ದಳಪತಿ ವಿಜಯ್ ಪತ್ನಿ ಲಂಡನ್‌ನಲ್ಲಿ ಇರೋದಕ್ಕೆ ಕಾರಣವೇನು?
ತಮಿಳು ಚಿತ್ರರಂಗದ ತಾರೆ ವಿಜಯ್ ಅವರ ಪತ್ನಿ ಸಂಗೀತಾ ಬಗ್ಗೆ ಕೆಲವು ಆಸಕ್ತಿದಾಯಕ ಮಾಹಿತಿಗಳು. ಲಂಡನ್ನಿನಲ್ಲಿ ಜನಿಸಿದ ಸಂಗೀತಾ, ವಿಜಯ್ ಅವರ ಅಭಿಮಾನಿಯಾಗಿದ್ದರು ಮತ್ತು ನಂತರ ಅವರನ್ನು ವಿವಾಹವಾದರು. ಪ್ರಸ್ತುತ ಲಂಡನ್ನಿನಲ್ಲಿ ವಾಸಿಸುತ್ತಿರುವ ಸಂಗೀತಾ, ತಮ್ಮ ಮಗಳ ಶಿಕ್ಷಣಕ್ಕಾಗಿ ಅಲ್ಲಿಗೆ ಹೋಗಿದ್ದಾರೆ.

ತಮಿಳು ಚಿತ್ರರಂಗದ ನಟ ವಿಜಯ್ ಅವರ ಪತ್ನಿ ಸಂಗೀತಾ ಬಗ್ಗೆ ಕೆಲವು ಆಸಕ್ತಿದಾಯಕ ಮಾಹಿತಿಗಳು ಇಲ್ಲಿವೆ. ಕಳೆದ ಕೆಲವೊಂದು ವರ್ಷಗಳಿಂದ ಇವರ ದಾಂಪತ್ಯ ಮಾಧ್ಯಮಗಳಲ್ಲಿ ಸುದ್ದಿಯಾಗುತ್ತಲೇ ಇದೆ.
1972 ರ ಏಪ್ರಿಲ್ 14 ರಂದು ಲಂಡನ್ನಿನಲ್ಲಿ ಜನಿಸಿದ ಸಂಗೀತಾ, ವಲಸೆ ಬಂದ ಶ್ರೀಲಂಕಾ ತಮಿಳು ಕುಟುಂಬಕ್ಕೆ ಸೇರಿದವರು. 'ಪೂವೆ ಉನಕ್ಕಾಗ' ಚಿತ್ರ ನೋಡಿ ವಿಜಯ್ ಅಭಿಮಾನಿಯಾದ ಸಂಗೀತಾ, ಅವರನ್ನು ಭೇಟಿಯಾಗಲು ಲಂಡನ್ನಿನಿಂದ ಚೆನ್ನೈಗೆ ಬಂದಿದ್ದರು.
ವಿಜಯ್ ಮತ್ತು ಸಂಗೀತಾ ದಂಪತಿಗೆ ಜೇಸನ್ ಸಂಜಯ್ ಎಂಬ ಮಗ ಮತ್ತು ದಿಯಾ ಶಾಶಾ ಎಂಬ ಮಗಳು ಇದ್ದಾರೆ. ಜೇಸನ್ ಸಂಜಯ್ ನಿರ್ದೇಶಕರಾಗಿ ಪಾದಾರ್ಪಣೆ ಮಾಡಲಿದ್ದಾರೆ.
ವಿಜಯ್ ಗಿಂತ ಸಂಗೀತಾಗೆ ತಮಿಳು ಚಿತ್ರರಂಗದಲ್ಲಿ ಹೆಚ್ಚು ಸ್ನೇಹಿತರಿದ್ದಾರೆ. ಶಾಲಿನಿ, ಶಂಕರ್ ಪತ್ನಿ, ಹ್ಯಾರಿಸ್ ಜಯರಾಜ್ ಪತ್ನಿ, ಜಯಂ ರವಿ ಪತ್ನಿ ಆರತಿ ಮುಂತಾದವರು ಸಂಗೀತಾಳ ಆಪ್ತರು.
ಕಿರುತೆರೆ ಮೇಕಪ್ ಆರ್ಟಿಸ್ಟ್ ಮದುವೆಯಾದ ಖ್ಯಾತ ನಟ ಕಾರ್ತಿಕ್; ಹೆಂಡತಿ ಸೀಮಂತ ಫೋಟೋ ವೈರಲ್!
ಮಗಳ ಶಿಕ್ಷಣಕ್ಕಾಗಿ ಸಂಗೀತಾ ಲಂಡನ್ನಿನಲ್ಲಿ ವಾಸಿಸುತ್ತಿದ್ದಾರೆ ಎನ್ನಲಾಗಿದೆ. ತಂದೆಯ ವ್ಯವಹಾರವನ್ನೂ ನೋಡಿಕೊಳ್ಳುತ್ತಿರುವ ಸಂಗೀತಾ, ಚೆನ್ನೈಗೂ ಆಗಾಗ ಭೇಟಿ ನೀಡುತ್ತಾರಂತೆ.
ಸಿನಿಮಾ ಸೋಲು, ಡಿವೋರ್ಸ್ ಬಳಿಕ ಹಿಮಾಲಯಕ್ಕೆ ಹೋಗಿ ನೆಲೆಸಲು ಮುಂದಾದ ನಟ