18ರ ಹರೆಯದಲ್ಲಿ ಭುವನ ಸುಂದರಿ: ಒಂದು ಪ್ರಶ್ನೆಗೆ ಉತ್ತರಿಸಿ ಐಶ್ ಸೋಲಿಸಿದ್ದ ಸುಶ್ಮಿತಾ!

First Published 21, May 2020, 6:26 PM

ಸುಶ್ಮಿತಾ ಸೇನ್‌ಗೆ ಇವತ್ತಿನ ದಿನ ಬಹಳ ವಿಶೇಷ. ಯಾಕೆಂದರೆ ಮೇ. 21 ರಂದು ಅವರು ಮಿಸ್ ಯೂನಿವರ್ಸ್ ಪಟ್ಟ ತಮ್ಮದಾಗಿಸಿಕೊಂಡಿದ್ದರು. ಈ ಮೂಲಕ ಭಾರತದ ಹೆಸರು ಇಡೀ ವಿಶ್ವದಲ್ಲೇ ಬೆಳಗುವಂತೆ ಮಾಡಿದ್ದರು. ಅವರು ಈ ಪಟ್ಟವನ್ನು 1994ರಲ್ಲಿ ಗೆದ್ದಿದ್ದರು. ಈ ಪಟ್ಟ ಅವರು ತಮ್ಮ ಹೆಸರಿಗೆ ಮಾಡಿ ಬರೋಬ್ಬರಿ 26 ವರ್ಷಗಳಾಗಿವೆ. ಸುಶ್ಮಿತಾ ಸೇನ್ ಮಿಸ್ ಯೂನಿವರ್ಸ್ ಕಿರೀಟ ತೊಟ್ಟ ಮೊದಲ ಭಾರತೀಯರಾಗಿದ್ದರು.

ಭುವನ ಸುಂದರಿ ರೇಸ್‌ನಲ್ಲಿ ಸುಶ್ಮಿತಾ ಸೇನ್‌ ಐಶ್ವರ್ಯಾ ರೈಯನ್ನು ಸೋಲಿಸಿ, ಈ ಪಟ್ಟವನ್ನು ತಮ್ಮದಾಗಿಸಿಕೊಂಡಿದ್ದರು. ವಾಸ್ತವವಾಗಿ ಈ ಸ್ಪರ್ಧೆಯ ಕೊನೆಯ ಹಂತದಲ್ಲಿ ಸುಶ್ಮಿತಾಗೆ ಎದುರಾಳಿಯಾಗಿ ಸಿಕ್ಕಿದ್ದು ಐಶ್ವರ್ಯಾ ರೈ. ಆದರೆ ಈ ವೇಳೆ ಇಬ್ಬರಿಗೂ ಸಾಮಾನ್ಯ ಪ್ರಶ್ನೆಯೊಂದನ್ನು ಕೇಳಲಾಗಿತ್ತು. ಇದಕ್ಕೆ ನೀಡಿದ್ದ ಉತ್ತರದಲ್ಲಿ ಸುಶ್ಮಿತಾ ತೀರ್ಪುಗಾರರ ಮನ ಗೆದ್ದಿದ್ದರು.

ಈ ಅಂತಿಮ ಸುತ್ತಿನಲ್ಲಿ ಒಂದು ವೇಳೆ ನೀವು ಯಾವುದಾದರೂ ಐತಿಹಾಸಿಕ ಘಟನೆಯನ್ನು ಬದಲಾಯಿಸಲು ಸಾಧ್ಯವಾದರೆ ಅದು ಏನಾಗಿರುತ್ತದೆ? ಎಂದು ಕೇಳಲಾಗಿತ್ತು. ಈ ವೇಳೆ ಐಶ್ವರ್ಯಾ ತಾನು ಹುಟ್ಟಿದ ದಿನಾಂಕ ಎಂದಿದ್ದರೆ, ಸುಶ್ಮಿತಾ ಸೇನ್ ಇಂಧಿರಾ ಗಾಂಧಿಯವರ ಮೃತ್ಯು ಎಂದಿದ್ದರು.

ಇಷ್ಟೇ ಅಲ್ಲದೇ ಸುಶ್ಮಿತಾರಿಗೆ ಮತ್ತೊಂದು ಪ್ರಶ್ನೆ ಎಸೆದಿದ್ದ ತೀರ್ಪುಗಾರರು ನಿಮ್ಮ ಬಳಿ ಹಣ ಹಾಗೂ ಸಮಯ ಇದ್ದರೆ, ನೀವು ಯಾವ ಕೆಲಸ ಮಾಡಲು ಇಚ್ಛಿಸುತ್ತೀರಿ ಎಂದು ಕೇಳಲಾಗಿತ್ತು. ಇದಕ್ಕೆ ಉತ್ತರಿಸಿದ್ದ ಸುಶ್ಮಿತಾ ನನ್ನ ಪ್ರಕಾರ ಮನಃ ಪೂರ್ವಕವಾಗಿ ಮನಸ್ಸಿನಿಂದ ಮಾಡಲಿಚ್ಛಿಸುವ ಕೆಲಸವೇ ನನ್ನ ಪ್ರಕಾರ ಅಡ್ವೆಂಚರ್. ನನಗೆ ಮಕ್ಕಳೊಂದಿಗೆ ಸಮಯ ಕಳೆಯುವುದೆಂದರೆ ಬಹಳ ಇಷ್ಟ. ಸಮಯ ಸಿಕ್ಕರೆ ಅವರೊಂದಿಗೆ ಸಮಯ ಕಳೆಯುತ್ತೇನೆ. ಇದೇ ನನ್ನ ಪಾಲಿಗೆ ಅಡ್ವೆಂಚರ್ ಎಂದಿದ್ದರು.

ಸದ್ಯ ಸುಶ್ಮಿತಾರಿಗೆ ಭುವನ ಸುಂದರಿಯಾದ 26 ವರ್ಷದ ಈ ಸಂದರ್ಭದಲ್ಲಿ ಸೋಶಿಯಲ್ ಮೀಡಿಯಾ ಮೂಲಕ ಶುಭ ಕೋರುತ್ತಿದ್ದಾರೆ. ಹೀಗಿರುವಾಗ ಅವರ ಬಾಯ್‌ ಫ್ರೆಂಡ್ ರೋಹ್ಮನ್ ಶಾಲ್‌ ಕೂಡಾ ಅವರಿಗೆ ವಿಭಿನ್ನವಾಗಿ ವಿಶ್ ಮಾಡಿದ್ದಾರೆ.

ರೋಹ್ಮನ್ ಶಾಲ್ ತನ್ನ ವೈಯುಕ್ತಿಕ ಇನ್ಸ್ಟಾಗ್ರಾಂ ಅಕೌಂಟ್‌ನಲ್ಲಿ ಸುಶ್ಮಿತಾರ ಫೋಟೋ ಶೇರ್ ಮಾಡಿದ್ದಾರೆ. ಇದು ಸುಶ್ಮಿತಾ ಸೇನ್ ಮಿಸ್ ಯೂನಿವರ್ಸ್ ಆದಾಗ ತೆಗೆದ ಫೋಟೋ ಆಗಿದೆ. ಇಲ್ಲಿ ಸುಶ್ಮಿತಾ ಭುವನ ಸುಂದರಿ ಕಿರೀಟ ಧರಿಸಿ ಕುಳಿತಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ಸುಶ್ಮಿತಾ ಫೋಟೋ ಶೇರ್ ಮಾಡಿಕೊಂಡಿರುವ ರೋಹ್ಮನ್ ಈ ವಿಶೇಷ ದಿನದಂದು ನಿಮಗೆ ಶುಭಾಶಯ. ನನಗೆ ನಿಮ್ಮ ಬಗ್ಗೆ ಹೆಮ್ಮೆ ಇದೆ ಎಂದು ಬರೆದಿದ್ದಾರೆ.

ಸುಶ್ಮಿತಾ ಸೇನ್ ಇತ್ತೀಚೆಗೆ ತಮ್ಮ ವೈಯುಕ್ತಿಕ ಜೀವನಕ್ಕೆ ಸಂಬಂಧಿಸಿದಂತೆ ಭಾರೀ ಚರ್ಚೆಯಾಗುತ್ತಿದ್ದಾರೆ. ಮಾಧ್ಯಮಗಳಲ್ಲಿ ಸುಶ್ಮಿತಾ ಹಾಗೂ ರೋಹ್ಮನ್ ಪರಸ್ಪರ ಡೇಟೀಮಗ್ ನಡೆಸುತ್ತಿದ್ದಾರೆಂಬ ಸುದ್ದಿಗಳೂ ಹರಿದಾಡುತ್ತಿವೆ. ಅಲ್ಲದೇ ಶೀಘ್ರದಲ್ಲಿ ಇಬ್ಬರೂ ಮದುವೆಯಾಗುವ ಮಾತುಗಳೂ ಕೇಳಿ ಬಂದಿವೆ. ಇಬ್ಬರೂ ಒಟ್ಟಿಗೆ ಸಮಯ ಕಳೆಯುತ್ತಿರುವ ಫೋಟೋ ಹಾಗೂ ವಿಡಿಯೋಗಳು ಬಾರೀ ವೈರಲ್ ಆಗುತ್ತಿವೆ.

loader