ಬಿಎಸ್‌ವೈ ಕಾಲಿಗೆ, ವಿಧಾನಸಭೆ ಮೆಟ್ಟಿಲಿಗೆ ನೂತನ ಶಾಸಕ ದೀರ್ಘದಂಡ ನಮಸ್ಕಾರ

First Published Jun 8, 2021, 8:01 PM IST

 ರಾಜ್ಯದ ಎರಡು ವಿಧಾನಸಭಾ ಕ್ಷೇತ್ರಗಳಲ್ಲಿ ಆಯ್ಕೆಯಾದ ನೂತನ ಶಾಸಕರ ಪ್ರಮಾಣವಚನ ಕಾರ್ಯಕ್ರಮ ಇಂದು (ಮಂಗಳವಾರ) ನಡೆಯಿತು. ಬಸವಕಲ್ಯಾಣ ವಿಧಾನಸಭಾ ಕ್ಷೇತ್ರದಲ್ಲಿ ಗೆದ್ದ ಶರಣು ಸಲಗಾರ್ ಹಾಗೂ ಮಸ್ಕಿ ವಿಧಾನಸಭಾ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ ಬಸವನಗೌಡ ತುರುವಿಹಾಳ್ ಅವರಿಗೆ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ  ಸ್ಪೀಕರ್ ಕಾಗೇರಿ ಪ್ರಮಾಣವಚನ ಬೋಧಿಸಿದರು. ಆದ್ರೆ, ಅದಕ್ಕೂ ಮೊದಲು ನೂತನ ಶಾಸಕರೊಬ್ಬರು ಸಿಎಂ ಬಿಎಸ್‌ವೈ ಕಾಲಿಗೆ ಹಾಗೂ ವಿಧಾನಸಭೆ ಮೆಟ್ಟಿಲಿಗೆ ದೀರ್ಘದಂಡ ನಮಸ್ಕಾರ ಮಾಡಿ ಗಮನಸೆಳೆದರು.