- Home
- News
- Politics
- ಬೆಂಗಳೂರು ಗ್ರಾಮಾಂತರ: ನಾಮಪತ್ರ ಸಲ್ಲಿಸುವ ಮೊದಲು ಮನೆದೇವರು ಕೆಂಕೇರಮ್ಮನ ಆಶೀರ್ವಾದ ಪಡೆದ ಡಿ.ಕೆ.ಸುರೇಶ್
ಬೆಂಗಳೂರು ಗ್ರಾಮಾಂತರ: ನಾಮಪತ್ರ ಸಲ್ಲಿಸುವ ಮೊದಲು ಮನೆದೇವರು ಕೆಂಕೇರಮ್ಮನ ಆಶೀರ್ವಾದ ಪಡೆದ ಡಿ.ಕೆ.ಸುರೇಶ್
ರಾಮನಗರ(ಮಾ.28): ಬೆಂಗಳೂರು ಗ್ರಾಮಾಂತರ ಲೋಕಸಭೆ ಕ್ಷೇತ್ರದಿಂದ ಮರುಆಯ್ಕೆ ಬಯಸಿರುವ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ. ಸುರೇಶ್ ಅವರು ನಾಮಪತ್ರ ಸಲ್ಲಿಸುವ ಮೊದಲು ಮನೆದೇವರು ಕನಕಪುರದ ಕೆಂಕೇರಮ್ಮ ದೇಗುಲದಲ್ಲಿ ಇಂದು(ಗುರುವಾರ) ಪೂಜೆ ಸಲ್ಲಿಸಿದ್ದಾರೆ. ಈ ಸಂದರ್ಭದಲ್ಲಿ ಸಹೋದರ, ಡಿಸಿಎಂ ಡಿ.ಕೆ.ಶಿವಕುಮಾರ್, ಅತ್ತಿಗೆ ಉಷಾ ಅವರೂ ಜತೆಗಿದ್ದರು.

ಇದೇ ವೇಳೆ ಕುಟುಂಬಸ್ಥರು, ಅಪಾರ ಬೆಂಬಲಿಗರು, ಅಭಿಮಾನಿಗಳೊಂದಿಗೆ ಆಗಮಿಸಿ ಮನೆದೇವರು ಕನಕಪುರದ ಕೆಂಕೇರಮ್ಮ ದೇಗುಲದಲ್ಲಿ ವಿಶೇಷ ಪೂಜೆ ಸಲ್ಲಿಸಿ ತಾಯಿ ಕೆಂಕೇರಮ್ಮನ ಆಶೀರ್ವಾದ ಪಡೆದುಕೊಂಡ ಡಿ.ಕೆ. ಸುರೇಶ್
ಇದೇ ವೇಳೆ ಕುಟುಂಬಸ್ಥರು, ಅಪಾರ ಬೆಂಬಲಿಗರು, ಅಭಿಮಾನಿಗಳೊಂದಿಗೆ ಆಗಮಿಸಿ ಮನೆದೇವರು ಕನಕಪುರದ ಕೆಂಕೇರಮ್ಮ ದೇಗುಲದಲ್ಲಿ ವಿಶೇಷ ಪೂಜೆ ಸಲ್ಲಿಸಿ ತಾಯಿ ಕೆಂಕೇರಮ್ಮನ ಆಶೀರ್ವಾದ ಪಡೆದುಕೊಂಡ ಡಿ.ಕೆ. ಸುರೇಶ್
ಇಡೀ ಜಗತ್ತಿನ ಸೃಷ್ಟಿಯೇ ತಾಯಿ, ತಾಯಿಗಿಂತ ಮಿಗಿಲಾದ ದೇವರಿಲ್ಲ. ಕಣ್ಮುಂದೆ ಕಾಣುವ ತಾಯಿ ಸಾವಿರ ದೇವರಿಗೆ ಸಮ'. ನಾಮಪತ್ರ ಸಲ್ಲಿಸುವ ಹಿನ್ನೆಲೆಯಲ್ಲಿ ನನ್ನ ತಾಯಿಯ ಆಶೀರ್ವಾದವನ್ನು ಪಡೆದೆ. ಪ್ರೀತಿ, ವಾತ್ಸಲ್ಯ, ತ್ಯಾಗದ ಪ್ರತೀಕವಾದ ಅಮ್ಮನ ಆಶೀರ್ವಾದದಲ್ಲಿ ಇಡೀ ಜಗತ್ತನ್ನೇ ಗೆಲ್ಲುವ ಶಕ್ತಿ ಅಡಗಿದೆ ಎಂದು ತಿಳಿಸಿದ್ದರು.
ಹಾರೋಹಳ್ಳಿ ನಗರದಲ್ಲಿರುವ ಪ್ರಸಿದ್ಧ ಶ್ರೀ ಚಾಮುಂಡೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿ, ತಾಯಿ ಚಾಮುಂಡೇಶ್ವರಿ ದೇವಿಯ ಆಶೀರ್ವಾದ ಪಡೆದೆ. ತಾಯಿಯ ಆಶೀರ್ವಾದದಿಂದ ಗೆಲುವಿನ ಆತ್ಮಬಲ ಮತ್ತಷ್ಟು ಹೆಚ್ಚಿದೆ ಎಂದು ಬೆಂಗಳೂರು ಗ್ರಾಮಾಂತರ ಲೋಕಸಭೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ.ಸುರೇಶ್ ಅವರು ತಿಳಿಸಿದ್ದರು.
ಬುಧವಾರ ವೆಂಕಟರಮಣ ಸ್ವಾಮಿ ದೇವಸ್ಥಾನ, ಕನಕಪುರದ ದೇಗುಲಮಠ, ಮಳಗಾಳು ಮಹಾದೇಶ್ವರ ಸ್ವಾಮಿ, ಮರಳೆ ಗವಿಮಠ, ಶಿವಗಿರಿ ಕ್ಷೇತ್ರದ ಶಿವಾಲದಮೂರ್ತಿ ಅನ್ನದಾನ ಮಠ, ಕಬ್ಬಾಳಮ್ಮನ ದೇವಸ್ಥಾನ ಸೇರಿದಂತೆ ಕ್ಷೇತ್ರದ ವಿವಿಧ ಮಠಗಳಿಗೆ ಭೇಟಿ ನೀಡಿ, ದೇವರ ಆಶೀರ್ವಾದ ಪಡೆದ ಡಿ.ಕೆ. ಸುರೇಶ್. ಇದೇ ವೇಳೆ ರಾಮನಗರದಲ್ಲಿರುವ ಆದಿಚುಂಚನಗಿರಿ ಮಹಾಸಂಸ್ಥಾನ ಶಾಖಾ ಮಠಕ್ಕೆ ತೆರಳಿ, ಶ್ರೀಗಳ ಆಶೀರ್ವಚನ ಪಡೆದ. ಕ್ಷೇತ್ರದ ಜನರು ತೋರಿಸುವ ಪ್ರೀತಿ, ವಿಶ್ವಾಸ, ಅಭಿಮಾನಕ್ಕೆ ಸದಾ ಚಿರಋಣಿ ಎಂದು ಹೇಳಿದ್ದರು.