ಸದಸ್ಯರ ಲೆಕ್ಕಾಚಾರದಲ್ಲಿ ವಿಶ್ವದ ಅತಿದೊಡ್ಡ 10 ರಾಜಕೀಯ ಪಕ್ಷಗಳಿವು!
ಈ ಜಗತ್ತಿನಲ್ಲಿ ಲೆಕ್ಕವಿದಷ್ಟು ರಾಜಕೀಯ ಪಕ್ಷಗಳಿವೆ. ಬಹುಶಃ ಭಾರತದಲ್ಲಿ ಇರುವಷ್ಟು ರಾಜಕೀಯ ಪಕ್ಷಗಳು ಮತ್ಯಾವ ದೇಶದಲ್ಲೂ ಇಲ್ಲ. ಹಾಗಿದ್ದರೆ, ಸದಸ್ಯರ ಲೆಕ್ಕಾಚಾರದಲ್ಲಿ ವಿಶ್ವದ 10 ಅತಿದೊಡ್ಡ ರಾಜಕೀಯ ಪಕ್ಷಗಳ ಲಿಸ್ಟ್ ಇಲ್ಲಿದೆ.
10. ಪಾಕಿಸ್ತಾನ ತೆಹ್ರಿಕ್ ಇ ಇನ್ಸಾಫ್: ಪಾಕಿಸ್ತಾನದ ಮಾಜಿ ಪ್ರಧಾನಿ ಹಾಗೂ ಇಮ್ರಾನ್ ಖಾನ್ ಅಧ್ಯಕ್ಷರಾಗಿರುವ ಪಾಕಿಸ್ತಾನ್ ತೆಹ್ರಿಕ್ ಇ ಇನ್ಸಾಫ್ ಪಕ್ಷ 1 ಕೋಟಿ ಸದ್ಯಸರನ್ನು ಹೊಂದಿದ್ದು, ಪಟ್ಟಿಯಲ್ಲಿ 10ನೇ ಸ್ಥಾನದಲ್ಲಿದೆ.
09. ಆಮ್ ಆದ್ಮಿ ಪಾರ್ಟಿ: 2011ರಲ್ಲಿ ದೇಶಪೂರ್ತಿ ಸುದ್ದಿಯಾಗಿದ್ದ ಅಣ್ಣಾ ಹಜಾರೆ ಅವರ ಭ್ರಷ್ಟಾಚಾರ ವಿರೋಧಿ ಚಳುವಳಿಯಿಂದ ಉದ್ಭವವಾದ ಪಕ್ಷ ಆಮ್ ಆದ್ಮಿ ಪಾರ್ಟಿ. ಮಾಜಿ ಐಐಟಿ ಹಾಗೂ ಸರ್ಕಾರಿ ಅಧಿಕಾರಿಯಾಗಿದ್ದ ಅರವಿಂದ್ ಕೇಜ್ರಿವಾಲ್ ಅವರಿಂದ ಆರಂಭವಾದ ಈ ಪಕ್ಷ 1.05 ಕೋಟಿ ಸದಸ್ಯರನ್ನು ಹೊಂದಿದೆ.
08. ಪ್ರಾಸ್ಪರಿಟಿ ಪಾರ್ಟಿ: ಆಫ್ರಿಕಾದ ಇಥಿಯೋಪಿಯಾ ದೇಶದ ಪಕ್ಷ ಪ್ರಾಸ್ಪರಿಟಿ ಪಾರ್ಟಿ. 2019ರಲ್ಲಿ ನೊಬೆಲ್ ಪ್ರಶಸ್ತಿ ಪುರಸ್ಕೃತ ಅಬೆ ಅಹ್ಮದ್ ಅಲಿ ಇದನ್ನು ಸ್ಥಾಪಿಸಿದ್ದರು. ಈ ಪಕ್ಷದಲ್ಲಿರುವ ಒಟ್ಟು ಸದಸ್ಯರ ಸಂಖ್ಯೆ 1.1 ಕೋಟಿ. ವಿಶ್ವದ ಅತಿದೊಡ್ಡ ರಾಜಕೀಯ ಪಕ್ಷಗಳ ಪಟ್ಟಿಯಲ್ಲಿ 8ನೇ ಸ್ಥಾನದಲ್ಲಿದೆ.
07. ಎಕೆ ಪಾರ್ಟಿ (ಎಕೆಪಿ): 22 ವರ್ಷಗಳ ಹಿಂದೆ ಟರ್ಕಿಯಲ್ಲಿ ಸ್ಥಾಪನೆಗೊಂಡ ಈ ಪಕ್ಷಕ್ಕೆ ಈಗ ರೆಸೆಪ್ ತಯ್ಯಿಪ್ ಎರ್ಡೋಗನ್ ನಾಯಕ. ಇವರು ಟರ್ಕಿಯ ಅಧ್ಯಕ್ಷರೂ ಹೌದು. 1.24 ಕೋಟಿ ಸದಸ್ಯರನ್ನು ಹೊಂದಿರುವ ಈ ಪಕ್ಷ 7ನೇ ಸ್ಥಾನದಲ್ಲಿದೆ.
06. ಎಐಎಡಿಎಂಕೆ: ಎಂಜಿ ರಾಮಚಂದ್ರನ್‌ರಿಂದ 50 ವರ್ಷಗಳ ಹಿಂದೆ ತಮಿಳುನಾಡಿನಲ್ಲಿ ಆರಂಭವಾದ ಪಕ್ಷ, ಆಲ್ ಇಂಡಿಯಾ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ ಅಂದರೆ ಎಐಎಡಿಎಂಕೆ. ಪ್ರಸ್ತುತ ಇದು 1.6 ಕೋಟಿ ಸದಸ್ಯರನ್ನು ಹೊಂದಿದ್ದು, ಪಟ್ಟಿಯಲ್ಲಿ 6ನೇ ಸ್ಥಾನದಲ್ಲಿದೆ.
05. ರಿಪಬ್ಲಿಕನ್ ಪಾರ್ಟಿ: ಅಮೆರಿಕದಲ್ಲಿ ಬರೋಬ್ಬರಿ 169 ವರ್ಷಗಳ ಹಿಂದೆ ಆರಂಭವಾದ ಅಬ್ರಾಹಂ ಲಿಂಕನ್‌ರೊಂದಿಗೆ 7 ಜನ ನಾಯಕರು ಸೇರಿ ಆರಂಭಿಸಿದ ಪಕ್ಷ. ಇಂದು 3.61 ಕೋಟಿ ಸದಸ್ಯರನ್ನು ಹೊಂದಿರುವ ಈ ಪಕ್ಷ ವಿಶ್ವದ ಅತಿದೊಡ್ಡ ರಾಜಕೀಯ ಪಕ್ಷಗಳ ಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದೆ.
04. ಡೆಮಾಕ್ರಟಿಕ್ ಪಾರ್ಟಿ: ಅಮೆರಿಕದಲ್ಲಿ 195 ವರ್ಷಗಳ ಹಿಂದೆ ಆರಂಭವಾದ ಪಾರ್ಟಿ ಡೆಮಾಕ್ರಟಿಕ್ ಪಾರ್ಟಿ. ಪ್ರಸ್ತುತ ಅಮೆರಿಕದ ಅಧ್ಯಕ್ಷರಾಗಿರುವ ಜೋ ಬೈಡೆನ್ ಇದೇ ಪಕ್ಷದವರು. 4.7 ಕೋಟಿ ಸದಸ್ಯರನ್ನು ಹೊಂದಿರುವ ಈ ಪಕ್ಷ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ.
03. ಇಂಡಿಯನ್ ನ್ಯಾಷನಲ್ ಕಾಂಗ್ರೆಸ್: 137 ವರ್ಷಗಳ ಇತಿಹಾಸ ಹೊಂದಿರುವ ಈ ಪಕ್ಷವನ್ನು ಸಂಸ್ಥಾಪಿಸಿದ್ದು ಬ್ರಿಟಿಷನ್ ಪ್ರಜೆ ಅಲನ್ ಓಕ್ಟಾವಿಯನ್ ಹ್ಯೂಮ್. ಮಲ್ಲಿಕಾರ್ಜುನ್ ಖರ್ಗೆ ಇಂದು ಈ ಪಕ್ಷಕ್ಕೆ ಅಧ್ಯಕ್ಷರು. 5 ಕೋಟಿ ಸದಸ್ಯರನ್ನು ಹೊಂದಿರುವ ಕಾಂಗ್ರೆಸ್ ಈ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ.
02. ಚೈನೀಸ್ ಕಮ್ಯುನಿಸ್ಟ್ ಪಾರ್ಟಿ: 102 ವರ್ಷಗಳ ಹಿಂದೆ ಆರಂಭವಾಗಿರುವ ಚೈನೀಸ್ ಕಮ್ಯುನಿಷ್ಟ್ ಪಾರ್ಟಿ ಇಡೀ ಚೀನಾದಲ್ಲಿರುವ ಏಕೈಕ ರಾಜಕೀಯ ಪಕ್ಷ. ಚೀನಾದ ಅಧ್ಯಕ್ಷರಾಗಿರುವ ಕ್ಸಿ ಜಿನ್‌ಪಿಂಗ್ ಸದ್ಯ ಈ ಪಕ್ಷದ ಪ್ರಧಾನ ಕಾರ್ಯದರ್ಶಿ. ಒಟ್ಟಾರೆ 9.8 ಕೋಟಿ ಸದಸ್ಯರನ್ನು ಹೊಂದಿದ್ದು, ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದೆ.
'ಹಿಂದೂ ಸಿದ್ಧಾಂತವನ್ನೇ ಸಂಘಿ ಎನ್ನುವುದಾದರೆ, ನಾನು ಸಂಘಿ' ಎಂದ ಖ್ಯಾತ ನಿರೂಪಕಿ ರಶ್ಮಿ ಗೌತಮ್!
01. ಭಾರತೀಯ ಜನತಾ ಪಾರ್ಟಿ: ಭಾರತದಲ್ಲಿ ಅಧಿಕಾರದಲ್ಲಿರುವ ಎನ್‌ಡಿಎ ಮೈತ್ರಿಯ ಪ್ರಧಾನ ಪಕ್ಷ ಭಾರತೀಯ ಜನತಾ ಪಾರ್ಟಿ. ಜೆಪಿ ನಡ್ಡಾ ಅಧ್ಯಕ್ಷರಾಗಿರುವ ಈ ಪಕ್ಷ ಆರಂಭವಾಗಿದ್ದು 43 ವರ್ಷಗಳ ಹಿಂದೆ. ಇದು 18 ಕೋಟಿ ಸದಸ್ಯರನ್ನು ಹೊಂದಿದ್ದು, ವಿಶ್ವದ ಅತೀದೊಡ್ಡ ರಾಜಕೀಯ ಪಕ್ಷ ಎನಿಸಿಕೊಂಡಿದೆ.
ಹಿಂದೂವಾಗಿ ನಾವು ಮುಂದಿನ ಪೀಳಿಗೆಗೆ ಏನನ್ನು ಕಲಿಸಬೇಕು? ನಟಿ ರಶ್ಮಿ ಗೌತಮ್ ಹೇಳಿರೋ ಮಾತನ್ನು ನೋಡಿ