ಮಧ್ಯಪ್ರದೇಶ, ಕಮಲ್ ನಾಥ್ ಸರ್ಕಾರ ಉಳಿಸಲು ಮುಂದಾದ ಈ 13ರ ಪೋರ ಯಾರು?
ಮಧ್ಯಪ್ರದೇಶ ಸರ್ಕಾರ ಉರುಳುವ ಪರಿಸ್ಥಿತಿಯಲ್ಲಿದೆ. ಕಾಂಗ್ರೆಸ್ ನ ಬಹುತೇಕ ಎಲ್ಲಾ ನಾಯಕರು ಸರ್ಕಾರ ಉಳಿಸುವ ಪ್ರಯತ್ನದಲ್ಲಿದ್ದಾರೆ. ಹೀಗಿರುವಾಗ 13 ವರ್ಷದ ಬಾಲಕನೊಬ್ಬ ಕಮಲ್ ನಾಥ್ ಸರ್ಕಾರ ಉಳಿಸಲು ಸಿಎಂ ನಿವಾಸದೆದುರು ಧರಣಿ ಹೂಡಿದ್ದಾನೆ. ಹೌದು ಈತನ ಹೆಸರು ಲಕ್ಷ್ಯ್ ಗುಪ್ತಾ, ಈತ ಇತ್ತೀಚೆಗಷ್ಟೇ 8 ನೇ ತರಗತಿ ಪರೀಕ್ಷೆ ಬರೆದಿದ್ದಾನೆ. ಈ ಬಾಲಕ ಕಮಲ್ ನಾಥ್ ರವರ ಬಹುದೊಡ್ಡ ಅಭಿಮಾನಿ. ಅವರನ್ನು ತನ್ನ ರಾಜಕೀಯ ಗುರು ಹಾಗೂ ತಾನವರ ಶಿಷ್ಯ ಎಂದೇ ಪರಿಚಯಿಸಿಕೊಂಡಿದ್ದಾರೆ. ತಾನು ಮುಖ್ಯಮಂತ್ರಿಗಾಗಿ ಏನು ಬೇಕಾದರೂ ಮಾಡಲು ಸಿದ್ಧ ಎಂದಿದ್ದಾರೆ.
16

ಮಾಧ್ಯಮಗಳೊಂದಿಗೆ ಮಾತನಾಡಿದ ಲಕ್ಷ್ಯ್, ಕಮಲ್ ನಾಥ್ ಬಳಿ ಮಧ್ಯಪ್ರದೇಶವನ್ನು ಅಭಿವೃದ್ಧಿ ಪಥದೆಡೆ ಸಾಗಿಸುವ ಸಂಪೂರ್ಣ ಪ್ಲಾನ್ ಇದೆ. ಅವರೊಬ್ಬರೇ ಮಧ್ಯಪ್ರದೇಶ ಉದ್ಧಾರ ಮಾಡಲು ಸಾಧ್ಯ. ಅವರ ಸರ್ಕಾರದ ವಿರುದ್ಧ ನಡೆಯುತ್ತಿರುವ ಷಡ್ಯಂತ್ರ ಹಾಗೂ ಸಮಸ್ಯೆ ನಿವಾರಣೆ ಆಗುವವರೆಗೂ ನಾನು ಧರಣಿ ಮುಂದುವರೆಸುತ್ತೇನೆ ಎಂದಿದ್ದಾರೆ.

Add Asianetnews Kannada as a Preferred Source

26
ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಸರ್ಕಾರ ಮುಂದುವರೆಯಲಿ ಎಂದು ನಾನು ದೇವರಲ್ಲಿ ಪ್ರಾರ್ಥಿಸುತ್ತೇನೆ. ಅಲ್ಲದೇ ಮುಂದಿನ 10 ವರ್ಷ ಕಮಲ್ ನಾಥ್ ರವರೇ ಮಧ್ಯಪ್ರದೇಶದ ಮುಖ್ಯಮಂತ್ರಿಯಾಗಿ ಮುಂದುವರೆಯಲಿ. ಅತಿ ಶೀಘ್ರದಲ್ಲಿ ಎಲ್ಲಾ ಸಮಸ್ಯೆಗಳು ನಿವಾರಣೆಯಾಗಲಿದೆ ಹಾಗೂ ಸಿಹಿ ಸುದ್ದಿ ಸಿಗಲಿದೆ. ಕಮಲನಾಥ್ ಓರ್ವ ಅತ್ಯುತ್ತಮ ರಾಜಕೀಯ ನಾಯಕರು ಮಾತ್ರವಲ್ಲ, ಅತ್ಯುತ್ತಮ ಉದ್ಯಮಿ ಕೂಡಾ ಹೌದು. ಅವರ ಬಳಿ ರಾಜ್ಯದ ಎಲ್ಲಾ ನಿರುದ್ಯೋಗಿಗಳಿಗೆ ಉದ್ಯೋಗ ನಿಡುವ ಪ್ಲಾನ್ ಕೂಡಾ ಇದೆ ಎಂಬುವುದು ಲಕ್ಷ್ಯ್ ಮಾತು.

36
ಲಕ್ಷ್ಯ್ ತನ್ನೊಂದಿಗೆ ಒಂದು ಪೋಸ್ಟರ್ ಕೂಡಾ ತೆಗೆದುಕೊಂಡು ಬಂದಿದ್ದಾನೆ. ಇದರಲ್ಲಿ ನನಗೆ ನಮ್ಮ ಮುಖ್ಯಮಂತ್ರಿ ಕುರಿತು ಬಹಳ ಗೌರವವಿದೆ. ಭಗವಂತ ನಿಮ್ಮೊಂದಿಗಿದ್ದಾನೆ. ರಾಜ್ಯದ ಜನತೆ ನಿಮ್ಮೊಂದಿಗಿದ್ದಾರೆ ಎಂದು ಬರೆದಿದ್ದಾರೆ.

46
ಕಮಲ್ ನಾಥ್ ಸಂಸದರಾಗಿದ್ದಾಗ ನಾನು ನಮ್ಮ ಶಾಲೆಯಲ್ಲಿ ಅವರ ಕುರಿತು ಒಂದು ಭಾಷಣ ಮಾಡಿದ್ದೆ. ಇದರಲ್ಲಿ ತಾನು ರಾಜ್ಯದ ಜನತೆಗೆ ವರ ಅಗತ್ಯವಿದೆ ಹಾಗೂ ಅವರೇ ಮುಖ್ಯಮಂತ್ರಿಯಾಗುತ್ತಾರೆ ಎಂದು ನಾನು ಹೇಳಿದ್ದೆ ಎಂದಿದ್ದಾರೆ ಲಕ್ಷ್ಯ್

56
ನಾನು ಕಮಲ್ ನಾಥ್ ರನ್ನು ಭೇಟಿ ಕೂಡಾ ಮಾಡಿದ್ದೇನೆ. ಈ ವೇಳೆ ಅವರಿಗೆ ರಾಜ್ಯದ ಸರ್ಕಾರಿ ಆಸ್ಪತ್ರೆಗಳ ದಯನೀಯ ಸ್ಥಿತಿಯನ್ನು ಸುಧಾರಿಸುವ ಕುರಿತು ಮಾಸ್ಟರ್ ಪ್ಲಾನ್ ನೀಡಿದ್ದೇನೆ. ಇದನ್ನು ಜಾರಿಗೊಳಿಸುವ ಭರವಸೆ ಅವರು ನಿಡಿದ್ದಾರೆ ಎಂದಿದ್ದಾರೆ ಲಕ್ಷ್ಯ್

66
ಮಧ್ಯಪ್ರದೇಶ ಕಾಂಗ್ರೆಸ್ ಪಕ್ಷದ 22 ಬಂಡಾಯ ಶಾಸಕರು ಬೆಂಗಳೂರಿನ ರಮಡಾ ಹೋಟೆಲ್‌ನಲ್ಲಿ ಉಳಿದುಕೊಂಡಿದ್ದಾರೆ. ಇವರಿಂದ ಸರ್ಕಾರ ಉರುಳುವ ಭೀತಿಯಲ್ಲಿದ್ದು, ಕಮಲ್ ನಾಥ್ ಸರ್ಕಾರ ಉಳಿಸುವ ಎಲ್ಲಾ ಪ್ರಯತ್ನ ಮುಂದುವರೆಸಿದ್ದಾರೆ

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.
Latest Videos