ತೇಜಸ್ವಿನಿ ಅನಂತ್ ಕುಮಾರ್ ಮೊಮ್ಮಗನ ಕಿವಿ ಹಿಂಡಿದ ಪ್ರಧಾನಿ ಮೋದಿ: ಇಲ್ಲಿದೆ ಪೂರ್ಣ ಫ್ಯಾಮಿಲಿ
ನವದೆಹಲಿ (ಜು.20): ಬಿಜೆಪಿಯ ಹಿರಿಯ ನಾಯಕ ದಿವಂಗತ ಅನಂತ್‌ಕುಮಾರ್ ಪತ್ನಿ ತೇಜಸ್ವಿನಿ ಅನಂತ್ ಕುಮಾರ್ ಅವರು ಕುಟುಂಬ ಸಮೇತರಾಗಿ ತೆರಳಿ ದೆಹಲಿಯ ಸಂಸತ್ ಭವನದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ್ದಾರೆ. ಈ ವೇಳೆ ಕುಟುಂಬ ಸಮೇತರಾಗಿ ಫೋಟೋ ತೆಗೆಸಿಕೊಂಡಿದ್ದು, ಪ್ರಧಾನಿ ಮೋದಿ, ಅನಂತ್ ಕುಮಾರ್ ಮೊಮ್ಮಗ ಅಪ್ರಮೇಯನ ಕಿವಿ ಹಿಂಡಿ ಪೋಸ್ ನೀಡಿದ್ದಾರೆ. ಈ ವೇಳೆ ಅನಂತ್ ಕುಮಾರ್ ಅವರ ಪುತ್ರಿ ಐಶ್ವರ್ಯಾ ಅನಂತ್ ಕುಮಾರ್, ಅಳಿಯ ದೇವೇಶ್ ಸಿಂಗ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ತೇಜಸ್ವಿನಿ ಅನಂತ್ ಕುಮಾರ್ ಕುಟುಂಬವು ಪಿಎಂ ಮೋದಿ ಅವರೊಂದಿಗೆ ಫೋಟೋ ತೆಗೆಸಿಕೊಳ್ಳುವ ವೇಳೆ ಅನಂತ್‌ಕುಮಾರ್ ಮೊಮ್ಮಗ ಅಪ್ರಮೇಯನ ಕಿವಿ ಹಿಂಡಿ ಮೋದಿ ಪೋಸ್ ನೀಡಿದ್ದಾರೆ. ಪುತ್ರಿ ಐಶ್ವರ್ಯಾ ಅನಂತ್ ಕುಮಾರ್, ದೇವೇಶ ಸಿಂಗ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಈಗ ಲೋಕಸಭಾ ಚುನಾವಣೆ ಸಂಬಂಧಿಸಿದಂತೆ ಪಕ್ಷ ಸಂಘಟನೆಯ ಚರ್ಚೆಗಳು ಆರಂಭವಾದ ಬೆನ್ನಲ್ಲಿಯೇ ತೇಜಸ್ವಿನಿ ಅನಂತಕುಮಾರ್ ಅವರು ಪ್ರಧಾನಿ ನರೇಂದ್ರ ಮೋದಿಯನ್ನು ಭೇಟಿ ಮಾಡಿದ್ದಾರೆ. ತೇಜಸ್ವಿನಿ ಅವರು ಕಾಂಗ್ರೆಸ್ ಸೇರುವ ಊಹಾಪೋಹ ಎದ್ದಾಗ "ದಯವಿಟ್ಟು ಊಹಾಪೋಹಗಳಿಗೆ ಕಿವಿಗೊಡಬೇಡಿ. ನಾನು ಭಾರತೀಯ ಜನತಾ ಪಕ್ಷದ ಜೊತೆಗೆ ಧೃಡವಾಗಿ ಇದ್ದೇನೆ" ಎಂದು ಹೇಳಿದ್ದರು.
ತೇಜಸ್ವಿನಿ ಅನಂತಕುಮಾರ್ ಅವರ ಮೊಮ್ಮಗನಿಗೆ ಚಾಕೋಲೇಟ್ ನೀಡಿದ ಪ್ರಧಾನಿ ಮೋದಿ. ಆದರೆ, ಅವರ ಭೇಟಿ ಬಗ್ಗೆ ರಾಜ್ಯ ನಾಯಕರಲ್ಲಿ ತೀವ್ರ ಕುತೂಹಲ ಕೆರಳಿಸಿದೆ.
ಬೆಂಗಳೂರಿನ ಬಿಜೆಪಿ ಹಿರಿಯ ಮುಖಂಡ ಅನಂತಕುಮಾರ್ ಮೊಮ್ಮಗನನ್ನು ನೋಡಿದ, ಪ್ರಧಾನಮಂತ್ರಿ ನರೇಂದ್ರ ಮೋದಿ ಆತ್ಮೀಯವಾಗಿ ಮಾತನಾಡಿದರು.
ಬೆಂಗಳೂರು ಲೋಕಸಭಾ ಕ್ಷೇತ್ರಗಳ ಬಿಜೆಪಿ ಟಿಕೆಟ್ ಮೇಲೆ ಕಣ್ಣಿಟ್ಟಿರುವ ಆಕಾಂಕ್ಷಿಗಳಿಗೆ ತೇಜಸ್ವಿನಿ ಅವರ ಪ್ರಧಾನಿ ಮೋದಿ ಭೇಟಿ ಉದ್ದೇಶದ ಬಗ್ಗೆ ಕುತೂಹಲ ಹೆಚ್ಚಾಗಿದೆ.