ಫ್ಯಾಮಿಲಿ ಮೇಲೆ ಇಂಟ್ರಸ್ಟ್ ಕಳೆದುಕೊಂಡ ವಿಜಯ್; ಶಾಲಿನಿ ಅಜಿತ್ ಮೀಟ್ ಆದ ದಳಪತಿ ಪತ್ನಿ!
ದಳಪತಿ ವಿಜಯ್ ಅವರ ಪತ್ನಿ ಸಂಗೀತಾ ಮತ್ತು ಥಲಾ ಅಜಿತ್ ಪತ್ನಿ ಶಾಲಿನಿ ಇತ್ತೀಚೆಗೆ ಭೇಟಿಯಾಗಿ ಮಾತನಾಡಿದ್ದಾರೆ. ಈ ಭೇಟಿಯ ಹಿಂದಿನ ಕಾರಣ ಏನಿರಬಹುದು ಎನ್ನುವ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ವಿಜಯ್ ಪತ್ನಿ ಸಂಗೀತಾ
ದಳಪತಿ ವಿಜಯ್ ಮತ್ತು ಸಂಗೀತಾ ಬೇರೆ ಬೇರೆಯಾಗಿ ವಾಸಿಸುತ್ತಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದ್ದರೂ, ಅದರ ನಿಜಾಂಶ ಏನೆಂಬುದು ಇನ್ನೂ ನಿಗೂಢವಾಗಿಯೇ ಉಳಿದಿದೆ. ವಿಜಯ್ ಜೊತೆಗಿನ ಮನಸ್ತಾಪದಿಂದಲೇ ಸಂಗೀತಾ ಚೆನ್ನೈಗೆ ಬರುವುದಿಲ್ಲ ಎನ್ನಲಾಗಿತ್ತು. ಆದರೆ, ಕಳೆದ ತಿಂಗಳು ಮುರಸೊಲಿ ಸೆಲ್ವಂ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲು ಸಂಗೀತಾ ಗೋಪಾಲಪುರಂಗೆ ಬಂದಿದ್ದರು. ಇದನ್ನು ನೋಡಿದ ವಿಜಯ್ ಅಭಿಮಾನಿಗಳು, ಸಂಗೀತಾ ವಿಜಯ್ ಜೊತೆ ಚೆನ್ನೈನಲ್ಲೇ ವಾಸಿಸುತ್ತಿದ್ದಾರೆ, ವಿಚ್ಛೇದನದ ಸುದ್ದಿ ಸುಳ್ಳು ಎಂದಿದ್ದರು.
ವಿಜಯ್ ಮತ್ತು ಸಂಗೀತಾ ವಿಚ್ಛೇದನ
ಆದರೆ, ಕಳೆದ ಎರಡು ವರ್ಷಗಳಿಂದ ವಿಜಯ್ ಯಾವುದೇ ಕಾರ್ಯಕ್ರಮಗಳಲ್ಲಿ ಸಂಗೀತಾ ಜೊತೆ ಕಾಣಿಸಿಕೊಂಡಿಲ್ಲ. ಹೀಗಾಗಿ ಇಬ್ಬರ ನಡುವೆ ಮನಸ್ತಾಪ ಇದೆ ಎನ್ನಲಾಗುತ್ತಿದೆ. ನಟನೆಯ ಜೊತೆಗೆ 'ದಳಪತಿ ವಿಜಯ್ ಮಕ್ಕಳ್ ಇಯಕ್ಕಂ' ಪಕ್ಷವನ್ನು ಆರಂಭಿಸಿ ರಾಜಕೀಯದಲ್ಲಿ ಸಕ್ರಿಯರಾಗಿದ್ದಾರೆ. ವಿಜಯ್, ತಮ್ಮ 69ನೇ ಚಿತ್ರ ಕೊನೆಯ ಚಿತ್ರ ಎಂದು ಅಧಿಕೃತವಾಗಿ ಘೋಷಿಸಿದ್ದಾರೆ. ಕಳೆದ ತಿಂಗಳು ತಮ್ಮ ಮೊದಲ ರಾಜಕೀಯ ಸಮಾವೇಶವನ್ನು ಯಶಸ್ವಿಯಾಗಿ ನಡೆಸಿದ್ದಾರೆ.
ಶಾಲಿನಿ ಅಜಿತ್ ಮತ್ತು ಸಂಗೀತಾ ಭೇಟಿ
ಶೀಘ್ರದಲ್ಲೇ ಎರಡನೇ ರಾಜಕೀಯ ಸಮಾವೇಶ ನಡೆಸಲು ತಯಾರಿ ನಡೆಸುತ್ತಿರುವ ವಿಜಯ್, ಕುಟುಂಬಕ್ಕಿಂತ ರಾಜಕೀಯದ ಮೇಲೆ ಹೆಚ್ಚು ಆಸಕ್ತಿ ತೋರುತ್ತಿದ್ದಾರೆ. ಮಗ ಜೇಸನ್ ಸಂಜಯ್ ಚಿತ್ರ ನಿರ್ದೇಶಿಸುತ್ತಿರುವ ವಿಚಾರ ಕೂಡಾ, ಅದರ ಅಧಿಕೃತ ಘೋಷಣೆಯ ನಂತರವೇ ವಿಜಯ್ಗೆ ತಿಳಿದುಬಂದಿದೆ ಎನ್ನಲಾಗಿದೆ.
ಮಗ ಸಿನಿಮಾ ಕ್ಷೇತ್ರದಲ್ಲಿ ಆಸಕ್ತಿ ತೋರಿಸುತ್ತಿದ್ದರೂ, ವಿಜಯ್ ಅದನ್ನು ಲೆಕ್ಕಿಸದಿರುವುದು ವಿಶೇಷ. ಅಮ್ಮ ಸಂಗೀತಾ ಅವರೇ ಮಗನ ಆಸೆ ಈಡೇರಿಸಲು ಶ್ರಮಿಸುತ್ತಿದ್ದಾರೆ. ಈ ನಡುವೆ ವಿಜಯ್ ಮಗ ಜೇಸನ್ ಸಂಜಯ್ ಆಸೆಯನ್ನು ಅರ್ಥಮಾಡಿಕೊಂಡು ಶಾಲಿನಿ ಅಜಿತ್ ಸಹಾಯ ಹಸ್ತ ಚಾಚಿದ್ದಾರೆ.
ಜೇಸನ್ ಸಂಜಯ್ ಮೊದಲ ಸಿನಿಮಾ
ಅಜಿತ್ ಮ್ಯಾನೇಜರ್ ಸುರೇಶ್ ಚಂದ್ರ, ಜೇಸನ್ ಸಂಜಯ್ಗೆ ಮಾಧ್ಯಮ ಸಂಪರ್ಕ ವ್ಯಕ್ತಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಶಾಲಿನಿ ಶಿಫಾರಸಿನ ಮೇರೆಗೆ ಲೈಕಾ ಪ್ರೊಡಕ್ಷನ್ಸ್ ಜೇಸನ್ ಸಂಜಯ್ ಚಿತ್ರ ನಿರ್ಮಿಸಲು ಒಪ್ಪಿಕೊಂಡಿದೆ. ಸಂದೀಪ್ ಕಿಶನ್ ನಾಯಕನಾಗಿ ನಟಿಸುತ್ತಿರುವ ಸಿನಿಮಾದ ಚಿತ್ರೀಕರಣ ಬಿಡುವಿಲ್ಲದೆ ನಡೆಯುತ್ತಿದೆ ಎನ್ನಲಾಗಿದೆ.
ಇದನ್ನೂ ಓದಿ: ಒರಿಜಿನಲ್ ಚಾಯ್ಸ್ ವಿಸ್ಕಿ ಮಾಲೀಕರಿಂದ ಕರ್ನಾಟಕದಲ್ಲಿ 600 ಕೋಟಿ ವೆಚ್ಚದ ಹೊಸ ಪ್ಲ್ಯಾಂಟ್!
ಶಾಲಿನಿ ಅಜಿತ್ ಸಹಾಯ
ಶಾಲಿನಿ ಶಿಫಾರಸಿನಿಂದಲೇ ಅಜಿತ್ ಮ್ಯಾನೇಜರ್ ಸುರೇಶ್ ಚಂದ್ರ, ಸಂಜಯ್ಗೆ ಮಾಧ್ಯಮ ಸಂಪರ್ಕ ವ್ಯಕ್ತಿಯಾಗಿ ಕೆಲಸ ಮಾಡುತ್ತಿದ್ದಾರಂತೆ. ಶಾಲಿನಿ ಮತ್ತು ಸಂಗೀತಾ ನಡುವಿನ ದೀರ್ಘಕಾಲದ ಸ್ನೇಹದಿಂದಲೇ ಶಾಲಿನಿ ಈ ಸಹಾಯ ಮಾಡಿದ್ದಾರೆ. ಈ ನಡುವೆ ಇಬ್ಬರೂ ಭೇಟಿಯಾಗಿ ಮಾತನಾಡಿದ್ದಾರೆ ಎನ್ನಲಾಗಿದೆ. ಈ ಭೇಟಿಯಲ್ಲಿ ಏನು ಮಾತನಾಡಿದರು ಎಂಬುದು ತಿಳಿದುಬಂದಿಲ್ಲವಾದರೂ, ಇವರಿಬ್ಬರ ಸ್ನೇಹ ಅಜಿತ್ ಮತ್ತು ವಿಜಯ್ ಅಭಿಮಾನಿಗಳಲ್ಲಿ ಭಾವುಕತೆ ಮೂಡಿಸಿದೆ.
ಇದನ್ನೂ ಓದಿ: ವಿಸ್ಕಿ ವರ್ಲ್ಡ್ ಅವಾರ್ಡ್‌ನಲ್ಲಿ ಚಿನ್ನ ಗೆದ್ದ Indri Diwali Collector Edition 2024 ಭಾರತದಲ್ಲಿ ರಿಲೀಸ್, ಬೆಲೆ ಎಷ್ಟು?