೆಮಾಚಿ, ಕೇವಲ ದೇವಸ್ಥಾನ ಧ್ವಂಸವನ್ನು ಮಾತ್ರ ಹೇಳುತ್ತಾರೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಆಕ್ರೋಶ ಹೊರಹಾಕಿದರು.

3 Min read
Author : Sathish Kumar KH
Published : Mar 29 2026, 05:58 PM IST
Share this Photo Gallery
  • FB
  • TW
  • Linkdin
  • Whatsapp
15
ಕರಾವಳಿ ಚರಿತ್ರೆಯಲ್ಲಿ ಹೈದರ್ ಅಲಿ ಮತ್ತು ಟಿಪ್ಪು ಸುಲ್ತಾನ್
Image Credit : X

ಕರಾವಳಿ ಚರಿತ್ರೆಯಲ್ಲಿ ಹೈದರ್ ಅಲಿ ಮತ್ತು ಟಿಪ್ಪು ಸುಲ್ತಾನ್

ಬೆಂಗಳೂರು (ಮಾ.29): ಪ್ರತಿಯೊಬ್ಬ ರಾಜನ ಇತಿಹಾಸ ನೋಡಿದಾಗ ಅಲ್ಲಿ ಹೀರೊ ಮತ್ತು ವಿಲನ್ ಇಬ್ಬರೂ ಕಾಣಿಸುತ್ತಾರೆ. ಜಗತ್ತಿಗೆ ರಾಕೆಟ್ ಸೈನ್ಸ್ ಪರಿಚಯಿಸಿದ್ದೇ ಟಿಪ್ಪು ಸುಲ್ತಾನ್. ಇಂದು 'ಮೇಕ್ ಇನ್ ಇಂಡಿಯಾ' ಎನ್ನುತ್ತಾರೆ, ಆದರೆ ಅಂದೇ ಟಿಪ್ಪು 'ಮೇಕ್ ಇನ್ ಮೈಸೂರು' ಮಾಡಲು ಮುಂದಾಗಿದ್ದರು. ಟಿಪ್ಪು 150 ದೇವಾಲಯಗಳನ್ನು ಜೀರ್ಣೋದ್ದಾರ ಮಾಡಿದ್ದನ್ನು ಯಾರೂ ಹೇಳುವುದಿಲ್ಲ. ರಾಜಕೀಯ ಕಾರಣಕ್ಕೆ ಹತ್ತು ದೇವಸ್ಥಾನ ದ್ವಂಸ ಮಾಡಿರಬಹುದು. ಅದನ್ನೇ ದೊಡ್ಡದಾಗಿ ಹೇಳುತ್ತಾರೆ ಎಂದು ಬಿಜೆಪಿ ಮತ್ತು ಆರ್‌ಎಸ್‌ಎಸ್ ವಿರುದ್ಧ ಸಚಿವ ಪ್ರಿಯಾಂಕ್ ಖರ್ಗೆ ಆಕ್ರೋಶ ಹೊರಹಾಕಿದರು.

ಬೆಂಗಳೂರಿನಲ್ಲಿ ನಡೆದ ನವೀನ್ ಸೂರಿಂಜೆಯವರ 'ಕರಾವಳಿ ಚರಿತ್ರೆಯಲ್ಲಿ ಹೈದರ್ ಅಲಿ ಮತ್ತು ಟಿಪ್ಪು ಸುಲ್ತಾನ್' ಪುಸ್ತಕ ಬಿಡುಗಡೆ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಟಿಪ್ಪು ಸುಲ್ತಾನ್, ವಿಜಯನಗರ ಸಾಮ್ರಾಜ್ಯ ಮತ್ತು ಸಂಘ ಪರಿವಾರದ ಸಿದ್ಧಾಂತಗಳ ಮೇಲೆ ಸರಣಿ ಪ್ರಶ್ನೆಗಳನ್ನು ಎಸೆದಿದ್ದಾರೆ. ಇತಿಹಾಸವೆಂದರೆ ಕೇವಲ ರಾಜಕೀಯ ಲಾಭಕ್ಕಾಗಿ ಬಳಸುವ ಸಾಧನವಲ್ಲ, ಅದು ಸತ್ಯಗಳ ದರ್ಶನ ಮಾಡಿಸುವ ಕನ್ನಡಿ. ಆದರೆ ಇಂದು ಇತಿಹಾಸವನ್ನು ತಮಗೆ ಬೇಕಾದಂತೆ ತಿರುಚಲಾಗುತ್ತಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

25
ರಾಜರು, ಮೈತ್ರಿ ಮತ್ತು ರಕ್ತಸಂಬಂಧದ ಇತಿಹಾಸ
Image Credit : X

ರಾಜರು, ಮೈತ್ರಿ ಮತ್ತು ರಕ್ತಸಂಬಂಧದ ಇತಿಹಾಸ

'ಪ್ರತಿಯೊಬ್ಬ ರಾಜನ ಇತಿಹಾಸ ನೋಡಿದಾಗ ಅಲ್ಲಿ ಹೀರೊ ಮತ್ತು ವಿಲನ್ ಇಬ್ಬರೂ ಕಾಣಿಸುತ್ತಾರೆ. ರಾಜರ ಮೂಲ ಉದ್ದೇಶ ಸಾಮ್ರಾಜ್ಯ ವಿಸ್ತರಣೆ ಮಾತ್ರ ಆಗಿರುತ್ತಿತ್ತು. ಅದಕ್ಕಾಗಿ ಯುದ್ಧ ಮಾಡಬೇಕಿತ್ತು ಅಥವಾ ಮೈತ್ರಿ ಮಾಡಿಕೊಳ್ಳಬೇಕಿತ್ತು. ಬಿಜೆಪಿಯವರು ಇತಿಹಾಸ ಓದಲ್ಲ. ಇವರು ಯಾವ ರಾಜರ ಬಗ್ಗೆ ಹೆಮ್ಮೆಯಿಂದ ಹೇಳುತ್ತಾರೋ, ಅವರ ತಂದೆ ಅಥವಾ ತಾಯಂದಿರು ಮುಸಲ್ಮಾನರಾಗಿದ್ದರು. ಮೊಗಲರ ಆಸ್ಥಾನದಲ್ಲಿ ರಜಪೂತ ರಾಣಿಯರು ಇರಲಿಲ್ಲವೇ? ವಿಜಯನಗರ ಸಾಮ್ರಾಜ್ಯದ ಕಾಲದಲ್ಲೂ ಮೈತ್ರಿಗಾಗಿ ಹೆಣ್ಣು ಕೊಟ್ಟು ತರುವ ಪದ್ಧತಿ ಇರಲಿಲ್ಲವೇ?' ಎಂದು ಪ್ರಶ್ನಿಸಿದರು.

Related Articles

Related image1
ಕೆಪಿಎಸ್‌ಸಿ ಅಕ್ರಮಗಳಲ್ಲಿ ಮುಳುಗಿದೆ, ಸಂಸ್ಥೆ ಮುಚ್ಚಿ: ಸಚಿವ ಪ್ರಿಯಾಂಕ್‌ ಖರ್ಗೆ ಕಿಡಿ
Related image2
ಇತಿಹಾಸ ತಿರುಚುವುದು ಈಗ 1000 ಕೋಟಿ ಬ್ಯುಸಿನೆಸ್; RSSಗೆ 100 ವರ್ಷದಲ್ಲಿ ಹೇಳಲು 10 ಸಾಧನೆ ಇಲ್ಲ: ಪ್ರಿಯಾಂಕ್ ಖರ್ಗೆ!
35
ಟಿಪ್ಪು ಸುಲ್ತಾನ್ ಎಂಬ 'ಮೇಕ್ ಇನ್ ಮೈಸೂರು' ಹರಿಕಾರ
Image Credit : X

ಟಿಪ್ಪು ಸುಲ್ತಾನ್ ಎಂಬ 'ಮೇಕ್ ಇನ್ ಮೈಸೂರು' ಹರಿಕಾರ

'ಟಿಪ್ಪು ಜಗತ್ತಿಗೆ ರಾಕೆಟ್ ಸೈನ್ಸ್ ಪರಿಚಯಿಸಿದ್ದೇ ಟಿಪ್ಪು ಸುಲ್ತಾನ್. ಇಂದು ಕೆಲವರು 'ಮೇಕ್ ಇನ್ ಇಂಡಿಯಾ' ಎನ್ನುತ್ತಾರೆ, ಆದರೆ ಅಂದೇ ಟಿಪ್ಪು 'ಮೇಕ್ ಇನ್ ಮೈಸೂರು' ಮಾಡಲು ಮುಂದಾಗಿದ್ದರು. ಬೆಂಗಳೂರಿನ ಎಸ್ ಪಿ ರೋಡ್ ಅನ್ನು 'ತಾರಾ ಮಂಡಲ ಪೇಟೆ' ಎಂದು ಕರೆಯಲಾಗುತ್ತಿತ್ತು, ಏಕೆಂದರೆ ಅಲ್ಲಿ ಗನ್ ಪೌಡರ್ ಮತ್ತು ರಾಕೆಟ್ ಸಂಶೋಧನೆಗಳು ನಡೆಯುತ್ತಿದ್ದವು. 

ಟಿಪ್ಪು ಬ್ರಿಟಿಷರ ವಿರುದ್ಧ 4 ಆಂಗ್ಲೋ ಮೈಸೂರು ಯುದ್ಧಗಳನ್ನು ಮಾಡಿದ್ದು ಸುಳ್ಳೇ? ಬ್ರಿಟಿಷರ ವಿರುದ್ಧ ಹೋರಾಡಿದವರು ಸ್ವಾತಂತ್ರ್ಯ ಹೋರಾಟಗಾರರಲ್ಲ ಎನ್ನುವುದು ಆರ್ ಎಸ್ ಎಸ್ ವಾದ. ಹಾಗಿದ್ದರೆ ಆರ್ ಎಸ್ ಎಸ್ ಬ್ರಿಟಿಷರ ವಿರುದ್ಧ ಹೋರಾಡಿತೇ?' ಎಂದು ಕಿಡಿಕಾರಿದರು.

45
ಲಾಲ್ ಬಾಗ್ ಮತ್ತು ಕೇಸರಿಯ ವಿರೋಧಾಭಾಸ
Image Credit : X

ಲಾಲ್ ಬಾಗ್ ಮತ್ತು ಕೇಸರಿಯ ವಿರೋಧಾಭಾಸ

ಬೆಂಗಳೂರಿನ ಹೆಮ್ಮೆಯ ಲಾಲ್ ಬಾಗ್ ಕಟ್ಟಿಸಿದ್ದು ಟಿಪ್ಪು ಸುಲ್ತಾನ್. ಆದರೆ ಆ ಭಾಗದ ಈಗಿನ ಸಂಸದರು ಟಿಪ್ಪು ವಿರೋಧಿ. ಹಾಗಾದರೆ ನೀವು ಟಿಪ್ಪು ಕಟ್ಟಿಸಿದ ಲಾಲ್ ಬಾಗ್ ಅನ್ನು ಸುಡುತ್ತೀರಾ? ಅದು ಸಾಧ್ಯವೇ? ಎಂದು ಪ್ರಶ್ನಿಸಿದರು. ನಮಗೆ ಬಳಕೆಗೆ ಬರುವ 90 ಪ್ರತಿಶತ ಕೇಸರಿ (Saffron) ಇಸ್ಲಾಮಿಕ್ ದೇಶಗಳಿಂದ ಬರುತ್ತದೆ. ನಮ್ಮ ಗ್ಯಾಸ್ (LPG) ಅರಬ್ ದೇಶಗಳಿಂದ ಬರುತ್ತದೆ. ಹಾಗಾದರೆ ನಾಳೆಯಿಂದ ನೀವು ತಿಲಕ ಇಡುವುದನ್ನು ನಿಲ್ಲಿಸುತ್ತೀರಾ ಅಥವಾ ಗ್ಯಾಸ್ ಬಳಸುವುದನ್ನು ನಿಲ್ಲಿಸುತ್ತೀರಾ? ಅರಬ್ ದೇಶಗಳಿಂದ ಬರುವ ವಸ್ತುಗಳನ್ನು ನಿಲ್ಲಿಸಲು ಸಾಧ್ಯವೇ? ಎಂದು ಕೇಳಿದರು.

ವರ್ತಮಾನದಲ್ಲಿ ಉತ್ಕೃಷ್ಟ ಚಿಂತನೆಗಳನ್ನು ಹೊಂದಿಲ್ಲದವರು ತಿರುಚಿದ ಇತಿಹಾಸವನ್ನು ಹಿಡಿದು ಜೋತು ಬಿದ್ದು ನೇತಾಡುತ್ತಿರುತ್ತಾರೆ.
ಇತಿಹಾಸದ ತಪ್ಪು ವ್ಯಾಖ್ಯಾನದಿಂದ ವರ್ತಮಾನದಲ್ಲಿ ಸಂಘರ್ಷ ಸೃಷ್ಟಿಸುವುದು ಮತ್ತು ವರ್ತಮಾನದ ಸಂಘರ್ಷದಿಂದ ಭವಿಷ್ಯದ ರಾಜಕೀಯ ಭದ್ರತೆ ಕಂಡುಕೊಳ್ಳುವುದು ಅವರ ಮೂಲ ಅಜೆಂಡಾ.

ವಾಟ್ಸಾಪ್ ನಲ್ಲಿನ ಮುಖವಿಲ್ಲದ… pic.twitter.com/TGOFAAtPDl

— Priyank Kharge / ಪ್ರಿಯಾಂಕ್ ಖರ್ಗೆ (@PriyankKharge) March 29, 2026

55
ನಿಜವಾದ ಇತಿಹಾಸ ಇರುವುದು ಪಾಲಿ ಮತ್ತು ಪ್ರಾಕೃತದಲ್ಲಿ
Image Credit : X

ನಿಜವಾದ ಇತಿಹಾಸ ಇರುವುದು ಪಾಲಿ ಮತ್ತು ಪ್ರಾಕೃತದಲ್ಲಿ

'ಇತಿಹಾಸವನ್ನು ಕೆದಕಲು ಹೋದರೆ ಎಲ್ಲರೂ ಸಿಕ್ಕಿಹಾಕಿಕೊಳ್ಳುತ್ತಾರೆ. ಯಾವುದೇ ಮಸೀದಿ ಕೆಡವಿದರೂ ದೇವಸ್ಥಾನ ಸಿಗಬಹುದು, ದೇವಸ್ಥಾನ ಕೆಡವಿದರೆ ಸ್ತೂಪ ಸಿಗಬಹುದು. ಇನ್ನು ಸ್ತೂಪಗಳನ್ನು ಕೆಡವಿದರೆ ಮತ್ತೇನೋ ಸಿಗಬಹುದು. ನಮ್ಮ ನಿಜವಾದ ಇತಿಹಾಸ ಇರುವುದು ಪಾಲಿ ಮತ್ತು ಪ್ರಾಕೃತ ಭಾಷೆಗಳಲ್ಲಿ ಹೊರತು ಸಂಸ್ಕೃತದಲ್ಲಿ ಅಲ್ಲ ಎಂದು ಅಶೋಕ ಚಕ್ರವರ್ತಿಯ ಶಾಸನಗಳ ಉದಾಹರಣೆ ನೀಡಿದರು. ಇದೇ ಉದ್ದೇಶಕ್ಕೆ ಮಲ್ಲಿಕಾರ್ಜುನ ಖರ್ಗೆ ಅವರು ಪಾಲಿ ಯುನಿವರ್ಸಿಟಿ ಸ್ಥಾಪಿಸಿದಾಗ ಅದನ್ನು 'ಖರ್ಗೆಯವರ ಖಾಸಗಿ ಯುನಿವರ್ಸಿಟಿ' ಎಂದು ಬಿಂಬಿಸಿದ ವಿರೋಧಿಗಳ ಬಗ್ಗೆ ಖಂಡಿಸಿದರು.

ಕೊನೆಯದಾಗಿ, ಟಿಪ್ಪು 150 ದೇವಾಲಯಗಳನ್ನು ಜೀರ್ಣೋದ್ದಾರ ಮಾಡಿದ್ದನ್ನು ಯಾರೂ ಹೇಳುವುದಿಲ್ಲ. ರಾಜಕೀಯ ಕಾರಣಕ್ಕೆ ಹತ್ತು ದೇವಸ್ಥಾನ ದ್ವಂಸ ಮಾಡಿರಬಹುದು. ಮರಾಠರ ಬಗ್ಗೆ ಬಂಗಾಳದಲ್ಲಿ ಕೇಳಿದರೆ ಅವರ ಅಭಿಪ್ರಾಯವೇ ಬೇರೆ ಇರುತ್ತದೆ. ಹೀಗಾಗಿ ಇತಿಹಾಸವನ್ನು ಸಮಗ್ರವಾಗಿ ನೋಡುವ ಅಭ್ಯಾಸ ಬೆಳೆಸಿಕೊಳ್ಳಬೇಕು ಎಂದು ಪ್ರಿಯಾಂಕ್ ಖರ್ಗೆ ಕರೆ ನೀಡಿದರು.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

SK
Sathish Kumar KH
ವಿಜಯನಗರ ಜಿಲ್ಲೆ ಕಂದಗಲ್‌ಪುರ ಗ್ರಾಮದವನು ಮೂಲತಃ ಶಿಕ್ಷಕ. ಆದರೆ, ಆಕರ್ಷಿಸಿದ್ದು ಪತ್ರಿಕೋದ್ಯಮ. ಎಂಟು ವರ್ಷಗಳಿಂದ ಪ್ರಜಾವಾಣಿ, ವಿಜಯವಾಣಿ ನಂತರ ಇದೀಗ ಏಷ್ಯಾನೆಟ್ ಕನ್ನಡದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಕರ್ನಾಟಕ ರಾಜಕಾರಣ ನೆಚ್ಚಿನ ಕ್ಷೇತ್ರ. ಡಿಜಿಟಲ್ ಮಾಧ್ಯಮಕ್ಕನುಗುಣವಾಗಿ ಶಿಕ್ಷಣ, ಆರೋಗ್ಯ, ಸಿನಿಮಾ ಸುದ್ದಿಗಳನ್ನೂ ಬರೆಯುತ್ತೇನೆ. ಕ್ರಿಕೆಟ್, ಕೃಷಿ ಇಷ್ಟ. ಓದು ನೆಚ್ಚಿನ ಹವ್ಯಾಸ.
ಪ್ರಿಯಾಂಕ್ ಖರ್ಗೆ
ಟಿಪ್ಪು ಸುಲ್ತಾನ್

Latest Videos
Recommended Stories
Recommended image1
ಇತಿಹಾಸ ತಿರುಚುವುದು ಈಗ 1000 ಕೋಟಿ ಬ್ಯುಸಿನೆಸ್; RSSಗೆ 100 ವರ್ಷದಲ್ಲಿ ಹೇಳಲು 10 ಸಾಧನೆ ಇಲ್ಲ: ಪ್ರಿಯಾಂಕ್ ಖರ್ಗೆ!
Recommended image2
ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ್ರೆ ಬುಲ್ಡೋಜರ್‌ ಬಳಸಿ ಎಲ್ಲರನ್ನೂ ಓಡಿಸುತ್ತಾರೆ: ಮಮತಾ ಬ್ಯಾನರ್ಜಿ
Recommended image3
ತಮಿಳುನಾಡು ವಿಧಾನಸಭಾ ಚುನಾವಣೆಗೆ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ ಟಿವಿಕೆ: 2 ಕ್ಷೇತ್ರದಲ್ಲಿ ದಳಪತಿ ವಿಜಯ್ ಸ್ಪರ್ಧೆ
Related Stories
Recommended image1
ಕೆಪಿಎಸ್‌ಸಿ ಅಕ್ರಮಗಳಲ್ಲಿ ಮುಳುಗಿದೆ, ಸಂಸ್ಥೆ ಮುಚ್ಚಿ: ಸಚಿವ ಪ್ರಿಯಾಂಕ್‌ ಖರ್ಗೆ ಕಿಡಿ
Recommended image2
ಇತಿಹಾಸ ತಿರುಚುವುದು ಈಗ 1000 ಕೋಟಿ ಬ್ಯುಸಿನೆಸ್; RSSಗೆ 100 ವರ್ಷದಲ್ಲಿ ಹೇಳಲು 10 ಸಾಧನೆ ಇಲ್ಲ: ಪ್ರಿಯಾಂಕ್ ಖರ್ಗೆ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved