- Home
- Entertainment
- News
- ರಶ್ಮಿಕಾಗೆ ಬ್ಯಾಡ್ ಟೈಮ್ ಶುರುವಾಯ್ತಾ? 'ಬ್ಯಾಡ್ ಬಾಯ್' ಸಲ್ಲೂ ಜೊತೆ ನಟಿಸಿದ್ದೇ ಮುಳುವಾಯ್ತಾ?
ರಶ್ಮಿಕಾಗೆ ಬ್ಯಾಡ್ ಟೈಮ್ ಶುರುವಾಯ್ತಾ? 'ಬ್ಯಾಡ್ ಬಾಯ್' ಸಲ್ಲೂ ಜೊತೆ ನಟಿಸಿದ್ದೇ ಮುಳುವಾಯ್ತಾ?
ನಟಿ ರಶ್ಮಿಕಾ ಮಂದಣ್ಣ ನಟಿಸಿರುವ ಕಾರಣಕ್ಕಾದರೂ ಸಿಕಂದರ್ ಸಿನಿಮಾ ಗೆಲ್ಲುತ್ತದೆ ಎಂದು ಹಲವರು ಅಂದುಕೊಂಡಿದ್ದರು. ಆದರೆ, ಅನಿಸಿಕೆ ಸುಳ್ಳಾಗಿದೆ, ನಂಬಿಕೆ ಹುಸಿಯಾಗಿದೆ. ಸಿಕಂದರ್ 100 ಕೋಟಿ ಕ್ಲಬ್ ಸೇರಲೂ ಕೂಡ ಹೆಣಗಾಡುತ್ತಿದೆ.

ರಶ್ಮಿಕಾ ಮಂದಣ್ಣ (Rashmika Mandanna) ಸಿನಿಮಾ ಗತಿ ಏನಾಯ್ತು? ಈ ಪ್ರಶ್ನೆ ಹಲವರ ಮನಸ್ಸನ್ನು ಕಾಡುತ್ತಿದೆ. ಕಾರಣ, ಪುಷ್ಪಾ, ಪುಷ್ಪಾ-2 ಹೀಗೆ ಒಂದರಮೇಲೆ ಮತ್ತೊಂದು ಸಿನಿಮಾಗಳ ಯಶಸ್ಸಿನ ಅಲೆಯಲ್ಲಿ ನಟಿ ರಶ್ಮಿಕಾ ತೇಲಾಡುತ್ತಿದ್ದರು.
ಆದರೆ, ಇದೀಗ ತೆರೆಗೆ ಬಂದಿರುವ ಸಿಕಂದರ್ ಸಿನಿಮಾ ರಶ್ಮಿಕಾ ಲೆಕ್ಕಾಚಾರವನ್ನು ತಲೆಕೆಳಗು ಮಾಡಿದೆ. ಕಾರಣ, ನಟಿ ರಶ್ಮಿಕಾ ಕಾಲ್ಗುಣ ಚೆನ್ನಾಗಿದೆ, ಅವರು ಮುಟ್ಟಿದ್ದೆಲ್ಲಾ ಚಿನ್ನ ಆಗುತ್ತಿದೆ ಎಂಬ ಮಾತು ಚಾಲ್ತಿಯಲ್ಲಿತ್ತು.
ಆದರೆ, ಸದ್ಯ ಸಲ್ಮಾನ್ ಟೈಮ್ ಚೆನ್ನಾಗಿಲ್ಲ ಎಂಬುದು ಜಗತ್ತಿಗೇ ಗೊತ್ತು. ಕಾರಣ, ಕೃಷ್ಣಮೃಗ ಬೇಟೆ ಪ್ರಕರಣದಿಂದ ನಟ ಸಲ್ಲೂ ಸಾಕಷ್ಟು ಸಮಸ್ಯೆಗೆ ಸಿಲುಕಿದ್ದಾರೆ. ಜೊತೆಗೆ, ಅವರ ನಟನೆಯ ಇತ್ತೀಚಿನ ಸಿನಿಮಾಗಳು ಸೋತಿವೆ.
ಹೀಗಾಗಿ, ನಟಿ ರಶ್ಮಿಕಾ ಮಂದಣ್ಣ ನಟಿಸಿರುವ ಕಾರಣಕ್ಕಾದರೂ ಸಿಕಂದರ್ ಸಿನಿಮಾ ಗೆಲ್ಲುತ್ತದೆ ಎಂದು ಹಲವರು ಅಂದುಕೊಂಡಿದ್ದರು. ಆದರೆ, ಅನಿಸಿಕೆ ಸುಳ್ಳಾಗಿದೆ, ನಂಬಿಕೆ ಹುಸಿಯಾಗಿದೆ. ಸಿಕಂದರ್ 100 ಕೋಟಿ ಕ್ಲಬ್ ಸೇರಲೂ ಕೂಡ ಹೆಣಗಾಡುತ್ತಿದೆ.
ಭಾರತ ಮಾತ್ರವಲ್ಲ, ಉತ್ತರ ಅಮೆರಿಕಾದಲ್ಲಿ ಕೂಡ ರಶ್ಮಿಕಾ-ಸಲ್ಮಾನ್ ಖಾನ್ ನಟನೆಯ ಸಿಕಂದರ್ ಸಿನಿಮಾ ಸದ್ದು ಮಾಡುತ್ತಿಲ್ಲ. ಹೀಗಾಗಿ ನಟಿ ರಶ್ಮಿಕಾ ಡೌನ್‌ಫಾಲ್ ಶುರುವಾಯ್ತಾ ಹೇಗೆ ಎಂಬ ಯೋಚನೆ ಹಲವರನ್ನು ಕಾಡತೊಡಗಿದೆ.
ಸದ್ಯ ಬಾಲಿವುಡ್ ಸೇರಿದಂತೆ, ಟಾಲಿವುಡ್ ಚಿತ್ರರಂಗದಲ್ಲಿ ನಟಿ ರಶ್ಮಿಕಾ ಓಡುತ್ತಿರುವ ಕುದುರೆ, ಭಾರತದ ನಂಬರ್ ಒನ್ ನಟಿ. ಸಿಕಂದರ್ ಸಿನಿಮಾ ಕೂಡ ಗೆಲುವು ಸಾಧಿಸಿದ್ದರೆ ರಶ್ಮಿಕಾ ಮಂದಣ್ಣ ಓಟ ಇನ್ನಷ್ಟು ವೇಗ ಪಡೆದುಕೊಳ್ಳುತ್ತಿತ್ತು.
ಆದರೆ, ಸಿಕಂದರ್ ಸೋಲು ಓಡುತ್ತಿದ್ದ ನಟಿ ರಶ್ಮಿಕಾ ಮಂದಣ್ಣ ಒಮ್ಮೆ ನಿಂತು ನಡೆಯುವಂತೆ ಮಾಡಿದೆ. ಆದರೆ, ಓಟ ನಿಲ್ಲೋದಿಲ್ಲ, ಕಾರಣ ಅವರ ಕೈನಲ್ಲಿ ಇನ್ನೂ ಸಾಕಷ್ಟು ಚಿತ್ರಗಳಿವೆ. ಅವುಗಳಲ್ಲಿ ಒಂದು ಚಿತ್ರ ಗೆದ್ದರೂ ಕೂಡ ರಶ್ಮಿಕಾಗೆ ಗೆಲುವೇ ಆಗುತ್ತದೆ.
ಸದ್ಯ, ಸಿಕಂದರ್ ಸಿನಿಮಾದ ಸೋಲು ನಟಿ ರಶ್ಮಿಕಾಗಿಂತ ಹೆಚ್ಚು ಕಾಡಿಸುವುದು ಸಲ್ಮಾನ್ ಖಾನ್ ಅವರನ್ನೇ. ಕಾರಣ, ಈ ಮೊದಲೇ ಸತತ ಸೋಲಿನಿಂದ ಕಂಗೆಟ್ಟಿದ್ದ ಸಲ್ಲೂ ಮಿಯಾ ಈಗ ದೊಡ್ಡ ಪೆಟ್ಟು ತಿಂದಂತಾಗಿದೆ.
ಜೊತೆಗೆ, ಪರ್ಸನಲ್ ಸಮಸ್ಯೆ ಸುಳಿಯಲ್ಲಿ ಕೂಡ ಸಲ್ಮಾನ್ ಖಾನ್ ಸಿಕ್ಕಿ ಒದ್ದಾಡುತ್ತಿದ್ದಾರೆ. ಒಟ್ಟಿನಲ್ಲಿ ರಶ್ಮಿಕಾ ಮಂದಣ್ಣ ನಟನೆಯ ಒಂದು ಸಿನಿಮಾ ಸೋತ ಕಾರಣಕ್ಕೆ ಏನೂ ಹೇಳಲು ಸಾಧ್ಯವಿಲ್ಲ. ಮತ್ತೆ ಗೆಲ್ಲಬಹುದಲ್ಲ!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.