- Home
- Entertainment
- News
- ರಜನಿಕಾಂತ್ ಶಾರುಖ್ ಖಾನ್, ಟಾಮ್ ಕ್ರೂಸ್‌ಗಿಂತ ಅಧಿಕ ವೇತನ, ಈತ ವಿಶ್ವದ ಅತ್ಯಂತ ಶ್ರೀಮಂತ ಕಾಮೆಡಿಯನ್!
ರಜನಿಕಾಂತ್ ಶಾರುಖ್ ಖಾನ್, ಟಾಮ್ ಕ್ರೂಸ್‌ಗಿಂತ ಅಧಿಕ ವೇತನ, ಈತ ವಿಶ್ವದ ಅತ್ಯಂತ ಶ್ರೀಮಂತ ಕಾಮೆಡಿಯನ್!
ಇವನೇ ಪ್ರಪಂಚದಲ್ಲೇ ಅತಿ ಹೆಚ್ಚು ದುಡ್ಡು ಮಾಡೋ ಹಾಸ್ಯನಟ. ಶಾರುಖ್, ಸಲ್ಮಾನ್, ಅಮಿತಾಬ್ ಬಚ್ಚನ್, ರಜನಿಕಾಂತ್ ಗಿಂತಾನೂ ಜಾಸ್ತಿ ಸಂಪಾದನೆ ಮಾಡ್ತಾನೆ. ಯಾರಿರಬಹುದು ಅನ್ನೋದು ಗೊತ್ತಾ?

ಈ ತಿಂಗಳ ಆರಂಭದಲ್ಲಿ, ಫೋರ್ಬ್ಸ್ ಮ್ಯಾಗಝೀನ್ ಅತಿ ಹೆಚ್ಚು ಸಂಭಾವನೆ ಪಡೆಯುವ ನಟರ ವಾರ್ಷಿಕ ಪಟ್ಟಿಯನ್ನು ಬಿಡುಗಡೆ ಮಾಡಿತು. ಡ್ವೇನ್ ಜಾನ್ಸನ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ.
ಈ ಪಟ್ಟಿಯಲ್ಲಿ ಮತ್ತೊಬ್ಬ ವ್ಯಕ್ತಿಯ ಹೆಸರು ಕುತೂಹಲ ಮೂಡಿಸಿದೆ. ಅವರು ಹಾಸ್ಯನಟ. ವಿಶ್ವದ ಅತಿ ಹೆಚ್ಚು ಆಸ್ತಿ ಹೊಂದಿರುವ ನಟ. ಶಾರುಖ್ ಖಾನ್ ಸಲ್ಮಾನ್ ಖಾನ್ ಗಿಂತ ಹೆಚ್ಚು ಹಣ ಸಂಪಾದಿಸುತ್ತಾರೆ.
ಅವರು ಕೆವಿನ್ ಹಾರ್ಟ್. ಅವರು ಫೋರ್ಬ್ಸ್ ಪಟ್ಟಿಯಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟರಲ್ಲಿ ಒಬ್ಬರು, ಟಾಮ್ ಕ್ರೂಸ್ ಮತ್ತು ಹಗ್ ಜ್ಯಾಕ್‌ಮನ್‌ಗಿಂತ ಮುಂದಿದ್ದಾರೆ.
ಕೆವಿನ್ ಹಾರ್ಟ್ ಸುಮಾರು $81 ಮಿಲಿಯನ್ ($7,00,95,33,830) ಸಂಪಾದನೆ ಗಳಿಸಿದ್ದಾರೆ. ಅವರ ನಂತರ ಡ್ವೇನ್ ಜಾನ್ಸನ್ ಮತ್ತು ರಯಾನ್ ರೆನಾಲ್ಡ್ಸ್ ಇದ್ದಾರೆ.
ಕಳೆದ ವರ್ಷ ಕೆವಿನ್ ಹಾರ್ಟ್ ಬಹಳ ಯಶಸ್ವಿ ನಟ ಎನಿಸಿದ್ದರು. ಅವರು ಟಾಮ್ ಕ್ರೂಸ್, ಹಗ್ ಜ್ಯಾಕ್‌ಮನ್, ಬ್ರಾಡ್ ಪಿಟ್ ಮತ್ತು ಜಾರ್ಜ್ ಕ್ಲೂನಿಗಿಂತ ಹೆಚ್ಚು ಹಣ ಸಂಪಾದನೆ ಮಾಡಿದ್ದಾರೆ.
ಕೆವಿನ್ ಹಾರ್ಟ್ ಲಕ್ಷಾಂತರ ಗಳಿಸಿದ್ದು ಹೇಗೆ ಅನ್ನೋದನ್ನ ನೋಡೋದಾದರೆ, ಕೆವಿನ್ ಹಾರ್ಟ್‌ಗೆ ಸೂಪರ್ ಹಿಟ್ ಚಲನಚಿತ್ರಗಳೇ ಹಣದ ಹೊಳೆ ಹರಿಸಿದೆ. ಅವರ ಯಶಸ್ಸು ಬಾರ್ಡರ್‌ಲ್ಯಾಂಡ್ಸ್‌ನಿಂದ ಪ್ರಾರಂಭವಾಯಿತು.
ಅವರು ನೆಟ್‌ಫ್ಲಿಕ್ಸ್ ಸರಣಿ ಲಿಫ್ಟ್ ಮತ್ತು ಟಾಮ್ ಬ್ರಾಡಿ ಮತ್ತು ಅಮೆಜಾನ್ ಪ್ರೈಮ್ ವೀಡಿಯೊ ಸರಣಿ ಡೈ ಹಾರ್ಡ್ 2 ಮತ್ತು ಡೈ ಹಾರ್ಡರ್‌ನಲ್ಲಿ ನಟಿಸಿದ್ದಾರೆ. ಅವರು ಗೋಲ್ಡ್‌ಮೈಂಡ್ಸ್ ಕಾರ್ಯಕ್ರಮವನ್ನು ಸಹ ನಿರ್ಮಿಸಿದ್ದಾರೆ.
ಬೆಟ್ಟಿಂಗ್ ಆ್ಯಪ್ ಕೇಸ್, ಪ್ರಣೀತಾ, ಶೋಭಾ ಶೆಟ್ಟಿ ಸೇರಿ ಕನ್ನಡದ ಯಾರೆಲ್ಲ ಇದ್ದಾರೆ? ಕರ್ನಾಟಕದಲ್ಲಿ ಕ್ರಮ ಯಾವಾಗ?
ಅವರು ಸುಮಾರು 90 ಸ್ಟ್ಯಾಂಡ್-ಅಪ್ ಹಾಸ್ಯ ಕಾರ್ಯಕ್ರಮಗಳನ್ನು ಮಾಡಿದ್ದಾರೆ. ಜಾಹೀರಾತು ಮತ್ತು ಮನರಂಜನೆಯ ಮೂಲಕ ಅವರು 81 ಮಿಲಿಯನ್ ಡಾಲರ್ ಗಳಿಸಿದ್ದಾರೆ. ಅದಕ್ಕಾಗಿಯೇ ಅವರು ವಿಶ್ವದ ಶ್ರೀಮಂತ ನಟರ ಪೈಕಿ ಒಬ್ಬರೆನಿಸಿದ್ದಾರೆ.
ಪುನೀತ್ ರಾಜ್‌ಕುಮಾರ್ ಬಳಸುತ್ತಿದ್ದ ದುಬಾರಿ ಸೈಕಲ್‌ನ ಆಂಕರ್ ಅನುಶ್ರೀಗೆ ಗಿಫ್ಟ್ ಕೊಟ್ಟ ಅಶ್ವಿನಿ!