ರಾಜ್ಯಸಭಾ ಎಲೆಕ್ಷನ್: ಖರ್ಗೆ ನಾಮಪತ್ರ ಸಲ್ಲಿಕೆಗೂ ನಡೀತು ಮಹತ್ವದ ಸಭೆ

First Published Jun 8, 2020, 2:53 PM IST

ಕರ್ನಾಟದ ಸ್ಥಾನಗಳಿಗೆ ರಾಜ್ಯಸಭಾ ಚುನಾವಣೆ ನಡೆಯುತ್ತಿರುವುದರಿಂದ ಹೈಕಮಾಂಡ್ ರಾಜ್ಯ ನಾಯಕರ ಅಭಿಪ್ರಾಯ ಸಂಗ್ರಹಿಸಿ ಬಳಿಕ ಅಭ್ಯರ್ಥಿ ಪಟ್ಟಿ ಪ್ರಕಟಿಸುವುದು ಸಾಮಾನ್ಯ. ಆದ್ರೆ, ಕಾಂಗ್ರೆಸ್ ಹೈಕಮಾಂಡ್ ತನ್ನ ರಾಜ್ಯ ಘಟಕದ ಒಂದೂ ಮಾತು ಕೇಳದೇ, ರಾಜ್ಯ  ನಾಯಕರನ್ನು ಸಂಪರ್ಕಿಸದೆ ದಿಢೀರ್ ಮಲ್ಲಿಕಾರ್ಜುನ ಖರ್ಗೆ ಅವರ ಹೆಸರನ್ನು ಪ್ರಕಟಿಸಿದೆ. ಹೈಕಮಾಂಡ್ ತೆಗೆದುಕೊಂಡಿರುವ ಏಕೈಕ ನಿರ್ಧಾರವಿದು. ಅಷ್ಟಕ್ಕೂ ಖರ್ಗೆ ಅವರ ಹೆಸರನ್ನು ಹೈಕಮಾಂಡ್ ಘೋಷಣೆ ಮಾಡಿರುವುದು ಪೂರ್ವ ನಿರ್ಧಾರಿತ ತೀರ್ಮಾನ ಹೌದು. ಇದೀಗ ಖರ್ಗೆ ಅವರು ನಾಮಪತ್ರ ಸಲ್ಲಿಕೆಗೂ ಮುನ್ನ ಮಹತ್ವದ ಸಭೆ ನಡೆದಿದೆ.